ಬಿ.ವೈ.ರಾಘವೇಂದ್ರ ಸಪತ್ನೀಕರಾಗಿ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಎಸ್.ರುದ್ರೇಗೌಡ, ಆರತಿ ಪ್ರಕಾಶ್, ದತ್ತಾತ್ರಿ, ಬಳ್ಳೇಕೆರೆ ಸಂತೋಷ್, ವೆಂಕಟೇಶ್ ನಾಯ್ಡು, ಜ್ಯೋತಿ ಪ್ರಕಾಶ್ ಇತರರಿದ್ದರು. 
ಜಿಲ್ಲೆ

ಅಭಿಮಾನಿಗಳಿಂದ ಶುಭ ಹಾರೈಕೆ

Shivamogga - Desk - Megha MS

ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಜನ್ಮದಿನದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ವಿವಿಧೆಡೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಬಿವೈಆರ್ ಅಭಿಮಾನಿಗಳು, ಬಿಜೆಪಿ ಮುಖಂಡರು ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ತೀರ್ಥಹಳ್ಳಿಯಲ್ಲಿ ಬಿಜೆಪಿ ಮುಖಂಡರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಿದರು. ರವೀಂದ್ರ ನಗರ ಗಣಪತಿ ದೇವಾಲಯಕ್ಕೆ ಸಪತ್ನೀಕರಾಗಿ ಆಗಮಿಸಿದ ಬಿ.ವೈ.ರಾಘವೇಂದ್ರ ವಿಶೇಷ ಪೂಜೆಯಲ್ಲಿ ಭಾಗಿಯಾದರು. ದೇವಸ್ಥಾನದಲ್ಲಿ ಒಂದು ಕೋಟಿ ರುದ್ರಪಠಣ ಅಭಿಯಾನವೂ ನಡೆಯುತ್ತಿರುವುದರಿಂದ ರುದ್ರಪಠಣದಲ್ಲಿ ಭಾಗಿಯಾಗಿದ್ದ ಋತ್ವಿಜರು ಬಿವೈಆರ್ ದಂಪತಿಯನ್ನು ಆಶೀರ್ವದಿಸಿದರು. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ, ಬಳ್ಳೇಕೆರೆ ಸಂತೋಷ್, ರಾಜೇಶ್ ಕಾಮತ್, ವೆಂಕಟೇಶ್ ನಾಯ್ಡು, ಎಚ್.ಆರ್.ತೀರ್ಥೇಶ್, ದಿವಾಕರ ಶೆಟ್ಟಿ, ಅನಿತಾ ರವಿಶಂಕರ್, ಇ.ವಿಶ್ವಾಸ್, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.