ನೆಲಮಂಗಲ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿಧಾನ ಪರಿಷತ್​ ಮಾಜಿ ಸದಸ್ಯ ಇ.ಕೃಷ್ಣಪ್ಪ, ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸ ಮೂರ್ತಿ, ಎಂ.ವಿ.ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ, ವಿಶಾಲ್​ ಶಾಲೆ ಸಂಸ್ಥಾಪಕ ಟಿ.ಕೆ.ನರಸೇಗೌಡ ಇತರರಿದ್ದರು. 
ಬೆಂಗಳೂರು ಗ್ರಾಮಾಂತರ

ಪ್ರಾಮಾಣಿವಾಗಿ ಮತ ಹಾಕಿ

ವಿಧಾನ ಪರಿಷತ್​ ಮಾಜಿ ಸದಸ್ಯ ಇ.ಕೃಷ್ಣಪ್ಪ ಮನವಿ

ನೆಲಮಂಗಲ : ಸಮಾಜ ನಿರ್ಮಿಸುವ ಶಿಕ್ಷಕರು ಬುದ್ಧಿ ಜೀವಿಗಳಾಗಿದ್ದು, ಪ್ರಾಮಾಣಿಕವಾಗಿ ಮತದಾನ ಮಾಡಬೇಕು ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಇ.ಕೃಷ್ಣಪ್ಪ ಕರೆ ನೀಡಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಬಿನ್ನಮಂಗಲ ಸಮೀಪದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣ ಅವರ ರಾಜಕೀಯ ಜೀವನ ಜಾತ್ರೆಗೆ ಹೋದರೆ ಟೆಂಟ್​ ಹಾಕಿ ಸಿನಿಮಾ ನೋಡುವಂತಿದೆ. ಶಾಶ್ವತವಾಗಿ ಟೆಂಟ್​ ನಿರ್ಮಿಸಿಲ್ಲ ಅಷ್ಟೇ. ಪಕ್ಷಾಂತರಕ್ಕೆ ಅವರದು ದೊಡ್ಡ ಕೊಡುಗೆ. ಶಿಕ್ಷಕರ ಕ್ಷೇತ್ರಕ್ಕೆ ಕೊಡುಗೆ ಶೂನ್ಯಎಂದರು.

ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಸೋಂಪುರ ಮಾದರಿ ಶಾಲೆಯಲ್ಲಿ ಮತದಾನ ನಡೆಯಲಿದ್ದು, ತ್ಯಾಮಗೊಂಡ್ಲುವಿನಲ್ಲಿ 203, ಸೋಂಪುರ ಹೋಬಳಿಯಲ್ಲಿ 203, ನಗರ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 442 ಶಿಕ್ಷಕರು ಹಾಗೂ 258 ಮತದಾರರು ಸೋಲೂರು, ಕುದೂರಿನಲ್ಲಿ ಮತದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಮುಖಂಡ ಸಪ್ತಗಿರಿಶಂಕರ್​ ನಾಯಕ್​, ಜೆಡಿಎಸ್​ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಾಯಾಧ್ಯಕ್ಷ ಬೂದಿಹಾಲ್​ ರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್​, ವಕ್ತಾರ ಕನಕರಾಜು, ಟಿಎಪಿಸಿಎಂಎಸ್​ ಮಾಜಿ ನಿರ್ದೇಶಕ ಸಂಪತ್​ಬಾಬು, ನಗರಸಭೆ ಸದಸ್ಯ ಸುನೀಲ್​ಮೂಡ್​, ಅಂಜನಮೂರ್ತಿ, ಪುಷ್ಪಲತಾ ಮಾರೇಗೌಡ, ರಾಜಮ್ಮಪಿಳ್ಳಪ್ಪ, ರಾಮಮೂರ್ತಿ, ತಾಪಂ ಮಾಜಿ ಸದಸ್ಯ ರುದ್ರೇಶ್​, ಪ್ರಕಾಶ್​, ಮುಖಂಡ ಹಾಡ್ಯಾಳ್​ ಹರ್ಷ, ಬೃಂಗೇಶ್​, ಶಿವಕುಮಾರ್​, ಮಂಜುನಾಥ್​, ವಿಷ್ಣು, ಕೇಶವ್​, ಸುಬ್ರಮಣಿ, ಉಮೇಶ್​, ರಮೇಶ್​, ರಾಜಮ್ಮಪ್ರಕಾಶ್​, ನಾಗರಾಜು ಇತರರಿದ್ದರು.