ಜಿಲ್ಲೆ

ಬೇಟಿ ಬಚಾವ್​, ಬೇಟಿ ಪಡಾವೂ ಕಾರ್ಯಕ್ರಮ

ಕೊಪ್ಪಳ: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಗಿಣಿಗೇರಾ ಗ್ರಾಮದಲ್ಲಿ ಮಂಳವಾರ ಬೇಟಿ ಬಚಾವ್​ ಬೇಟಿ ಪಡವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ ಮಾತನಾಡಿ, ಲಿಂಗ ಸಮಾನತೆ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಷಣೆ ನಮ್ಮೆಲ್ಲರ ಹೊಣೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು, ಬಾಲ್ಯವಿವಾಹದಿಂದ ರಕ್ಷಣೆ, ಭ್ರೂಣ ಹತ್ಯೆ ತಡೆ, ಮಕ್ಕಳ ರಕ್ಷಣೆ ಪೋಷಕರ ಜವಾಬ್ದಾರಿ. ಇಲಾಖೆ ಯೋಜನೆಗಳಾದ ಪಿ.ಎಂ.ಎಂ.ವಿ.ವೈ, ಗೃಹಲಕ್ಷಿ$್ಮ, ಸ್ತ್ರೀ ಶಕ್ತಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳ ಅನುಕೂಲ ಪಡೆಯುವಂತೆ ತಿಳಿಸಿದರು.

ಬಾಲವಿಕಾಸ ಸಮಿತಿ ಅಧ್ಯೆ ಶ್ರೀದೇವಿ, ಎಸ್​.ಡಿ. ಎಂ.ಸಿ. ಉಪಾಧ್ಯೆ ಲಕ್ಷಿ$್ಮ ಗೊಡೆಕಾರ್​, ವಲಯ ಮೇಲ್ವಿಚಾರಕಿ ಗಾಯತ್ರಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಕಿಶೋರಿಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ಪೋಷಕರು ಇದ್ದರು.