ಬೆಳಗಾವಿ: ನಗರದ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಶೈಕ್ಷಣಿಕ, ಸಂಶೋಧನೆ, ಉದ್ಯೋಗಾವಕಾಶ, ಮೂಲಸೌಕರ್ಯ, ಆಡಳಿತ ರಚನೆ, ಸಾಮಾಜಿಕ ಜವಾಬ್ದಾರಿ ಸೇರಿ ಇತರ ಕ್ಷೇತ್ರಗಳಲ್ಲಿ ತೋರಿದ ಉತ್ತಮ ಸಾಧನೆಗೆ ಬೆಂಗಳೂರಿನ ಕ್ಯೂಎಸ್ ಐ-ಗೇಜ್ ರೇಟಿಂಗ್ ಏಜೆನ್ಸಿಯಿಂದ ಉತ್ತಮ ರೇಟಿಂಗ ಅವಾರ್ಡ್ ಪಡೆದಿದೆ.
ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಕಾರ್ಯಕ್ರಮದಲ್ಲಿ ರೇಟಿಂಗ್ ಅವಾರ್ಡ್ ಪ್ರದಾನ ಮಾಡಲಾಯಿತು. ಕ್ಯೂಎಸ್ ಐ-ಗೇಜ್ ರೇಟಿಂಗ್ ಏಜೆನ್ಸಿಯಿಂದ ನಡೆದ ಸಮಗ್ರ ಮೌಲ್ಯಮಾಪನದ ನಂತರ 100ಕ್ಕೂ ಹೆಚ್ಚು ಸೂಚ್ಯಂಕಗಳೊಂದಿಗೆ ಈ ಅವಾರ್ಡ್ ಪಡೆದ ಬೆಳಗಾವಿಯ ಏಕೈಕ ಸಂಸ್ಥೆಯಾಗಿದೆ. ಕ್ಯೂಎಸ್‌ಐ-ಗೇಜ್ ರೇಟಿಂಗ್ ಏಜೆನ್ಸಿಯು ಖಾಸಗಿ ಶೈಕ್ಷಣಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳ ಮೇಲೆ ಸಮಗ್ರ ಮೌಲ್ಯಮಾಪನ ಮಾಡಿ ರೇಟಿಂಗ್ ಅವಾರ್ಡ್ ನೀಡುತ್ತದೆ. ಇಂತಹ ರೇಟಿಂಗ್ ಏಜೆನ್ಸಿಯಿಂದ ಕೆಎಲ್‌ಎಸ್ ಗೋಗಟೆ ಕಾಲೇಜಿಗೆ ರೇಟಿಂಗ್ ಅವಾರ್ಡ್ ಲಭಿಸಿದ್ದಕ್ಕೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.