ಮಂಗಳೂರು : ಗ್ರಂಥಾಲಯ ದೇವಾಲಯವಿದ್ದಂತೆ. ಮೌಲ್ಯಯುತ ಗ್ರಂಥಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜ್ಞಾನಾರ್ಜನೆ ಮಾಡಲು ಶ್ರೀಮಂತರು ಬಡವರು ಎನ್ನುವ ಬೇಧವಿಲ್ಲ. ಗ್ರಂಥಾಲಯವೆನ್ನುವ ಜ್ಞಾನಮಂದಿರದಲ್ಲಿ ಏಕಾಗ್ರತೆಯಿಂದ,
ಭಕ್ತಿಯಿಂದ ಗ್ರಂಥಗಳನ್ನು ಓದಿ ಜ್ಞಾರ್ನಾಜನೆ ಮಾಡಿ ಎಂದು ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ
ಡಾ. ನಾಯಕ್ ರೂಪ್ ಸಿಂಗ್ ಜಿ. ಹೇಳಿದರು.
ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗ್ರಂಥಪಾಲಕ ಡಾ. ಲೋಕರಾಜ್ ವಿ.ಎಸ್. ವಿಟ್ಲ ಅವರು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಜೀವನ ಸಾಧನೆ ಬಗ್ಗೆ ತಿಳಿಸಿದರು. ಲಿಖಿತಾ ಕಾರ್ಯಕ್ರಮ ನಿರೂಪಿಸಿದರು.