ಜಿಲ್ಲೆ

'ಡಬಲ್​ ಡೆಕ್ಕರ್​' ಮಾರ್ಗದಲ್ಲಿ ಸಂಚಾರ ಶ್ರೀಘ್ರ! 3.3 ಕಿ.ಮೀ. ಉದ್ದದ ಮಾರ್ಗ

ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ನಗರದ ಮೊದಲ "ಡಬಲ್​ ಡೆಕರ್​' ಮಾರ್ಗ ಸದ್ಯದಲ್ಲೇ ಸಂಚಾರಕ್ಕೆ ಮುಕ್ತವಾಗಲಿದ್ದು, ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ.

ಆರ್​.ವಿ.ರಸ್ತೆ - ಬೊಮ್ಮಸಂದ್ರ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್​ ಸಿಲ್ಕ್​ಬೋರ್ಡ್​ ಜಂಕ್ಷನ್​ವರೆಗೆ 3.3 ಕಿ.ಮೀ. ದೂರ ಹಾಗೂ ಮೆಟ್ರೋ ರೈಲು ಸಂಚರಿಸುವ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ.

ಡಬಲ್​ ಡೆಕರ್​ ರಸ್ತೆಯ ಮೇಲೆ ಒಮ್ಮೆ ವಾಹನಗಳು ಹತ್ತಿದರೆ, ಮಧ್ಯದಲ್ಲಿ ಇಳಿಯಲು ಸಾಧ್ಯವಿಲ್ಲ. ಬಸ್​, ಕಾರು ಸೇರಿ ಎಲ್ಲ ಮಾದರಿಯ ವಾಹನಗಳು ಇದರಲ್ಲಿ ಸಂಚರಿಸಬಹುದು. ಈ ಮಾರ್ಗ ವಾಹನದಟ್ಟಣೆ ನಿಯಂತ್ರಿಸಲಿದೆ. ಎರಡನೇ ಅಂತಸ್ತಿನಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ನೆಲ ಅಂತಸ್ತಿನಲ್ಲಿ ತ್ರಿಪಥ ಮಾರ್ಗವಿದ್ದು, ಎಂದಿನಂತೆ ವಾಹನ ಸಂಚಾರ ಇರಲಿದೆ.

ಹಳದಿ ಮಾರ್ಗದಲ್ಲಿ ಮುಂದುವರಿದ ಪ್ರಾಯೋಗಿಕ ಸಂಚಾರ

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಜೂ.16ರಿಂದ ಚಾಲಕರಹಿತ ಎಂಜಿನ್​ ಹೊಂದಿರುವ ರೈಲು ಪ್ರಾಯೋಗಿಕವಾಗಿ ಸಂಚರಿಸುತ್ತಿದ್ದು, ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದು, ಇನ್ನೂ ಮೂರ್ನಾಲ್ಕು ತಿಂಗಳು ವಿವಿಧ ಪರೀೆಗಳು ನಡೆಯಲಿವೆ. ಸದ್ಯ ಟ್ರಾಕ್ಷನ್​, ಬ್ರೇಕಿಂಗ್​, ವೇಗ ಇತ್ಯಾದಿ ಪರೀಕ್ಷೆಗಳು ನಡೆಯುತ್ತಿವೆ.

ಬಳಿಕ ಹಂತಹಂತವಾಗಿ ಸಿಗ್ನಲಿಂಗ್​, ದೂರಸಂಪರ್ಕ, ವಿದ್ಯುತ್​ ಸರಬರಾಜು, ರೈಲು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪುವ ಸಮಯ ಇತ್ಯಾದಿ ಪರೀಕ್ಷೆಗಳು ನಡೆಯಲಿವೆ. ಬಳಿಕ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಪರೀಶಿಲಿಸಿ ವರದಿ ನೀಡಲಿದೆ. ಬಳಿಕಷ್ಟೇ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಲಿದೆ.