ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ನವೀನ್ ಅವರಿಗೆ ಅತ್ಯುತ್ತಮ ಪ್ರಾಧ್ಯಾಪಕ-2023 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧಮೇರ್ಂದ್ರ ಪ್ರಧಾನ್, ಡಾ.ರಮೇಶ್ ಉಣ್ಣಿಕೃಷ್ಣನ್ ಇದ್ದರು. 
ಜಿಲ್ಲೆ

ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ

ಶಿವಶಂಕರ್ ಎಂ. ಹೆಬ್ಬಳ್ಳ

ಕುಶಾಲನಗರ: ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ನವೀನ್ ಅವರು ಕೇಂದ್ರ ಸರ್ಕಾರದ ಶಿಕ್ಷಣ ಬೆಳವಣಿಗೆ ಮತ್ತು ಸಂಶೋಧನಾ ಕೇಂದ್ರದಿಂದ (ಸಿಇಜಿಆರ್) ಆಯೋಜಿಸಲಾಗಿದ್ದ 22ನೇ ರಾಷ್ಟ್ರೀಯ ಶಿಕ್ಷಕ ಗೌರವ ಸಮಾರಂಭದಲ್ಲಿ ಅತ್ಯುತ್ತಮ ಪ್ರಾಧ್ಯಾಪಕ-2023 ಪ್ರಶಸ್ತಿ ಸ್ವೀಕರಿಸಿದರು.ಬುಧವಾರ ಪುಣೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೆಂದ್ರ ಪ್ರಧಾನ್ ಹಾಗೂ ಅಖಿಲ ಭಾರತ ಶಿಕ್ಷಣ ಮಂಡಳಿಯ ಸಲಹೆಗಾರ ಡಾ.ರಮೇಶ್ ಉಣ್ಣಿಕೃಷ್ಣನ್ ಅವರು ಡಾ.ಜಿ.ಎಂ.ನವೀನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 2023ನೇ ಸಾಲಿನ ಅತ್ಯುತ್ತಮ ಪ್ರಾಧ್ಯಾಪಕರ ಪ್ರಶಸ್ತಿಗೆ ಭಾಜನರಾದ ಡಾ.ಜಿ.ಎಂ.ನವೀನ್ ಅವರನ್ನು ಕಾಲೇಜಿನ ಪ್ರಾಚಾರ್ಯ, ಬೋಧಕ, ಬೋಧಕೇತರ ವರ್ಗ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.