ಮಂಗಳೂರು: ಎಸ್‌ಎಲ್‌ವಿ ಪ್ರೊಡಕ್ಷನ್ ಹೌಸ್‌ನಲ್ಲಿ ದಿವಾಕರ ದಾಸ್ ನಿರ್ಮಾಣ, ವಿನು ಬಳಂಜ ನಿರ್ದೇಶನದಲ್ಲಿ ತಯಾರಾದ ವಿಭಿನ್ನ ಕಥಾವಸ್ತು ಒಳಗೊಡಿರುವ ‘ಬೇರ’ ಕನ್ನಡ ಚಲನಚಿತ್ರ ಮಂಗಳೂರು ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿರು.
ನಟ ಸ್ವರಾಜ್ ಶೆಟ್ಟಿ, ಹಿರಿಯ ರಂಗಕರ್ಮಿ ವಿ.ಜಿ.ಪಾಲ್, ಹಿರಿಯ ಕಲಾನಿರ್ದೇಶಕ ತಮ್ಮ ಲಕ್ಷ್ಮಣ, ಕಲಾವಿದರಾದ ಎಂ.ಕೆ.ಮಠ, ಕಿಶೋರ್ ಶೆಟ್ಟಿ, ಉದ್ಯಮಿ ಪ್ರೇಮ್ ಶೆಟ್ಟಿ, ಜಾನ್ಸನ್ ಮಾರ್ಟೀಸ್, ಎ.ಕೆ.ವಿಜಯ ಕೋಕಿಲ, ನಟರಾದ ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ ಮತ್ತಿತರರು ಇದ್ದರು.
ಮಂಗಳೂರಿನ ನಿರ್ದೇಶಕ ವಿನು ಬಳಂಜ, ಮಾನವ ಕುಲದ ಒಳಿತಿಗಾಗಿ ಇರುವ ಧರ್ಮ ಸ್ವಾರ್ಥ ಸಾಧನೆಗಾಗಿ ಬಳಕೆಯಾದಾಗ ಅದರಿಂದ ಆಗುವ ಅನಾಹುತಗಳ ಮೇಲೆ ಬೆಳಕು ಚೆಲ್ಲುವ ಕಥಾವಸ್ತುವನ್ನು ಚಿತ್ರ ಹೊಂದಿದೆ ಎಂದರು. ತಾರಾಗಣದಲ್ಲಿ ಸುಮನ್ ತಲ್ವಾರ್, ಹರ್ಷಿಕಾ ಪೂಣಚ್ಚ, ಹರ್ಷವರ್ಧನ್, ಅರವಿಂದ್ ರಾವ್, ರಾಕೇಶ್ ಮಯ್ಯ, ದತ್ತಣ್ಣ, ಅಶ್ವಿನ್ ಹಾಸನ್, ಯಶ್ ಶೆಟ್ಟಿ, ಶೈನ್ ಶೆಟ್ಟಿ, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ, ರಾಜಶೇಖರ ಶೆಟ್ಟಿ, ಮಂಜುನಾಥ್ ಹೆಗ್ಡೆ, ಎಂ .ಕೆ.ಮಠ, ಚಿತ್ಕಲ ಬಿರಾದಾರ್, ಅಂಜಲಿ, ಶೋಭಾರಾಣಿ, ಶಾಂತಲಾ ಕಾಮತ್, ಗುರು ಹೆಗ್ಡೆ, ಸಬಿತಾ ಕಾಮತ್, ಧವಲ್ ಪ್ರಸನ್ನ, ಪ್ರದೀಪ್‌ಚಂದ್ರ ಕುತ್ಪಾಡಿ, ಗಿರೀಶ್ ಚಿತ್ರದಲ್ಲಿದ್ದಾರೆ.