ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಬೆಟಗೇರಿ ಕೃಷ್ಣಶರ್ಮರದ್ದು ವಿದ್ವತ್ರ್ಪೂಣ ವ್ಯಕ್ತಿತ್ವ. ಕನ್ನಡ ಹಾಗೂ ಕನ್ನಡತ್ವದ ಜಾಗೃತಿಗೆ ಸರ್ವಸ್ವವನ್ನು ಧಾರೆ ಎರೆದ ಅವರು ಒಂದು ರೀತಿ ಚಲಿಸುವ ಶಬ್ಧಕೋಶದಂತಿದ್ದರು ಎಂದು ಹಿರಿಯ ಸಾಹಿತಿ ಡಾ. ಬಾಳಣ್ಣಾ ಶೀಗಿಹಳ್ಳಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಡಾ. ಪಂ. ಅವಳೀಕರ ದತ್ತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೋಡಿ ಲಿಪಿ ತಜ್ಞ ಡಾ. ಎಂ.ವೈ. ಸಾವಂತ ಅವರಿಗೆ ಆನಂದ ಕಂದ&2024 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಡಾ. ಬೆಟಗೇರಿ ಕೃಷ್ಣಶರ್ಮರು ಬದುಕಿನ ಅನೇಕ ಬಿಕ್ಕಟ್ಟುಗಳನ್ನು ದಿಟ್ಟತನ ಹಾಗೂ ಸಂಕಲ್ಪ ಶಕ್ತಿಯಿಂದ ನಿವಾರಿಸಿದವರು. ಎಂದಿಗೂ ಬಡತನದ ವೈಭವವನ್ನು ಉಳಿದವರಂತೆ ದಾಖಲಿಸಲಿಲ್ಲ. ಆನಂದಕಂದರು ಶುದ್ಧ ಜಾನಪದ ಶೈಲಿಯ ಹಾಡುಗಾರರು. ಜಾನಪದವೇ ಅವರ ಕಾವ್ಯ ಶಕ್ತಿಗೆ ಜೀವಾಳವಾಗಿತ್ತು. ಅವರ ಕೃತಿ ನಲ್ವಾಡುಗಳು ಶುದ್ಧ ಜಾನಪದ ಶೈಲಿಯ ಆಡುನುಡಿಯಾಗಿದ್ದು ಸ್ಥಳಿಯತೆ ಒಳಗೊಂಡಿದೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ವೈ ಸಾವಂತ ಆನಂದಕಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಆನಂದಕಂದ ಪ್ರಶಸ್ತಿ ಲಭಿಸಿದ್ದು ಅಭಿನಂದನೀಯ. ಮೋಡಿ ಭಾಷೆಯಲ್ಲ. ಲಿಪಿ ಮಾತ್ರ. ಮರಾಠಾ ಪೇಶ್ವೆಗಳ ಕಾಲದಲ್ಲಿ ವ್ಯವಹಾರಿಕ ಲಿಪಿ ಆಗಿತ್ತು. ಮೋಡಿ ಲಿಪಿ ಜ್ಞಾನ ನನ್ನೊಬ್ಬನಿಗೆ ಸೀಮಿತ ಆಗದಿರಲಿ ಎಂಬುದಕ್ಕೆ ಅನೇಕ ವಿದ್ಯಾಥಿರ್ಗಳಿಗೆ, ವಕೀಲರಿಗೆ ತರಬೇತಿ ನೀಡಲಾಗಿದೆ ಎಂದರು.
ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಸತೀಶ ತುರಮರಿ, ಶ್ರೀನಿವಾಸ ವಾಡಪ್ಪಿ, ಸಿ.ಯು. ಬೆಳ್ಳಕ್ಕಿ, ಎಂ.ಎಂ. ಚಿಕ್ಕಮಠ, ಡಾ. ಅರವಿಂದ ಯಾಳಗಿ, ಶಿವಾನಂದ ಭಾವಿಕಟ್ಟಿ, ಶಶಿಧರ ತೋಡಕರ, ಮನೋಜ ಪಾಟೀಲ, ನಿಂಗಣ್ಣ ಕುಂಟಿ, ನಾಯ್ಕರಾಣೆ, ಡಾ. ವೈ.ಎ್. ಕಲ್ಲನಗೌಡ್ರ. ಶ್ರೀನಾಥ ಬೆಟಗೇರಿ, ಡಾ. ಬಾಳಪ್ಪಾ ಚಿನಗುಡಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.