ಜಿಲ್ಲೆ

'ಬೇರ' ರಾಜ್ಯಾದ್ಯಂತ ಬಿಡುಗಡೆ 16ಕ್ಕೆವಿನು ಬಳಂಜ ನಿರ್ದೇಶನದ ಮೊದಲ ಚಿತ್ರ

Dharwada - Basavaraj Idli

ಹುಬ್ಬಳ್ಳಿ: ಎಸ್ಎಲ್ ವಿ ಕರ್ಲಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಬೇರ' ಚಿತ್ರವು ಧರ್ಮಾಧಾರಿತ ವಿಚಾರ ಹಾಗೂ ಕಥಾ ವಸ್ತುವನ್ನು ಹೊಂದಿದ್ದು, ಜೂನ್ 16ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ವಿನು ಬಳಂಜ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದು, ಜನಪ್ರಿಯವಾಗಿವೆ. ಇದೀಗ ಮೊದಲ ಬಾರಿ ವಿಭಿನ್ನ ಕಥೆಯ ಚಿತ್ರದೊಂದಿಗೆ ಹಿರಿತೆರೆಗೆ ಕಾಲಿಟ್ಟಿದ್ದೇನೆ. ಅಮಾಯಕ ಮನುಷ್ಯರನ್ನು ಮೆಟ್ಟಿಲಾಗಿ ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಎಂಬುದನ್ನು ತೋರಿಸಲಾಗಿದೆ ಎಂದರು.

ಕೆಲ ವರ್ಷಗಳಿಂದ ನಿರ್ದೇಶನದಿಂದ ದೂರ ಇದ್ದೆ. ಒಮ್ಮೆ ಮಂಗಳೂರು ಬಳಿಯ ಕಲ್ಲಡ್ಕಕ್ಕೆ ಹೋದಾಗ ಅಲ್ಲಿನ ಮ್ಯೂಸಿಯಂಗೆ ಭೇಟಿ ನೀಡಿದ್ದೆ. ಆ ಮ್ಯೂಸಿಯಂನಲ್ಲಿ ಚಿತ್ರದ ಕಥೆ ಹುಟ್ಟಿತು. ನಿರ್ದೇಶನಕ್ಕೆ ಪ್ರೇರಣೆ ನೀಡಿತು. ಇದನ್ನು ಚಿತ್ರ ಮಾಡಲು ನಿರ್ಮಾಪಕ ದಿವಾಕರ ದಾಸ್ ಸಹಕಾರ ನೀಡಿದರು ಎಂದರು.

ನಟ ಯಶ್ ಶೆಟ್ಟಿ ಮಾತನಾಡಿ, ತುಳುವಿನಲ್ಲಿ ಬೇರ ಎಂದರೆ ವ್ಯಾಪಾರ. ಬೇರ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಚಿತ್ರ. ಇದರಿಂದ ತಿಳಿದುಕೊಳ್ಳುವುದು ಬಳಷ್ಟಿದೆ. ಕನ್ನಡಿಗರು ಥೇಟರ್ಗೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಮಾತನಾಡಿ, ನೈಜ ಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಮಂಗಳೂರಿನ ಕಲ್ಲಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. 80ಕ್ಕಿಂತ ಹೆಚ್ಚು ಥೇಟರ್ಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಹರ್ಷವರ್ಧನ್, ಹಷಿರ್ಕಾ ಪೂಣಚ್ಚ, ಶೈನ್ ಶೆಟ್ಟಿ, ದತ್ತಣ್ಣ, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ.

ದಿವಾಕರ ದಾಸ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ರಾಜಶೇಖರ, ಮಣಿಕಾಂತ ಕದ್ರಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.