More than 200 species of birds discovered 
ಬೆಂಗಳೂರು ಗ್ರಾಮಾಂತರ

ಕೈಗಾರೀಕರಣದ ನಡುವೆಯೂ ಹಕ್ಕಿಗಳ ಕಲರವ

More than 200 species of birds discovered

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನಗರೀಕರಣ ಹಾಗೂ ಕೈಗಾರೀಕರಣದ ಹೊಡೆತಕ್ಕೆ ಸಿಲುಕಿ ಪ ಸಂಕುಲಗಳು ನಶಿಸಿಹೋಗುತ್ತಿವೆ ಎಂಬ ಆತಂಕದ ನಡುವೆ ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ಪ್ರಬೇಧದ ಪಗಳು ಪತ್ತೆಯಾಗಿರುವುದು ಪ ಪ್ರಿಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಸಂತಸ ಇಮ್ಮಡಿಸಿದೆ.

ಇತ್ತೀಚಿಗೆ ಕರ್ನಾಟಕ ರ್ಬಡ್​ ಮಾನಿಟರಿಂಗ್​ ನೆಟ್​ವರ್ಕ್​ ಸಂಸ್ಥೆ ನಡೆಸಿದ ಪಕ್ಷಿ ಗಣತಿಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 200 ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ಕೆರೆಗಳ ಪ್ರದೇಶದಲ್ಲಿ ಸ್ಥಳಿಯ ಪಕ್ಷಿಗಳ ಜತೆಗೆ, ಪ್ರತಿ ವರ್ಷ ನವೆಂಬರ್​ನಿಂದ ಫೆಬ್ರವರಿವರೆಗಿನ ಕಾಲಮಾನದಲ್ಲಿ ವಲಸೆ ಬರುವ ವಿದೇಶಿ ಪಗಳೂ ಸೇರಿವೆ. ಬರದ ನಡುವೆ ಜಿಲ್ಲೆಯಲ್ಲಿನ ಕೆರೆಗಳಲ್ಲಿ ಅಳಿದುಳಿದ ನೀರಿನಲ್ಲೇ ಬಾನಾಡಿಗಳ ಚೆಲ್ಲಾಟದ ದೃಶ್ಯ ಕಾಣಸಿಗುತ್ತಿದೆ. ಮಂಗೋಲಿಯಾ, ಇರಾನ್​, ಚೀನಾ ಸೇರಿ ವಿವಿಧ ದೇಶಗಳಿಂದ ವಲಸೆ ಬಂದಿರುವ ಹಕ್ಕಿಗಳನ್ನು ಸಂಸ್ಥೆ ಗುರುತಿಸಿದೆ.

ಕೈಗಾರೀಕರಣದಿಂದ ಸಂಕಷ್ಟ:

ಕಳೆದೊಂದು ದಶಕದಿಂದಿಚೀಗೆ ಜಿಲ್ಲೆಯಲ್ಲಿ ಬೃಹತ್​ ಪ್ರಮಾಣದಲ್ಲಿ ಕೈಗಾರಿಕಾ ವಲಯ ವಿಸ್ತರಿಸಿದೆ, ನೆಲಮಂಗಲ ತಾಲೂಕು ದಾಬಸ್​ಪೇಟೆ ಹೋಬಳಿಯ ಸೋಂಪುರ ಕೈಗಾರಿಕಾವಲಯ ದೊಡ್ಡಬಳ್ಳಾಪುರದಲ್ಲಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿನ ಪಿಳ್ಳಗುಂಪ ಕೈಗಾರಿಕಾ ವಲಯಗಳು ವಿಸ್ತರಿಸುತ್ತಿದ್ದಂತೆ, ವಾಯುಮಾಲಿನ್ಯ, ಜಲಮಾಲಿನ್ಯದ ಪ್ರಮಾಣ ಹೆಚ್ಚಿದೆ. ಕೈಗಾರೀಕ ವಲಯದ ಸುತ್ತಲೂ ವಸತಿ ಪ್ರದೇಶಗಳು ಮೈದೆಳೆಯುತ್ತಿದ್ದು, ಕೆರೆಕುಂಟೆಗಳ ಒತ್ತುವರಿಯೂ ಅವ್ಯಾಹತವಾಗಿದೆ, ಪರಿಣಾಮವಾಗಿ ಸ್ಥಳಿಯ ಹಕ್ಕಿಗಳ ಜತೆಗೆ ವಲಸೆ ಹಕ್ಕಿಗಳಿಗೂ ಆಶ್ರಯವಿಲ್ಲದಂತಾಗಿದೆ. ಕೈಗಾರಿಕೆಗಳಿಂದ ಹರಿದು ಬರುತ್ತಿರುವ ರಾಸಾಯನಿಕಯುಕ್ತ ನೀರು ಕೆರೆ ಒಡಲು ಸೇರುತ್ತಿದ್ದು ಕೆರೆಯ ನೀರು ವಿಷಯುಕ್ತವಾಗುತ್ತಿದೆ. ಇದರಿಂದ ಹಕ್ಕಿಗಳು ಅವಸಾನಕ್ಕೆ ಕಾರಣವಾಗುತ್ತಿವೆ ಎಂಬುದು ಪರಿಸರತಜ್ಞರ ಆತಂಕವಾಗಿದೆ. ಇಂಥ ದುಸ್ಥಿತಿಯ ನಡುವೆಯೂ ಇತ್ತೀಚಿನ ಗಣತಿಯಲ್ಲಿ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಪಗಳ ಪ್ರಬೇಧಗಳು ಪತ್ತೆಯಾಗಿರುವುದು ಪರಿಸರ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಬಾನಾಡಿಗಳ ವಲಸೆ ಆರಂಭ:

ಚಳಿಗಾಲದಲ್ಲಿ ಜಿಲ್ಲೆಗೆ ವಿದೇಶಗಳಿಂದ ವಿವಿಧ ಬಗೆಯ ಪಗಳು ಸುರ್ದಿರ್ಘ ಹಾರಾಟದ ಮೂಲಕ ಆಗಮಿಸುತ್ತವೆ. ಅದರಂತ ಈ ಬಾರಿಯೂ ಪಕ್ಷಿಗಳ ವಲಸೆ ಆರಂಭವಾಗಿದೆ. ಪ್ರಸಕ್ತ ಸಾಲಿನ ಅ.30 ರಿಂದ ನ.2ರವರೆಗೆ 4 ದಿನಗಳ ಕಾಲ ನಡೆದ ಪಕ್ಷಿ ಗಣತಿಯಲ್ಲಿ 109 ಮಂದಿ ಗಣತಿದಾರರು ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ವೇಳೆ 200 ಪಕ್ಷಿ ಪ್ರಬೇಧಗಳು ಕಂಡುಬಂದಿವೆ. ಇನ್ನಷ್ಟು ಪಕ್ಷಿ ಸಂಕುಲಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು, ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ಇಲ್ಲಿವೆ. ನಂದಿಬೆಟ್ಟ, ಮಾಕಳಿ, ಹುಲುಕುಡಿ ಬೆಟ್ಟಗಳ ತಪ್ಪಲಿನಲ್ಲೂ ಹಲವು ಕೆರೆಗಳಿವೆ, ಅದರಲ್ಲೂ ಹೊಸಕೋಟೆಯ ಕೆರೆ ವಲಸೆ ಹಕ್ಕಿಗಳ ಪ್ರಮುಖ ತಾಣವಾಗಿ ಗುರುತಿಸಲ್ಪಟ್ಟಿದೆ. ಚಳಿಗಾಲದಲ್ಲಿ ವಿವಿಧ ದೇಶಗಳಿಂದ ದಕ್ಷಿಣ ಭಾರತದ ಕಡೆಗೆ ಹಲವು ಪ್ರಬೇಧದ ಪಗಳು ವಲಸೆ ಬರುತ್ತವೆ. ಈ ವರ್ಷದ ವಲಸೆ ಈಗಾಗಲೇ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಆರಂಭಿಸಿವೆ. ಗದ್ದೆ ಗೊರವ, ಸೂಜಿ ಬಾಲದ ಬಾತುಕೋಳಿ, ಬಿಳಿ ಹುಬ್ಬಿನ ಬಾತು, ನಾರ್ದನ್​ ಶೋವೆಲಾರ್​, ರಾಜಹಂಸ. ವ್ಯಾರ್ಬಲ್ಸ್​, ಯುರೇನಿಷಿನ್​ ರೋಲರ್​, ಮಾರ್ಷ್​ ಹಾರಿಯರ್​, ನವರಂಗಿ ಪಕ್ಷಿ, ಬೆಳ್ಳಕ್ಕಿ, ಬಕಪಕ್ಷಿ,, ಕೊಕ್ಕರೆ, ಗಿಳಿಗಳು, ಮೈನಾ, ನವಿಲು, ನೀಲಕಂಠ, ಹಾಲಕ್ಕಿ ಗೂಬೆ, ಕಣಜದ ಗೂಬೆ, ಗುಬ್ಬಚ್ಚಿ, ಮರಕುಟಿಗ ಸೇರಿ ನುರಾರು ಬಗೆಯ ಪಗಳು ಕಾಣಸಿಗಲಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅ.30ರಿಂದ ನ.2 ರವರೆಗೆ ಪಕ್ಷಿ ಗಣತಿ ನಡೆದಿದ್ದು, ಇದರಲ್ಲಿ 200ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಕಂಡುಬಂದಿರುವುದನ್ನು ದಾಖಲಿಸಲಾಗಿದೆ. ಸ್ಥಳಿಯ ಪಗಳೊಂದಿಗೆ ವಲಸೆ ಬಂದಿರುವ ವಿದೇಶಿ ಪಗಳು ಇದರಲ್ಲಿ ಸೇರಿದ್ದು, ಕೆರೆಯಂಗಳದಲ್ಲಿ ಹಕ್ಕಿಗಳ ಹಾರಾಟವನ್ನು ಕಾಣಬಹುದಾಗಿದೆ.

ಸಂತೋಷ್​, ಡಿಸಿಎಫ್​, ಅರಣ್ಯ ಇಲಾಖೆ, ಬೆಂ. ಗ್ರಾಮಾಂತರ.

ದಶಕಗಳಿಂದೀಚೆಗೆ ಜಿಲ್ಲೆಯಲ್ಲಿ ಕೈಗಾರಿಕಾವಲಯ ದೊಡ್ಡಮಟ್ಟದಲ್ಲಿ ವಿಸ್ತರಿಸಿದೆ, ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ಕೆರೆಗಳಿಗೆ ನೇರವಾಗಿ ಸೇರುತ್ತಿದ್ದು, ಕೆರೆ ಒಡಲು ವಿಷಯುಕ್ತವಾಗುತ್ತಿದೆ, ಜತೆಗೆ ವಾಯುಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಪ ಸಂಕುಲಗಳು ನಾಪತ್ತೆಯಾಗುತ್ತಿವೆ. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಮನ ನೀಡಬೇಕಿದೆ.

ಓಹಿಲೇಶ್​, ಪರಿಸರ ಪ್ರೇಮಿ, ಹೊಸಹೋಟೆ