ಜಿಲ್ಲೆ

ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ

ಸೋಮನಾಥ ರೆಡ್ಡಿ

ಶಿರಹಟ್ಟಿ: ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ ತಾಲೂಕು ಮಟ್ಟದ ಪಿಯು ಕಾಲೇಜ್‌ಗಳ ಕ್ರೀಡಾಕೂಟದಲ್ಲಿ ಬೆಳ್ಳಟ್ಟಿಯ ಬಿ.ಪಿ. ಅಳವಂಡಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕಿಯರ ವಿಭಾಗದ ವಾಲಿಬಾಲ್, ಖೋಖೋ ಹಾಗೂ ಥ್ರೋಬಾಲ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವೈಯಕ್ತಿಕ ಸ್ಪರ್ಧೆಗಳಾದ ಸರಪಳಿ ಗುಂಡು ಎಸೆತದಲ್ಲಿ ಸುಮಾ ಉಪ್ಪಾರ ಪ್ರಥಮ, 200 ಮೀ ಓಟದಲ್ಲಿ ಕವನಾ ಛಬ್ಬಿ ಪ್ರಥಮ, ಉದ್ದ ಜಿಗಿತದಲ್ಲಿ ಮಧು ಶಿರಹಟ್ಟಿ ಪ್ರಥಮ, ತ್ರಿವಿಧ ಜಿಗಿತ ಹಾಗೂ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೈದ ಪ್ರಾಚಾರ್ಯ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.