ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಏರ್ಪಡಸಿದ್ದ ರಕ್ತದಾನ ಶಿಬಿರವನ್ನು ಗ್ರಾಪಂ ಅಧ್ಯಕ್ಷೆ ಈರಮ್ಮ ಪೂಜಾರಿ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ರೇವಣಸಿದ್ದ ಕೋರಿ, ಸಿಎಚ್‌ಒ ಬಾಲಕೃಷ್ಣ, ಪಿಎಚ್‌ಸಿಒ ಚಾಂದ್‌ಬೀ, ಆಶಾ, ನಾಗರತ್ನಾ ಇದ್ದಾರೆ. 
ಜಿಲ್ಲೆ

ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಿ

ಕಂಪ್ಲಿ: ರಕ್ತದಾನ ಮಾಡಲು ಯುವಜನತೆ ಮುಂದಾಗಬೇಕು. ರಕ್ತದಾನಿಗಳು ಆರೋಗ್ಯದ ಕಡೆ ಕಾಳಜಿ ತೋರಬೇಕು ಎಂದು ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇವಣಸಿದ್ದ ಕೋರಿ ಹೇಳಿದರು.

ತಾಲೂಕಿನ ಜವುಕು ಮತ್ತು ದೇವಲಾಪುರ ಗ್ರಾಮಗಳಲ್ಲಿ ಶುಕ್ರವಾರ ಆಯುಷ್ಮಾನ್ ಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಗಳಿಗೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನಿಗಳು ವ್ಯಸನ ಮತ್ತು ದುಶ್ಚಟಮುಕ್ತರಾಗಬೇಕು. ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು ಎಂದರು.
ದೇವಲಾಪುರದಲ್ಲಿ 92 ಹಾಗೂ ಜವುಕು ಗ್ರಾಮದಲ್ಲಿ 93 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಆರೋಗ್ಯ ಸಿಬ್ಬಂದಿ ಆರ್.ಭರತಕುಮಾರ್, ಮಲ್ಲಿಕಾರ್ಜುನ, ಎರ‌್ರಿಸ್ವಾಮಿ ಇದ್ದರು.