ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿದ್ಯಾರ್ಥಿಗಳ ಜೀವನಾಡಿಯಾಗಿದ್ದು ಇದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿಸರ್ಗ ಪಬ್ಲಿಕ್ ಫ್ರೌಢಶಾಲೆ ಅಧ್ಯಕ್ಷ ಹನುಮಂತರಾಜು ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಸಮೀಪದ ಖಾನಿಮಠ ಬಳಿಯ ನಿಸರ್ಗ ಪಬ್ಲಿಕ್ ಫ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನ ಎನ್ನುವುದು ಓದಿನ ಜತೆಗೆ ಪತ್ರಿಕೆಯಲ್ಲೂ ಅಡಗಿರುತ್ತದೆ. ಅದರಲ್ಲೂ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವು ವಿದ್ಯಾರ್ಥಿಗಳಿಗೆ ಸಾಕಷ್ಟು ಜ್ಞಾನ ಬಂಡಾರದೊಂದಿಗೆ ಪ್ರತಿದಿನ ಬೆಳಗ್ಗೆ ಬರುತ್ತದೆ. ವಿದ್ಯಾರ್ಥಿಗಳು ಪತ್ರಿಕೆಯಲ್ಲಿನ ವಿದ್ಯಮಾನಗಳು ಹಾಗೂ ಶಿಕ್ಷಣಕ್ಕೆ ಪೂರಕವಾದ ಮಾಹಿತಿ ಓದಿ ತಿಳಿದುಕೊಳ್ಳಬೇಕು ಎಂದರು. ಪ್ರತಿ ದಿನ ಒಂದು ಪತ್ರಿಕೆಯನ್ನು ತೆಗೆದುಕೊಂಡು ಬಿಡುವಿನ ವೇಳೆ ಹಾಗೂ ಮನೆಯಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ಉತ್ತಮ ಫಲಿತಾಂಶ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯ ಆಗುತ್ತದೆ ಎಂದರು.
ಕಾರ್ಯದರ್ಶಿ ಶ್ರೀನಾಥಮೂರ್ತಿ ಮಾತನಾಡಿ, ಉದ್ಯೋಗ ಹುಡುಕುತ್ತಿದ್ದವರೂ ವಿದ್ಯಾರ್ಥಿ ಉದ್ಯೋಗ ಮಿತ್ರ ನೆರವು ಪಡೆಯುವುದು ಉಪಯುಕ್ತ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಸಂಚಿಕೆ ಜ್ಞಾನ ಕಣಜವಾಗಿದೆ ಎಂದು ಹೇಳಿದರು. ಪ್ರತಿ ದಿನ ಮಕ್ಕಳ ಸಂಗಾತಿಯಾಗಿ ಬರುತ್ತಿರುವ ಪತ್ರಿಕೆಯನ್ನು ಪ್ರತಿಯೊಬ್ಬರೂ ಓದಬೇಕು ಎಂದು ತಿಳಿಸಿದರು. ಪ್ರಸ್ತುತ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿರುವುದರಿಂದ ಸಾಕಷ್ಟು ಅನಾನುಕೂಲಕ್ಕೆ ಒಳಗಾಗುತ್ತಿದ್ದಾರೆ. ಇದರ ಬದಲಿಗೆ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವುದು ಅವಶ್ಯ ಎಂದು ಕಿವಿಮಾತು ಹೇಳಿದರು. ಪ್ರತಿದಿನ ಪ್ರಚಲಿತ ವಿದ್ಯಮಾನಗಳನ್ನು ಹೊತ್ತುತರುವ ವಿಜಯವಾಣಿ ದಿನಪತ್ರಿಕೆ ಇದರ ಜತೆಯಲ್ಲಿಯೇ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಉದ್ಯೋಗದ ದೃಷ್ಟಿಯಿಂದ ಪರಿಣಿತರಿಂದ ಸಿದ್ದಪಡಿಸಿಸುವ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ಹೊರತರುತ್ತಿದೆ ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತವಾಗಿದೆ ಎಂದು ತಿಳಿಸಿದರು.
ನಿಸರ್ಗ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ವಿಶೇಷವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಗಳು ಬಣ್ಣ ಬಣ್ಣದ ಪೋಷಾಕಿನೊಂದಿಗೆ ಸಾಂಪ್ರಾದಾಯಿಕ ಉಡುಗೆ ತೊಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.