ಜಿಲ್ಲೆ

ಪದಬಂಧ ಸ್ಪರ್ಧೆಗೆ ಅತ್ಯುತ್ತಮ ಪ್ರತಿಕ್ರಿಯೆ

ಮರಿದೇವ ಹೂಗಾರ

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಸಹಯೋಗದಲ್ಲಿ ಇಲ್ಲಿನ ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಕಾಲೇಜ್​ನಲ್ಲಿ ಸೋಮವಾರ ಏರ್ಪಡಿಸಿದ್ದ ‘ಪದಬಂಧ ಸ್ಪರ್ಧೆ’ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸ್ಪರ್ಧೆಗೆ ಮೆರಗು ತಂದರು. ಭಾಗವಹಿಸಿದ್ದವರಲ್ಲಿ ಮೂವರು ವಿದ್ಯಾರ್ಥಿಗಳಾದ ಕೀರ್ತಿ ಗುರುಸಿದ್ದಪ್ಪ ಗೋಕುಲ, ಲಕ್ಷ್ಮೀ ಉಮೇಶ ಹುಲಮನಿ, ಸೌಜನ್ಯ ಚಂದ್ರಕಾಂತ ಮಾನೆ ಅವರು 20 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದರು.

ಉಮೇಶ ನಾ. ದೊಡ್ಡಮನಿ, ಲಾವಣ್ಯ ಕೊಂಡಿಕರ, ಸಂಗಮೇಶ ಜಗದೀಶ ಸುರೇಬಾನ, ಕಾರ್ತಿಕ ಸಂಗೊಳ್ಳಿ 19 ಅಂಕ ಪಡೆಯುವ ಮೂಲಕ ದ್ವಿತೀಯ ಬಹುಮಾನ ಮುಡಿಗೇರಿಸಿಕೊಂಡರು.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ ಸಾವಿರ ರೂ. ನಗದು, ಪ್ರಮಾಣ ಪತ್ರ ಮತ್ತು ಫಲಕ ನೀಡಲಾಯಿತು. ದ್ವಿತೀಯ ಪಡೆದ ವಿದ್ಯಾರ್ಥಿಗಳಿಗೆ ತಲಾ 500 ರೂ. ನಗದು ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ, ಪದಬಂಧವು ನಮ್ಮ ಕನ್ನಡ ಭಾಷಾಭಿವೃದ್ದಿಗೆ ಸಹಕಾರಿ. ಕನ್ನಡವನ್ನು ಆಳವಾಗಿ ಅಧ್ಯಯನ ಮಾಡುವವರಿಗೆ ಮಾತ್ರ ಪದಬಂಧ ತುಂಬುವುದು ಸಲೀಸು. ನಿತ್ಯ ಕನ್ನಡ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಬಹುದು ಎಂದರು.

‘ವಿಜಯವಾಣಿ’ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾಹೀರಾತು ವಿಭಾಗದ ಉಪ ಮುಖ್ಯ ವ್ಯವಸ್ಥಾಪಕ ಸಂತೋಷ ಇನಾಮತಿ, ಪ್ರಸಾರಂಗ ವಿಭಾಗದ ವ್ಯವಸ್ಥಾಪಕ ಅಯ್ಯಣ್ಣ ಇತರರು ಇದ್ದರು.