ಜಿಲ್ಲೆ

ತಂದೆಗೆ ಶ್ರೇಷ್ಠ ಕೃಷಿಕ ಲೇಖನ ಪ್ರಶಸ್ತಿ, ಮಗಳಿಗೆ 8 ಚಿನ್ನದ ಪದಕ

ವಿಜಯವಾಣಿ ಸುದ್ದಿಜಾಲ ಧಾರವಾಡ
ತಂದೆ ಹಾಗೂ ಮಗಳ ಸಾಧನೆ ಒಂದೇ ದಿನ ಡಬಲ್ ಖುಷಿಗೆ ಕಾರಣವಾಯಿತು. ತಂದೆ ಕೃಷಿ ವಿಶ್ವವಿದ್ಯಾಲಯದಿಂದ ಉತ್ತಮ ಕನ್ನಡ ಕೃಷಿ ಲೇಖನ' ಪ್ರಶಸ್ತಿಗೆ ಭಾಜನರಾದರು. ಅವರ ಮಗಳು ಕರ್ನಾಟಕ ವಿಶ್ವವಿದ್ಯಾಲದ ಘಟಿಕೋತ್ಸವದಲ್ಲಿ ಎಂ.ಎಸ್‌ಸಿ ಜೀವಶಾಸ್ತç ಸ್ನಾತಕೋತ್ತರ ಪದವಿಯಲ್ಲಿ 8 ಚಿನ್ನದ ಪದಕ ಪಡೆದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿರುವ ಚನ್ನಪ್ಪ ಅಂಗಡಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ನೀಡುವಡಾ. ಚನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ' ಪ್ರಶಸ್ತಿ ಪ್ರದಾನ ಮಾಡಲಾಯಿತು. `ಪೈರಿಗೆ ನೀರು ಬೇಕೆಂಬಲ್ಲಿ' ಲೇಖನಕ್ಕೆ ಉತ್ತಮ ಕನ್ನಡ ಕೃಷಿ ಲೇಖನ' ಪ್ರಶಸ್ತಿ ಲಭಿಸಿತು. ಕುಲಪತಿ ಡಾ. ಪಿ.ಎಲ್. ಪಾಟೀಲ, ಕುಲಸಚಿವೆ ಜಯಲಕ್ಷಿ÷್ಮÃ ರಾಯಕೋಡ ಹಾಗೂ ಇತರರಿದ್ದರು.
ಅವರ ಮಗಳು ವಿಸ್ಮಯ ಅಂಗಡಿ ಎಂ.ಎಸ್‌ಸಿ ಜೀವಶಾಸ್ತç ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಗಳಿಸಿ 8 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್.ಅಯ್ಯಪ್ಪನ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಚಿನ್ನದ ಪದಕ ಪ್ರದಾನ ಮಾಡಿದರು.
ತಂದೆ ಹಾಗೂ ಮಗಳು ಒಂದೇ ದಿನ ಪ್ರತ್ಯೇಕ 2 ವಿಶ್ವವಿದ್ಯಾಲಯಗಳಿಂದ ಗೌರವಕ್ಕೆ ಭಾಜನವಾಗಿದ್ದು ವಿಶೇಷ.