ಪ್ರಮುಖ ಮುಖ್ಯಾಂಶಗಳು
ದೊಡ್ಡಬಳ್ಳಾಪುರ:
ಮುಂಗಾರು ಕೈಕೊಟ್ಟ ಕಾರಣ ರಾಜ್ಯ ಸರ್ಕಾರ ನೂರಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಅದರಲ್ಲಿ ಜಿಲ್ಲೆಯ 4 ತಾಲೂಕುಗಳ ಪೈಕಿ ಮೂರನ್ನು ಮಾತ್ರ ಆಯ್ಕೆ ಮಾಡಿ, ದೊಡ್ಡಬಳ್ಳಾಪುರವನ್ನು ಕೈಬಿಟ್ಟಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಜತೆಗೆ ಹೀಗೆ ಮಾಡಲು ಇದು ಬಿಜೆಪಿ ಶಾಸಕರಿರುವ ಕ್ಷೇತ್ರ ಆಗಿರುವುದೇ ಕಾರಣವೇ ಎಂಬ ಚರ್ಚೆಗಳು ಶುರುವಾಗಿವೆ.
ದೊಡ್ಡಬಳ್ಳಾಪುರವನ್ನೂ ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿವೆ.
ಎರಡು ವಾರದ ಹಿಂದೆ ಶೇ.20 ರಾಗಿ ಬಿತ್ತನೆ ಆಗಿತ್ತು. ಆದರೆ ಕಳೆದ 10 ದಿನಗಳ ಅವಧಿಯಲ್ಲಿ ಮಳೆ ಕೊಂಚ ಚುರುಕಾದ ಹಿನ್ನೆಲೆಯಲ್ಲಿ ಬಿತ್ತನೆಯೂ ಚುರುಕುಗೊಂಡಿದೆ. ಒಟ್ಟಾರೆ ಕೃಷಿ ಇಲಾಖೆಯ ಬಿತ್ತನೆ ಪ್ರಮಾಣದ ಮಾಹಿತಿ ಗಮನಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 62,700 ಹೆಕ್ಟೇರ್ ರಾಗಿ ಬಿತ್ತನೆ ಗುರಿಯಿತ್ತು, ಇದರಲ್ಲಿ ಅಂದಾಜು 60,847 ಹೆಕ್ಟೇರ್(ಶೇ.97), ಮೆಕ್ಕೆಜೋಳ 7320 ಹೆಕ್ಟೇರ್ ಗುರಿಯಲ್ಲಿ 2566(ಶೇ.35) ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 19,220 ಹೆಕ್ಟೇರ್ ರಾಗಿ ಬಿತ್ತನೆ ಗುರಿಯಲ್ಲಿ 18,650 ಹೆಕ್ಟೇರ್ ಬಿತ್ತನೆ ಆಗಿದೆ. ಇದು ಅಂದಾಜು ಮಾಹಿತಿಯಾಗಿದ್ದು, ಕೆಲವೆಡೆ ಬಿತ್ತನೆ ಮಾಡಿದ್ದರೂ ಸರಿಯಾದ ಸಮಯಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಬೀಜಗಳಿಗೆ ಹಾನಿಯಾಗಿದೆ. ಇನ್ನೂ ನಾನಾ ರೀತಿಯ ಸಮಸ್ಯೆಗಳಿದ್ದು, ಬೆಳೆ ಸಮೀಕ್ಷೆಯ ನಂತರ ಸಂಪೂರ್ಣ ಸ್ಥಿತಿಗಳ ಬಗ್ಗೆ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.
ಜಿಲ್ಲೆಯ 1032 ಕೆರೆಗಳಲ್ಲಿ ಬಹುತೇಕ ಎಲ್ಲವೂ ಶೇ.50ರಷ್ಟೂ ಭರ್ತಿಯಾಗಿಲ್ಲ. ಇದರಿಂದ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆಯಿದೆ.
ದೊಡ್ಡಬಳ್ಳಾಪುರ ತಾಲೂಕನ್ನು ಕೂಡ ಬರಪೀಡಿತ ಎಂದು ಘೋಷಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಬರೆದು ಒತ್ತಾಯಿಸಲಾಗಿದೆ.
ಶಾಸಕ, ದೊಡ್ಡಬಳ್ಳಾಪುರ