ಮಂಡ್ಯ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ಸರ್ಕಾರಿ ಶಾಲೆಯ 33 ಶಿಕ್ಷಕರಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಕೆ.ಆರ್.ಪೇಟೆ ದೊದ್ದನಕಟ್ಟೆಯ ಎಚ್.ಎಸ್.ಉಷಾ, ನಗರೂರಿನ ಕೆ.ಎಚ್.ಕೃಷ್ಣೇಗೌಡ, ಮದ್ದೂರು ತಾಲೂಕು ಮಲ್ಲಯ್ಯನಗರದ ಬಿ.ಸಿ.ಚನ್ನಕೇಶವ, ಮಳವಳ್ಳಿ ತಾಲೂಕು ಅಂಚೆದೊಡ್ಡಿಯ ಜಿ.ಎಚ್.ಹೇಮಾವತಿ, ಬುಗತಹಳ್ಳಿಯ ಬಿ.ನಾಗಯ್ಯ, ಮಂಡ್ಯ ಉತ್ತರ ವಲಯದ ಜನತಾ ಕಾಲನಿಯ ಬಿ.ಎಸ್.ಶೋಭಾರಾಣಿ, ಮಂಡ್ಯ ನಗರ ಸ್ಲಂಬೋರ್ಡ್‌ನ ಪ್ರೇಮಾ, ನಾಗಮಂಗಲ ತಾಲೂಕಿನ ಭದ್ರೇಗೌಡನಕೊಪ್ಪಲಿನ ಎಚ್.ವಿ.ಶಂಕರ್, ಪಾಂಡವಪುರ ತಾಲೂಕು ನ್ಯಾಮನಹಳ್ಳಿಯ ಎಚ್.ಆರ್.ಪೂರ್ಣಿಮಾ, ಸಣಬದಕೊಪ್ಪಲು ಎಂ.ಎಸ್.ಜಯಚಂದ್ರನ್, ಶ್ರೀರಂಗಪಟ್ಟಣ ತಾಲೂಕು ಚಿಕ್ಕಹಾರೋಹಳ್ಳಿಯ ಕೆ.ಟಿ.ಬಸವರಾಜು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಕೆ.ಆರ್.ಪೇಟೆ ತಾಲೂಕು ಆಲಂಬಾಡಿಯ ಜೆ.ಎಸ್.ಲಿಂಗರಾಜೇಗೌಡ, ಹೆಗ್ಗಡಹಳ್ಳಿಯ ಜಿ.ಎನ್.ಯೋಗೇಶ್, ಮದ್ದೂರು ತಾಲೂಕು ವಳಗೆರೆಹಳ್ಳಿಯ ಎಂ.ಎಸ್.ಚಂದ್ರಕಲಾ, ನಗರಕೆರೆಯ ವಿ.ಟಿ.ಸುಜಯ, ಮಳವಳ್ಳಿ ತಾಲೂಕು ಹೊಸಹಳ್ಳಿಯ ವಿ.ಎಲ್.ಬಸವರಾಜು, ಮಂಡ್ಯ ಉತ್ತರ ವಲಯದ ಹೊನ್ನೇಮಡು ಶಾಲೆಯ ಬಸವರಾಜು, ಮಂಡ್ಯ ದಕ್ಷಿಣ ವಲಯ ಶ್ರೀನಿವಾಸಪುರದ ಕೆ.ಬಿ.ಆಶಾರಾಣಿ, ಮಂಡ್ಯ ನಗರ ಪೊಲೀಸ್ ಕಾಲನಿಯ ಜಯಪ್ಪ, ನಾಗಮಂಗಲ ತಾಲೂಕು ಮೈಲಾರಪಟ್ಟಣದ ಎಸ್.ಎಂ.ಹಸೀನ್, ಪಾಂಡವಪುರ ತಾಲೂಕು ಚಿಕ್ಕಾಡೆಯ ಎಲ್.ಹೇಮಾವತಿ, ಚಿನಕುರಳಿಯ ಕೆ.ಎನ್.ರುಕ್ಮಿಣಿ, ಶ್ರೀರಂಗಪಟ್ಟಣ ತಾಲೂಕು ನೇರಳೆಕೆರೆಯ ಎನ್.ಸಿ.ಮಾದೇಗೌಡ.
ಪ್ರೌಢಶಾಲಾ ವಿಭಾಗದಿಂದ ಕೆ.ಆರ್.ಪೇಟೆ ಪಟ್ಟಣದ ಕೆಪಿಎಸ್ ಶಾಲೆಯ ಸಿ.ಎನ್.ಕುಮಾರ, ಮದ್ದೂರು ತಾಲೂಕು ಬೊಪ್ಪಸಮುದ್ರದ ಎಚ್.ಎಂ.ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ ತಾಲೂಕು ದುಗ್ಗನಹಳ್ಳಿಯ ಪಿ.ಜಯರಾಮು, ಮಂಡ್ಯ ಉತ್ತರ ವಲಯದ ವಿ.ಸಿ.ಫಾರ್ಮ್ ಶಾಲೆಯ ಪ್ರಸನ್ನ, ಮಂಡ್ಯ ದಕ್ಷಿಣ ವಲಯದ ಕಲ್ಲಹಳ್ಳಿ ಶಾಲೆಯ ಮಹಂತದೇವರು, ಕಲ್ಲುಕಟ್ಟಡ ಶಾಲೆಯ ರಹಮತ್, ನಾಗಮಂಗಲ ತಾಲೂಕು ಭೀಮನಹಳ್ಳಿಯ ಎಂ.ಡಿ.ಯೋಗೇಶ್, ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಯೋಗೇಶ್, ಚಿನಕುರಳಿಯ ಎನ್.ನಾಗಮ್ಮ ಹಾಗೂ ಶ್ರೀರಂಗಪಟ್ಟಣದ ಮೊಹಮದ್ ಖುರೇಶ್.