A Museum Touch for a Heritage Building 
ಬೆಂಗಳೂರು ಗ್ರಾಮಾಂತರ

ಪಾರಂಪರಿಕ ಕಟ್ಟಡಕ್ಕೆ ಮ್ಯೂಸಿಯಂ ಸ್ಪರ್ಶ

A Museum Touch for a Heritage Building

ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ

ನಾಡಿನ ಐತಿಹಾಸಿಕ ಕುರುಹುಗಳನ್ನು ಮಡಿಲಿನಲ್ಲಿ ಹುದುಗಿಸಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಪ್ರಾಚ್ಯವಸ್ತು ಸಂಗ್ರಹಾಲಯ (ಮ್ಯೂಸಿಯಂ) ನಿರ್ಮಾಣ ಮಾಡಬೇಕೆನ್ನುವ ಜಿಲ್ಲೆಯ ಜನರ ಬಹುದಿನಗಳ ಕನಸು ಕನಸಾಗುವ ದಿನ ಹತ್ತಿರವಾಗಿದೆ.

ಪ್ರಸ್ತುತ ಕಂದಾಯ ಇಲಾಖೆ ಅಧೀನದಲ್ಲಿರುವ ದೇವನಹಳ್ಳಿಯ ಹಳೇ ತಾಲೂಕು ಕಚೇರಿ ಕಟ್ಟಡವನ್ನು ಜಿಲ್ಲಾ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರಿಸುವಂತೆ ಸರ್ಕಾರ ಆದೇಶ ನೀಡಿದ್ದು, ಶ್ರೀದಲ್ಲೇ ಇದೇ ಸ್ಥಳದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ಮಾಣವಾಗುವ ನಿರೀೆ ಗರಿಗೆದರಿದೆ. ಅನೇಕ ಇತಿಹಾಸ ಸಂಶೋಧಕರು, ಪ್ರಾಚ್ಯವಸ್ತು ತಜ್ಞರು ಸೇರಿ ಜಿಲ್ಲೆಯ ಜನರ ಬಹುದಿನದ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದ್ದು, ಜಿಲ್ಲೆಯ ಶಕ್ತಿಸೌಧವಿರುವ ದೇವನಹಳ್ಳಿಯಲ್ಲಿಯೇ ಜಿಲ್ಲಾ ಮಟ್ಟದ ವಸ್ತು ಸಂಗ್ರಹಾಲಯ ಕಣ್ತೆರೆಯಲಿದೆ ಎಂಬುದು ಸರ್ಕಾರದಿಂದ ಜಿಲ್ಲೆಯ ಜನರಿಗೆ ದೀಪಾವಳಿ ಅಚ್ಚರಿ ಕೊಡುಗೆ ಎಂಬಂತಾಗಿದೆ.

ಮೂಲಸ್ಥಿತಿಯಲ್ಲಿ ಮರುಬಳಕೆ: ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವನಹಳ್ಳಿ ಪಟ್ಟಣದ ಹಳೇ ತಾಲೂಕು ಕಚೇರಿಯನ್ನು ಪುರಾತತ್ವ ವಸ್ತು ಸಂಗ್ರಹಾಲಯವಾಗಿ ಮರುಬಳಕೆ ಮಾಡಲು ಸೂಕ್ತವಾಗಿದ್ದು ಈ ಕಟ್ಟಡದ ಸಂರಕ್ಷಣೆಯನ್ನು ಮೂಲಸ್ಥಿತಿಯಲ್ಲಿಯೇ ಉಳಿಸಿಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಅಧಿಕಾರಿಗಳು ಶಿಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪಾರಂಪರಿಕ ಕಟ್ಟಡವನ್ನು ಜಿಲ್ಲಾ ಸರ್ಕಾರಿ ಪುರಾತತ್ವ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಟ್ಟಡವನ್ನು ನಿಯಮಾನುಸಾರ ಕಂದಾಯ ಇಲಾಖೆಯಿಂದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶ ಹೊರಬಿದ್ದಿದೆ.

ಗಂಗರಸರಿಂದ &ವಿಜಯನಗರ ಅರಸರವರೆಗೆ: ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿ ಹೊಂದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ಕುರುಹುಗಳಿವೆ, ನಾಡಿನ ಗಂಗರಸರ ಕಾಲದಿಂದ ವಿಜಯನಗರ ಅರಸರ ಕಾಲದವರೆಗಿನ ಶಿಲಾಶಾಸನಗಳು, ಮಾಸ್ತಿಗಲ್ಲು, ವೀರಗಲ್ಲು, ದೇವಸ್ಥಾನಗಳು, ದೇವರ ವಿಗ್ರಹಗಳು ಸೇರಿ ಬೌದ್ದನೆಲೆಯಲ್ಲಿನ ಕುರುಹುಗಳನ್ನು ಸ್ಥಳಿಯವಾಗಿಯೇ ಸಂರಸುವ ಪ್ರಯತ್ನ ನಡೆಯುತ್ತಿದೆ. ಇದರ ಜತೆಗೆ ಸ್ಥಳಿಯವಾಗಿ ಅನೇಕ ಇತಿಹಾಸ ಸಂಶೋಧಕರು ಸ್ವ ಆಸಕ್ತಿಯಿಂದ ಇಂಥ ಶಾಸನಗಳನ್ನು ಪತ್ತೆ ಮಾಡಿ ನಾಡಿನ ಇತಿಹಾಸ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಇಂಥ ಪಳೆಯುಳಿಕೆ, ಐತಿಹಾಸಿಕ ಕುರುಹುಗಳನ್ನು ಸ್ಥಳಿಯವಾಗಿ ದೇವಸ್ಥಾನ ಸೇರಿ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿಯೇ ಇಟ್ಟು ಸಂರಸುವ ಕಸರತ್ತು ನಡೆಯುತ್ತಿದೆ. ಪುರಾತತ್ವ ಇಲಾಖೆಯೂ ಈಗಾಗಲೇ ಗ್ರಾಮ ಮಟ್ಟದಿಂದ ಸರ್ವೇ ನಡೆಸಿ ಎಲ್ಲೆಲ್ಲಿ ಇಂಥ ಐತಿಹಾಸಿಕ ಕುರುಹುಗಳಿವೆ ಎಂಬುದನ್ನು ಪಟ್ಟಿ ಮಾಡಿಟ್ಟುಕೊಂಡಿದೆ. ದೇವನಹಳ್ಳಿಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಯಲ ನಿರ್ಮಾಣವಾದರೆ ಇವುಗಳನ್ನೆಲ್ಲ ಒಂದೇ ಸೂರಿನಡಿ ಸಂರಸಿ ಪ್ರದರ್ಶಿಸುವ ಉದ್ದೇಶ ಸಾಕಾರಗೊಳ್ಳಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮತ್ತಷ್ಟು ಇತಿಹಾಸ ಸಂಶೋಧನೆ ಉತ್ಖನನಕ್ಕೆ ಇದು ಸಹಕಾರಿಯಾಗಲಿದೆ ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳ ಅಭಿಮತವಾಗಿದೆ. ನಾಡಿನ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಬಹಳಷ್ಟು ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ಇಲಾಖೆ ತ್ವರಿತ ಕ್ರಮಕೈಗೊಳ್ಳಲು ಉತ್ಸುಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವನಹಳ್ಳಿ ಹಳೇ ತಾಲೂಕು ಕಚೇರಿಯನ್ನು ಪುರಾತತ್ವ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಇದೀಗ ಕಂದಾಯ ಇಲಾಖೆಯಿಂದ ನಮ್ಮ ಇಲಾಖೆಗೆ ಹಸ್ತಾಂತರಿಸುವ ಅದೇಶ ಬಂದಿದ್ದು, ಶ್ರೀದಲ್ಲೇ ಡಿಪಿಆರ್​ ಸಿದ್ದಪಡಿಸಿ ವಿಶೇಷ ಬಜೆಟ್​ನ ಅನುದಾನದಡಿ ಕಾರ್ಯಪ್ರವೃತ್ತರಾಗಲಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ ಗ್ರಾಮಮಟ್ಟದಿಂದ ಸರ್ವೇ ನಡೆಸಿದ್ದು ಶಿಲಾಶಾಸನಗಳು, ಪುರಾತನ ವಿಗ್ರಹಗಳು ಸೇರಿ ಅನೇಕ ಪ್ರಾಚ್ಯವಸ್ತುಗಳ ಪಟ್ಟಿ ಸಿದ್ದಪಡಿಸಲಾಗಿದೆ. ಇವುಗಳನ್ನು ಮ್ಯೂಸಿಯಂನಲ್ಲಿ ಸಂರಕ್ಷಣೆ ಮಾಡಿ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು.

> ಕಾವ್ಯಶ್ರೀ, ಪುರಾತತ್ವ ಇಲಾಖೆ ಉಪನಿರ್ದೇಶಕಿ ಬೆಂ.ಗ್ರಾಮಾಂತರ

ದೇವನಹಳ್ಳಿ ಹಳೇ ತಹಸೀಲ್ದಾರ್​ ಕಚೇರಿಯನ್ನು ಪ್ರಾಚ್ಯವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವಂತೆ ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಜಿಲ್ಲೆ ವ್ಯಾಪ್ತಿಯಲ್ಲಿ ಅಗಾಧವಾದ ಪ್ರಾಚ್ಯವಸ್ತುಗಳಿವೆ ಅವುಗಳನ್ನು ಒಂದೆಡೆ ಸಂರಕ್ಷಣೆ ಮಾಡಿದರೆ ಜಿಲ್ಲೆಯ ಇತಿಹಾಸಕ್ಕೆ ಮತ್ತಷ್ಟು ಬೆಳಕಿಗೆ ಬರಲಿದೆ, ಈ ನಿಟ್ಟಿನಲ್ಲಿ ಜಿಲ್ಲೆಯ ಜನರಿಂದ 10 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸಿ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿಯಿಂದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಮನವಿ ಪತ್ರ ಸಲ್ಲಿಸಲಾಗಿತ್ತು. ಕಡೆಗೂ ಪ್ರಾಚ್ಯವಸ್ತು ಸಂಗ್ರಹಾಯಲ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿರುವುದು ದೀಪಾವಳಿಯ ಈ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ದೊಡ್ಡ ಉಡುಗೊರೆ ನೀಡಿದಂತಾಗಿದೆ.

.> ಬಿಟ್ಟಸಂದ್ರ ಗುರುಸಿದ್ದಯ್ಯ, ಇತಿಹಾಸ ಸಂಶೋಧಕ ದೇವನಹಳ್ಳಿ