ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಗಣಪತಿ ನಾಯ್ಕ ಉದ್ಘಾಟಿಸಿದರು. ಶ್ರೀನಿವಾಸ್, ಚಂದ್ರಶೇಖರ್, ಡಾ.ಅನುಪಮಾ ಇದ್ದರು. 
ಜಿಲ್ಲೆ

ಯೋಗದಿಂದ ಉತ್ತಮ ಆರೋಗ್ಯ

ಎಸ್.ಎನ್.ರವೀಂದ್ರ

ಶೃಂಗೇರಿ: ಪ್ರತಿ ದಿನವೂ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕೆರೆಕಟ್ಟೆ ವಲಯಾರಣ್ಯಧಿಕಾರಿ ಪ್ರಶಾಂತ್ ಗಣಪತಿ ನಾಯ್ಕ ಹೇಳಿದರು.

ಕೆರೆಕಟ್ಟೆಯಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ, ಯೋಗವನ್ನು ಪ್ರತಿ ದಿನವೂ ಮಾಡಿ ಕಾಯಿಲೆಯಿಂದ ದೂರವಾಗಬಹುದು ಎಂದರು. ಎಎನ್‌ಎಫ್ ಕ್ಯಾಂಪ್ ಉಸ್ತುವಾರಿ ಅಧಿಕಾರಿ ನಿಂಗಣ್ಣ ಪಾಟೀಲ್ ಮಾತನಾಡಿ, ಯೋಗವನ್ನು ದಿನಚರಿಯಾಗಿ ಅಭ್ಯಾಸ ಮಾಡುವುದರಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ಕೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಡಾ. ಅನುಪಮಾ, ಡಾ. ಶೋಭಿತ್, ಡಾ. ರೂಪಾ, ಚಂದ್ರಶೇಖರ್ ಇದ್ದರು.