ಜಿಲ್ಲೆ

ಕಿಲ್ಲೇದಾರಗೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ತಾಲೂಕಿನ ಕಬ್ಬೂರ ಪಟ್ಟಣದ ಛಾಯಾಚಿತ್ರಗಾರ ಮಲ್ಲಿಕಾರ್ಜುನ ಕಿಲ್ಲೇದಾರ ಅವರಿಗೆ ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ (ಗುರುವಂದನಾ ಪುರಸ್ಕಾರ) ಪ್ರದಾನ ಮಾಡಿ ಗೌರವಿಸಲಾಗಿದೆ.

ಮಲ್ಲಿಕಾರ್ಜುನ ಕಿಲ್ಲೇದಾರ