ಬ್ರಹ್ಮಾವರ: ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ 4 ಕಂದಾಯ ಜಿಲ್ಲೆಯನ್ನೊಳಗೊಂಡ 85 ಕ್ಲಬ್‌ಗಳ 2023- 24ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಶಿವಮೊಗ್ಗದ ಕಾಸ್ಮೋ ಕ್ಲಬ್‌ನಲ್ಲಿ ನಡೆಯಿತು. 2023-24ನೇ ಸಾಲಿನಲ್ಲಿ ಸಮಗ್ರ ಸೇವೆಗಾಗಿ ದ್ವಿತೀಯ ಸ್ಥಾನದ ಅತ್ಯುತ್ತಮ ಕ್ಲಬ್ ಎಂದು ರೋಟರಿ ರೋಯಲ್ ಬ್ರಹ್ಮಾವರ 30 ಪ್ರಶಸ್ತಿ ಪಡೆದು ಕೊಂಡಿದೆ.
ಆಸಾಧಾರಣ ಸೇವೆ ಮತ್ತು ಬದ್ಧತೆಯನ್ನು ಶ್ಲಾಘಿಸಿ ಇತರ ಕ್ಲಬ್‌ಗಳಿಗೆ ರೋಟರಿ ರಾಯಲ್ ಬ್ರಹ್ಮಾವರ ಆದರ್ಶ ಎಂದು ಅಂತಾರಾಷ್ಟ್ರೀಯ ರೋಟರಿ ಇಂಟರ್ ನ್ಯಾಷನಲ್ ನಿರ್ದೇಶಕ ರಾಜು ಸುಬ್ರಹ್ಮಣ್ಯಂ ಹೇಳಿದರು.
ಈ ವರ್ಷದ ಜಿಲ್ಲಾ ಗವರ್ನರ್ ದೇವಾನಂದ್, ನಿಕಟ ಪೂರ್ವ ಗವರ್ನರ್ ಬಿ. ಸಿ. ಗೀತಾ ಉಪಸ್ಥಿತರಿದ್ದರು. 2023-24ನೇ ಸಾಲಿನ ರೋಟರಿ ರೊಯಲ್‌ನ ಅಧ್ಯಕ್ಷ ಅಭಿರಾಮ್ ನಾಯಕ್, ಕಾರ್ಯದರ್ಶಿ ವಿಜೇಂದ್ರ ಶೆಟ್ಟಿ, ಮಾಜಿ ಜಿಲ್ಲಾ ಗವರ್ನರ್ ಜ್ಞಾನ ವಸಂತ್ ಶೆಟ್ಟಿ, ಕ್ಲಬ್ ನ ಹಿರಿಯರಾದಅಶೋಕ್ ಕುಮಾರ್ ಶೆಟ್ಟಿ, ಜೈ ಕಿಶನ್, ಹಾಲಿ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಸಾಮಗ ಹಾಗೂ ಕ್ಲಬ್‌ನ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.