ಜಿಲ್ಲೆ

ಗುರುಪ್ರಸಾದ್ ಕೋಟೆಕಣಿಗೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ

ಕುಂಬಳೆ: ಹೊಸಕೋಟೆಯ ಶ್ರೀ ನವಚೇತನ ನೃತ್ಯ ಕಲಾ ಅಕಾಡೆಮಿಯ 48ನೇ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಜರುಗಿತು.

ಈ ಸಂದರ್ಭದಲ್ಲಿ ಹೊರನಾಡ ಕನ್ನಡಿಗ ಸಾಧನೆಗಾಗಿ ಗುರುಪ್ರಸಾದ್ ಕೋಟೆಕಣಿ ಅವರನ್ನು ‘ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ನೃತ್ಯ ಪಟು ಗುರು ವಿದ್ವಾನ್ ಕೋಲಾರ ರಮೇಶ್, ಕೆಂಬಳಲುಪಾಳ್ಯ ನಾಗರಾಜು ಸ್ವಾಮಿ, ಕಲಾಶ್ರೀ ಗುರು ಸುಪರ್ಣ ವೆಂಕಟೇಶ್, ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಎ.ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಡಿ.ದೇವರಾಜ್, ಅಂತಾರಾಷ್ಟ್ರೀಯ ಗಾಯಕ ಗೊ.ನಾ.ಸ್ವಾಮಿ, ಅಖಿಲ ಭಾರತ ಜನಪದ ಒಕ್ಕೂಟ ಅಧ್ಯಕ್ಷ ಕೆ.ನಾಗರಾಜ್, ಎಂಡೇವರ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಎಂ.ಎಲ್.ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.