ಜಿಲ್ಲೆ

ಹರಿಹರದಲ್ಲಿ ಸ್ಥಗಿತಗೊಂಡ ಕೌಂಟರ್​ಗಳ ಆರಂಭಕ್ಕೆ ಒತ್ತಾಯ

ಹರಿಹರ: ವಿದ್ಯುತ್ ಬಿಲ್ ಭರಿಸಲು ಎರಡು ಕೌಂಟರ್​ಗಳನ್ನು ಪುನಃ ಆರಂಭಿಸುವಂತೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಗುರುವಾರ ನಗರದ ಬೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ರವಿ ಕಿರಣ್ ಅವರಿಗೆ ಮನವಿ ಸಲ್ಲಿಸಿತು.

ಈ ವೇಳೆ ರಾಜ್ಯ ಉಪಾಧ್ಯಕ್ಷ ನಾಗರಾಜ್ ಬಂಡಾರಿ ಮಾತನಾಡಿ, ನಗರದ ಶಿವಮೊಗ್ಗ ರಸ್ತೆಯ ಜೆಸಿ ಬಡಾವಣೆ ಬಳಿ ಹಾಗೂ ಇಂಡಸ್ಟ್ರಿ ಯಲ್ ಏರಿಯಾದಲ್ಲಿ ಬೆಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ಕಟ್ಟಲು ಕೌಂಟರ್​ಗಳನ್ನು ಮಾಡಲಾಗಿತ್ತು. ಆದರೆ ಇತ್ತೀಚೆಗೆ ಬೆಸ್ಕಾಂ ಕಚೇರಿಯಿಂದ ಈ ಎರಡು ಕೌಂಟರ್​ಗಳನ್ನು ಬಂದ್ ಮಾಡಲಾಗಿದ್ದು ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಸರ್ಕಾರ ಗೃಹ ಜ್ಯೋತಿ ಹೆಸರಿನಲ್ಲಿ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದಾರೆ. ಆದರೆ ಹೆಚ್ಚುವರಿ ಯುನಿಟ್ ಬಿಲ್ ಪಾವತಿಗೆ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಏಕೈಕ ಕೌಂಟರ್​ಗೆ ಬರಬೇಕಿದೆ. ಇದರಿಂದ ನಗರದ ಗ್ರಾಹಕರು ಬಿಲ್ ಪಾವತಿಸಲು ದಿನ ಪೂರ್ತಿ ಕಾಯುವ ಪರಿಸ್ಥಿತಿ ನಿರ್ವಣವಾಗುತ್ತದೆ ಎಂದು ಆರೋಪಿಸಿದರು.

ಬೆಸ್ಕಾಂ ಅಧಿಕಾರಿಗಳು ಒಂದು ತಿಂಗಳೊಳಗೆ ಸ್ಥಗಿತ ಮಾಡಿರುವ ಕೌಂಟರ್​ಗಳನ್ನು ಪ್ರಾರಂಭಿಸಬೇಕು ಹಾಗೂ ಹೆಚ್ಚುವರಿ ಕೌಂಟರ್​ಗಳನ್ನು ತೆರೆಯಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ತಾಲೂಕಾಧ್ಯಕ್ಷ ರಾಹುಲ್ ಮೆಹರ್ವಾಡೆೆ, ಜಿ.ವಿ. ಪ್ರವೀಣ್​ಕುಮಾರ್, ಡಿವಿಜಿ ಲಿಂಗರಾಜ್, ಗೌತಮ್ ಮೈಫುಜ್ ಮತ್ತಿತರರಿದ್ದರು.