ದೊಡ್ಡಬಳ್ಳಾಪುರದ ಸನ್​ಶೈನ್​ ಫಿಟ್​ನೆಸ್​ ಸೆಂಟರ್​ನಲ್ಲಿ ಆಯೋಜಿಸಿದ್ದ ವಿಶ್ವದಾಖಲೆಯ ಯೋಗಸ್ಪರ್ಧೆಯಲ್ಲಿ ಎ.ಜಿ.ಯಶಸ್ವಿನಿ ಕೂಮಾರ್ಸನದಲ್ಲಿ 215 ಕೆ.ಜಿ. ಭಾರ ಎತ್ತುವ ಮೂಲಕ ಸಾಧನೆ ಮಾಡಿದರು. ಮುಖಂಡ ಕೆ.ಎಂ.ಹನುಮಂತರಾಯಪ್ಪ, ನಗರಸಭೆ ಸಾಯಿ ಸಮಿತಿ ಅಧ್ಯಕ್ಷ ರವಿಕುಮಾರ್​, ಮಹಿಳಾ ಸಮಾಜದ ಅಧ್ಯಕ್ಷೆ ವತ್ಸಲಾ, ಸನ್​ಶೈನ್​ ಫಿಟ್​ನೆಸ್​ ಸೆಂಟರ್​ ಮಾಲೀಕ ಆರ್​.ಸುರೇಶ್​, ಯೋಗ ಗುರುಗಳಾದ ಎಚ್​.ಎಸ್​.ರಾಮಕೃಷ್ಣ, ಗಂಗಾಧರ್​ ಭಾಗವಹಿಸಿದ್ದರು.  
ಬೆಂಗಳೂರು ಗ್ರಾಮಾಂತರ

ಕೂಮಾರ್ಸನದಲ್ಲಿ ಭಾರ ಎತ್ತಿ ವಿಶ್ವ ದಾಖಲೆ

* ಮಹಿಳಾ ವಿಭಾಗದಲ್ಲಿ ಯಶಸ್ವಿನಿ, ಪುರುಷರ ವಿಭಾಗದಲ್ಲಿ ಶ್ರೀವತ್ಸರಾಜ್​ ವಿಶ್ವ ದಾಖಲೆ ಪ್ರದರ್ಶನ

ದೊಡ್ಡಬಳ್ಳಾಪುರ : ಕೂಮಾರ್ಸನದಲ್ಲಿ ಭಾರ ಎತ್ತುವ ಮೂಲಕ ಮಹಿಳಾ ವಿಭಾಗದಲ್ಲಿ ಎ.ಜಿ.ಯಶಸ್ವಿನಿ ಹಾಗೂ ಪುರುಷರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ನಿವಾಸಿ ಎಚ್​.ಆರ್​.ಶ್ರೀವತ್ಸರಾಜ್​ ವಿಶ್ವ ದಾಖಲೆ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ದೊಡ್ಡಬಳ್ಳಾಪುರದ ಸನ್​ಶೈನ್​ ಫಿಟ್​ನೆಸ್​ ಸೆಂಟರ್​ನಲ್ಲಿ ಅ.14ರಂದು ನಡೆದ ವಿಶ್ವ ದಾಖಲೆಯ ಪ್ರದರ್ಶನದಲ್ಲಿ ಶ್ರೀ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಎ.ಜಿ.ಯಶಸ್ವಿನಿ ಕೂಮಾರ್ಸನದಲ್ಲಿ 215 ಕೆ.ಜಿ. ಭಾರ ಎತ್ತಿ ಮಹಿಳಾ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.

ಮೂಡುಬಿದಿರೆಯ ಆಳ್ವಾಸ್​ ಪ್ರತಿಷ್ಠಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎಚ್​.ಆರ್​.ಶ್ರೀವತ್ಸರಾಜ್​ ಇದೇ ಆಸನದಲ್ಲಿ 265 ಕೆ.ಜಿ. ಭಾರ ಎತ್ತಿ ಪುರುಷರ ವಿಭಾಗದಲ್ಲಿ ದಾಖಲೆ ಪ್ರದರ್ಶಿಸಿದರು. ಯೋಗಾಭ್ಯಾಸದ ಮೂಲಕ ದೈಹಿಕ ಸಾಮರ್ಥ್ಯ, ಏಕಾಗ್ರತೆ ಹಾಗೂ ಶಿಸ್ತು ಬೆಳೆಸಿಕೊಳ್ಳಬಹುದು ಎಂಬುದಕ್ಕೆ ಈ ಪ್ರದರ್ಶನ ಸಾಕ್ಷಿಯಾಯಿತು.

ವೈದ್ಯ ಡಾ.ವಿಜಯ್​ ಕುಮಾರ್​ ಮಾತನಾಡಿ, ಯೋಗಾಭ್ಯಾಸದ ಮಹತ್ವ ಹಾಗೂ ದೈಹಿಕ ಕ್ಷಮತೆ ವೃದ್ಧಿಸಿಕೊಳ್ಳುವಲ್ಲಿ ಅದರ ಪಾತ್ರದ ಕುರಿತು ಮಾಹಿತಿ ನೀಡಿದರು. ನಿಯಮಿತ ಯೋಗಾಭ್ಯಾಸವು ದೇಹದ ನಮ್ಯತೆ, ಸಮತೋಲನ ಮತ್ತು ಏಕಾಗ್ರತೆ ಸುಧಾರಿಸಲು ನೆರವಾಗುತ್ತದೆ. ಪ್ರತಿನಿತ್ಯದ ಯೋಗ ಅಭ್ಯಾಸದಿಂದ ಆರೋಗ್ಯವೂ ಸಾಕಷ್ಟು ಸುಧಾರಿಸಲಿದ್ದು, ಹೊಸ ಉತ್ಸಾಹ ಮೂಡುತ್ತದೆ ಎಂದರು.