ಜಿಲ್ಲೆ

ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ

ಗಂಗಾಧರ ಬಿ ವಿ

ಬಿಡದಿ: ಪಟ್ಟಣದ ಛತ್ರ ಗ್ರಾಮದ ಬಳಿಯ ಬೆಸ್ಕಾಂ ಕಚೇರಿಯಲ್ಲಿ ಬುಧವಾರ ಲಂಚ ಪಡೆಯುತ್ತಿದ್ದ ಎಇಇ ಪುಟ್ಟಸ್ವಾಮಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಿದ್ಯುತ್​ ಗುತ್ತಿಗೆದಾರ ಅನಂತರಾಜ್​ ಅವರಿಂದ ಹಣ ಪಡೆಯುತ್ತಿದ್ದಾಗ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್​ ದಾಳಿ ಮಾಡಿದ್ದಾರೆ.

ಬೆೆಂಗಳೂರು ಮೂಲದ ಅನಂತರಾಜ್​, ಬಿಡದಿ ಭಾಗದಲ್ಲಿ ಕೇಬಲ್​ ವೈರ್​ ಅಳವಡಿಸಲು ಗುತ್ತಿಗೆ ಪಡೆದಿದ್ದರು. ಈ ಕಾಮಗಾರಿಯ ಮಂಜೂರಾತಿಗೆ ಸಹಿ ಹಾಕಲು ಪುಟ್ಟಸ್ವಾಮಿ 70 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 30 ಸಾವಿರ ರೂ. ಕೇಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನಂತರಾಜ್​ ಲೋಕಾಯುಕ್ತಕ್ಕೆ ದೂರು ನೀಡಿದ್ದರು.