ಬೆಳಗಾವಿ: ವಿದ್ಯಾರ್ಥಿಗಳು ಪದವಿ ಶಿಣದ ಜತೆಗೆ ವ್ಯಕ್ತಿತ್ವ ವಿಕಸನ ಮಾಡಿಕೊಂಡಲ್ಲಿ ಉತ್ತಮ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ರಾಷ್ಟ್ರೀಯ ವಿಧಿ ವಿಾನ ವಿಶ್ವವಿದ್ಯಾಲಯದ ಧಾರವಾಡ ಕ್ಯಾಂಪಸ್ ನಿರ್ದೇಶಕ ಪ್ರೊ.ಮಂಜುನಾಥ ಘಾಟೆ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯದಲ್ಲಿ ಜು.8ರಿಂದ 12ರ ವರೆಗೆ ವಿವಿಧ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಐದು ದಿನದ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಕಲಿಕೆ, ವೈಯಕ್ತಿಕ ಬೆಳವಣಿಗೆ ಮತ್ತು ಕೌಶಲ ಅಭಿವೃದ್ಧಿ ನಿರ್ಣಾಯಕ ಹಂತವಾಗಿದ್ದು, ಯಶಸ್ಸಿಗೆ ಅಡಿಪಾಯ ಹಾಕುತ್ತದೆ. ಜತೆಗೆ ಗಟ್ಟಿಯಾದ ವ್ಯಕ್ತಿತ್ವ ರೂಪಿಸುತ್ತದೆ. ವಿದ್ಯಾರ್ಥಿಗಳು ಶೈಣಿಕ ಚಟುವಟಿಕೆ, ಸಾಮಾಜಿಕ ಸಂವಹನ ಮತ್ತು ಹೊಸ ಅನುಭವಗಳ ಅನ್ವೇಷಣೆಯತ್ತ ಗಮನಹರಿಸಬೇಕು ಎಂದರು.
ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಂ.ಜಿ.ಹೆಗಡೆ ಮಾತನಾಡಿ, ಪದವಿ ಹಂತದಲ್ಲಿ ಪಡೆದುಕೊಳ್ಳುವ ಶಿಣ ಜತೆಗೆ ವ್ಯಕ್ತಿತ್ವ ವಿಕಸನವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಟ್ಟಿಯಾದ ಭೂಮಿಕೆ ಒದಗಿಸುತ್ತದೆ. ಸಂವಹನ, ಕೌಶಲಗಳು ಮತ್ತು ಭಾವನಾತ್ಮಕ ಯೋಗೇಮದಂತಹ ಅಗತ್ಯ ಕೌಶಲ ಕಲಿಯುವುದು ಅವಶ್ಯ ಎಂದರು.
ಅರ್ಥಶಾಸದ ಸಹ ಪ್ರಾಧ್ಯಾಪಕ ಡಾ.ಅರ್ಜುನ ಜಂಬಗಿ, ಬಿಎ, ಬಿಎಸ್ಸಿ, ಬಿಬಿಎ, ಬಿಕಾಂ, ಬಿಸಿಎ ಪ್ರಥಮ ವರ್ಷದ 652 ವಿದ್ಯಾರ್ಥಿಗಳು ಹಾಜರಿದ್ದರು. ಲಾವಣ್ಯ ಗುಂಜಾಳ ಪ್ರಾರ್ಥಿಸಿದರು. ಉಪನ್ಯಾಸಕಿ ಆಸ್ಮಾ ದಾದಿಬಾಯಿ ನಿರೂಪಿಸಿದರು. ಜಯಶ್ರೀ ಉಪರಿ ವಂದಿಸಿದರು.