ಅವರೆಕಾಯಿ 
ಬೆಂಗಳೂರು ಗ್ರಾಮಾಂತರ

ಬರದ ನಡುವೆ ಅವರೆ ಸುಗ್ಗಿ!

A harvest amidst the drought!

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಕೈಕೊಟ್ಟ ಮುಂಗಾರು, ಕಣ್ಣಾಮುಚ್ಚಾಲೆಯ ಹಿಂಗಾರಿನ ನಡುವೆ ಸಿಲುಕಿ ಹೈರಾಣಾಗಿರುವ ಜಿಲ್ಲೆಯ ರೈತರಲ್ಲಿ ಅವರೆ ಬೆಳೆ ಕೈಹಿಡಿಯುವ ಆಸೆ ಮೊಳಕೆಯೊಡೆದಿದೆ.

ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಬೆಳೆಯಾಗಿ ಅವರೆ ಬೆಳೆಯಲಾಗುತ್ತದೆ. ರಾಗಿ, ಮೆಕ್ಕೆಜೋಳ ಜತೆಗೆ ಅಂತರಬೆಳೆಯಾಗಿ ಸೊಗಡು ಅವರೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಹೈಬ್ರಿಡ್​ ಎಚ್​ಎ4, ಎಚ್​ಎ5 ತಳಿಗಳು ಕೈಹಿಡಿಯಲಿದೆ ಎಂಬ ಭರವಸೆ ರೈತರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ನವೆಂಬರ್​ ಅಂತ್ಯಕ್ಕೆ ಸೊಗಡು ಅವರೆ ಮಾರುಕಟ್ಟೆಗೆ ಪ್ರವೇಶಿಸಲಿದ್ದು. ತುಸು ಆದಾಯದ ಭರವಸೆ ಮೂಡಿಸಿದೆ.

ಹೈಬ್ರಿಡ್​ ತಳಿಗೆ ಬೇಡಿಕೆ:

ರಾಗಿ, ಮೆಕ್ಕೆಜೋಳ ಜತೆಗೆ ಅಂತರಬೆಳೆಯಾಗಿ ಸೊಗಡು ಅವರೆ ಬೆಳೆಯುವ ಸಂಪ್ರದಾಯವಿದ್ದರೂ ಇದಕ್ಕೆ ಕನಿಷ್ಠ 4ರಿಂದ 5 ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದೀಗ ಕಟಾವು ವಿಧಾನದ ಬದಲಾವಣೆ ಮಳೆ ವ್ಯತ್ಯಯದ ಕಾರಣದಿಂದಾಗಿ ಕಡಿಮೆ ಸಮಯದಲ್ಲಿ ಬೆಳೆಯುವ ಹೈಬ್ರಿಡ್​ ಅವರೆ ತಳಿಗಳಾದ ಎಚ್​ಎ4, ಎಚ್​ಎ5 ಬಳಕೆಯಿಂದಾಗಿ. ಕೇವಲ ಎರಡೂವರೆ ತಿಂಗಳೊಳಗೆ ಫಸಲು ಕೈಸೇರುತ್ತದೆ. ಇದರಿಂದ ನಾಟಿ ತಳಿಗಳ ಬದಲಾಗಿ ಹೈಬ್ರಿಡ್​ ಬಗ್ಗೆ ಒಲವು ಹೆಚ್ಚಾಗಿದೆ.

ನೀರಾವರಿ ಬೆಳೆ: ಈ ವರ್ಷದ ಮುಂಗಾರು ಕೈಕೊಟ್ಟಿದ್ದರಿಂದ ಅನೇಕ ರೈತರು ರಾಗಿ ಬದಲಾಗಿ ಕೊಳವೆಬಾವಿ ಆಶ್ರಿತ ಜಮೀನುಗಳಲ್ಲಿ ಹೈಬ್ರಿಡ್​ ಅವರೆ ಬೆಳೆ ಕಡೆ ಮುಖಮಾಡಿರುವುದು ಕಂಡುಬರುತ್ತಿದೆ. ಇದು ಕಡಿಮೆ ಅವಧಿಯಲ್ಲಿ ಸಲು ಬರುವುದರಿಂದ ಹಾಗೂ ಕಡಿಮೆ ನೀರು ಬಳಸುವುದರಿಂದ ರೈತರು ಆರ್ಥಿಕವಾಗಿ ಕೊಂಚ ನಿರಾಳರಾಗಬಹುದು ಎಂಬ ನಿರೀೆ ಮೂಡಿಸಿದೆ. ಸಾಮಾನ್ಯವಾಗಿ ಡಿಸೆಂಬರ್​ನಿಂದ ಫೆಬ್ರವರಿ ತಿಂಗಳವರೆಗೂ ಅವರೆಕಾಯಿ ಮಾರಾಟ ಹೆಚ್ಚು ಕಂಡುಬರುತ್ತದೆ. ಪ್ರಸ್ತುತ ದಿನಗಳಲ್ಲಿ ತರಕಾರಿ ದರ ಗಗನಮುಖಿಯಾಗಿರುವ ಸಂದರ್ಭದಲ್ಲಿ ಅವರೆ ಪರ್ಯಾಯವಾಗಿ ಬಳಕೆಯಾಗುವುದು ಗ್ರಾಹಕರಲ್ಲೂ ತೃಪ್ತಿ ಮೂಡಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ರಾಗಿ ಇಳುವರಿ ಕುಸಿತವಾಗುವ ಲಕ್ಷಣ ಕಂಡುಬರುತ್ತಿದ್ದು, ಅವರೆ ಸಲು ಹೆಚ್ಚಿನ ಪ್ರಮಾಣದಲ್ಲಿ ಕೈಸೇರುವ ಭರವಸೆ ವ್ಯಕ್ತವಾಗುತ್ತಿದೆ, ಕೆಲವು ಬಾರಿ ಕೆಜಿಗೆ 80 ರಿಂದ 100 ರೂವರೆಗೆ ಬಿಕರಿಯಾದ ನಿದರ್ಶನಗಳಿವೆ. ಈ ಬಾರಿ ಇದರ ದರ ಹೆಚ್ಚಬಹುದು ರೈತರನ್ನು ಸ್ವಲ್ಪ ಮಟ್ಟದಲ್ಲಿ ಆರ್ಥಿಕ ಹೊರೆ ತಗ್ಗಿಸಬಹುದು ಎಂಬ ಮಾತು ಕೇಳಿಬರುತ್ತಿದೆ.

ಬಯಲುಸೀಮೆಗಳಲ್ಲಿ ಹೆಚ್ಚು: ಬಯಲುಸೀಮೆ ಜಿಲ್ಲೆಯಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಸೇರಿ ಅನೇಕ ಜಿಲ್ಲೆಗಳ ಪಾರಂಪರಿಕ ಆಹಾರ ಬೆಳೆಯಾಗಿರುವ ಅವರೆಯನ್ನು ಸುಮಾರು 70 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ ಬರದ ಕಾರಣ ರಾಗಿ, ಜೋಳದ ಬದಲಿಗೆ ಅವರೆಕಾಯಿ ಬಿತ್ತನೆ ಹೆಚ್ಚಿದ್ದು, ಬೆಳೆ ವ್ಯಾಪ್ತಿಯೂ ಶೇ.20ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಹಿಂಗಾರು ಮಳೆ ತುಸು ಕೈಹಿಡಿದಿದ್ದರಿಂದ ಈ ಬಾರಿ ಅವರೆ ಉತ್ತಮ ಲಸು ಬರುವ ನಿರೀೆ ಮೂಡಿಸಿದೆ. ನವೆಂಬರ್​ ಅಂತ್ಯಕ್ಕೆ ಮಾರುಕಟ್ಟೆಗಳಲ್ಲಿ ಅವರೆ ಸೊಗಡು ಕಂಡುಬರಲಿದೆ.

ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದೆ, ಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ. ಆದರೆ ಈಬಾರಿ ಮಳೆ ಕೊರತೆಯಿಂದ ನಿರೀೆಯಷ್ಟು ಬಿತ್ತನೆಯಾಗಿಲ್ಲ. ಜತೆಗೆ ನಿರೀತ ಸಲು ಕೈಸೇರುವ ಸಾಧ್ಯತೆ ಕಡಿಮೆ ಇದೆ. ಇದರ ನಡುವೆ ಅವರೆ ಹೈಬ್ರಿಡ್​ ತಳಿಗೆ ಮೊರೆ ಹೋಗಿರುವ ರೈತರಿಗೆ ಈ ಬಾರಿ ಇದು ಕೈಹಿಡಿಯಲಿದೆ ಎಂಬ ನಿರೀೆ ಇದೆ. ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಈ ಬೆಳೆಗೆ ಉತ್ತಮ ಬೇಡಿಕೆ ಇದೆ.

> ಕಲಾವತಿ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ ಬೆಂ.ಗ್ರಾಮಾಂತರ