ಗದಗ: ಗಂಡು ಹೆಣ್ಣಿನ ಬೇಧ&ಭಾವ ಇಲ್ಲದೆಯೇ ಎಲ್ಲರಿಗೂ ಸಮಾಜ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿಯನ್ನು ಪಾಲಕರು ನಿರ್ವಹಿಸಬೇಕು ಎಂದು ಶಹರ ವಲಯದಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ಬುರಡಿ ಹೇಳಿದರು.
ನಗರದ ಸಿ. ಎಸ್. ಪಾಟೀಲ ಸಮೂಹ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ವಾಷಿರ್ಕ ಸ್ನೇಹ ಸಮ್ಮೇಳನದದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ವರ್ಗದ ಅಧಿಕಾರಿಗಳೇ ಅತ್ಯಧಿಕ ಇದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾ-ಧಿಸಬಹುದು. ಇದಕ್ಕಾಗಿ ಹೆಣ್ಣುಮಕ್ಕಳು ತಮ್ಮ ವಿದ್ಯಾಥಿರ್ ಜೀವನದಲ್ಲಿ ಪರಿಶ್ರಮ ಪಡಬೇಕು ಎಂದರು.
ನಿವೃತ್ತ ಸೈನಿಕ ಬಸವಣ್ಣೆಪ್ಪ ಕರಿ ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯದಶಿರ್ ವೀರನಗೌಡ ಅಂದಾನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಟಿ. ಎಸ್. ಬಂಡಿಹಾಳ, ಐ. ಎಸ್. ಗೌಡರ, ಎನ್. ಎಸ್. ಹಂಜಗಿ, ಎನ್. ವಿ. ಪಾಟೀಲ, ಆರ್. ಎಲ್. ಹಂಸನೂರ ಇತರರು ಇದ್ದರು.