ವಿಜಯವಾಣಿ ಸುದ್ದಿಜಾಲ ಮಧುರೆ
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಮಜರ ವಡೇರಹಳ್ಳಿ ಗ್ರಾಮದಲ್ಲಿದ್ದ 2 ಎಕರೆ 10 ಗುಂಟೆ ವಿಸ್ತೀರ್ಣದ ಗ್ರಾಮಠಾಣಾ (ಸರ್ಕಾರಿ) ಜಾಗದ ಒತ್ತುವರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ್ ಕುಮಾರ್ ನೇತೃತ್ವದಲ್ಲಿ ಪಂಚಾಯ್ತಿತಿ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಯಂತ್ರಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಯಿತು. ತೆರವುಗೊಳಿಸಲಾದ ಜಾಗವನ್ನು ಪಂಚಾಯಿತಿ ಸುಪರ್ದಿಗೆ ಪಡೆಯಲಾಯಿತು. . ಗ್ರಾಮಠಾಣಾ ಜಾಗದ ಒತ್ತುವರಿ ತೆರವಿಗಾಗಿ 2 ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದೆವು. ಪಂಚಾಯಿತಿಗೆ ಸಲ್ಲಿಸಿದ್ದ ಅರ್ಜಿಯಂತೆ ಅಧಿಕಾರಿಗಳು ಸರ್ವೇ ನಡೆಸಿ, ಜಾಗವನ್ನು ಪಂಚಾಯಿತಿ ಸುಪರ್ದಿಗೆ ಪಡೆದಿದ್ದಾರೆ ಎಂದು ಕೆಆರ್ಎಸ್ ಪಕ್ಷದ ತಾಲೂಕು ಕಾರ್ಯದರ್ಶಿ ಜಯರಾಮ್ ಪ್ರತಿಕ್ರಿಯಿಸಿದರು.