ಬೆಂಗಳೂರು: ವಾರ್ಷಿಕ ನಿರ್ವಹಣೆ ಕೆಲಸ ಇರುವ ಹಿನ್ನೆಲೆ 20/66/11 ಕೆವಿ ಮತ್ತಿಕೆರೆ ಉಪಕೇಂದ್ರದ ವ್ಯಾಪ್ತಿಯಲ್ಲಿ ಗುರುವಾರ (ಆ.29) ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಲ್.ಜಿ.ಹಳ್ಳಿ, ಆರ್.ಎಮ್.ವಿ 2ನೇ ಹಂತ, ಸಂಜೀವಪ್ಪ ಕಾಲೊನಿ, ನ್ಯೂ ಬಿ.ಇ.ಎಲ್ ರಸ್ತೆ, ಎಂ.ಎಸ್.ಆರ್ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಬಿ.ಕೆ.ನಗರ, ಬಾಂಬೆ ಡೈಯಿಂಗ್ ರಸ್ತೆ, ಯಶವಂತಪುರ ಮೊದಲನೇ ಮುಖ್ಯ ರಸ್ತೆ, ಎಚ್.ಎಂ.ಟಿ ಮುಖ್ಯ ರಸ್ತೆ, ಎಚ್.ಎಂ.ಟಿ ಬಡಾವಣೆ, ಬೃಂದಾವನ ನಗರ, ಎಸ್.ಬಿ.ಎಂ ಕಾಲೊನಿ, ಎಂ.ಆರ್.ಜೆ ಕಾಲೊನಿ ಇನ್ನಿತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.