Three new colleges for the district 
ಬೆಂಗಳೂರು ಗ್ರಾಮಾಂತರ

ಜಿಲ್ಲೆಗೆ ಮೂರು ಹೊಸ ಕಾಲೇಜು

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಗ್ರಾಮೀಣ ಭಾಗದ ಹೈಸ್ಕೂಲ್ ನಂತರದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ
ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದಂತೆ ರಾಜ್ಯದಲ್ಲಿ 23 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಿ ಆದೇಶ ಹೊರಡಿಸಿದೆ. ಈ ಆದೇಶದ ಬೆನ್ನಲ್ಲೆ ಜಿಲ್ಲೆಯಲ್ಲಿ ಮೂರು ಪ್ರೌಢಶಾಲೆಗಳು ಕಾಲೇಜುಗಳಾಗಿ ಉನ್ನತೀಕರಣಗೊಂಡಿದ್ದು ಈಗಾಗಲೇ ಪಿಯು ತರಗತಿಗೆ ದಾಖಲಾತಿ ಆರಂಭಿಸಿದೆ.
ಈ ನೂತನ ಕಾಲೇಜುಗಳಿಗೆ ಪ್ರಥಮ ಭಾಷೆಯಾಗಿ ಕನ್ನಡ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ವಾಣಿಜ್ಯ ವಿಭಾಗದ ಉಆಅಇಖ (ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಗಣಕ ವಿಜ್ಞಾನ) ಸಂಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಈ ಮೂರು ಕಾಲೇಜುಗಳಿಗೆ ಪ್ರತ್ಯೇಕ ಸಂಕೇತ ಸಂಖ್ಯೆಗಳನ್ನು ನಿಗದಿಪಡಿಸಲಾಗಿದೆ. ಬೋಧನಾ ಪ್ರಕ್ರಿಯೆಗೆ ಅನುಕೂಲವಾಗುವಂತೆ ಕಡಿಮೆ ಕಾರ್ಯಭಾರವಿರುವ ಉಪನ್ಯಾಸಕರನ್ನು ನಿಯಮಾನುಸಾರ ಈ ಕಾಲೇಜುಗಳಿಗೆ ನಿಯೋಜಿಸಲು ಜಿಲ್ಲಾ ಉಪ ನಿರ್ದೇಶಕರಿಗೆ ಸರ್ಕಾರ ಸೂಚನೆ ನೀಡಿದ್ದು ಸರ್ಕಾರದ ಸೂಚನೆಯಂತೆ ಈಗಾಗಲೇ ಕಾಲೇಜುಗಳಲ್ಲಿ ತರಗತಿ ಆರಂಭಕ್ಕೆ ಪೂರ್ವ ಸಿದ್ದತೆ ನಡೆಸಲಾಗಿದೆ.
ಮೂರು ಕಾಲೇಜುಗಳು ಯಾವು?
ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯಲ್ಲಿನ ಚನ್ನವೀರನಹಳ್ಳಿ ಹಾಗೂ ಬಾಶೆಟ್ಟಿಹಳ್ಳಿ, ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿನ ಜಾಲಿಗೆ ಗ್ರಾಮದಲ್ಲಿನ ಪ್ರೌಢಶಾಲೆಗಳಿಗೆ ಕಾಲೇಜು ಭಾಗ್ಯ ದೊರೆತಿದ್ದು, ಇವೆರಡು ತಾಲೂಕುಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಯೋಜನೆ ವರದಾನವಾಗಿದೆ.
ಸರ್ಕಾರಿ ಕಾಲೇಜುಗಳ ಸಾಧನೆ:
ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ.95 ಲಿತಾಂಶ ಬಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಉನ್ನತ ಶಿಕ್ಷಣಕ್ಕೆ ಬೆಂಗಳೂರು ಸೇರಿ ನೆರೆಹೊರೆ ಜಿಲ್ಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ತಪ್ಪಿದಂತಾಗಿದೆ. ಇದೇ ರೀತಿ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶೇ.91 ಲಿತಾಂಶ ಬಂದಿದ್ದು, ರಾಜ್ಯದಲ್ಲೇ ಜಿಲ್ಲೆ 6 ನೇ ಸ್ಥಾನ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿನ ಸರ್ಕಾರಿ ಕಾಲೇಜುಗಳಲ್ಲಿನ ಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಹೊಸ ಕಾಲೇಜುಗಳ ಆರಂಭ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹರ್ಷ ಮೂಡಿಸಿದೆ.
ದೂರದ ಸಾಸಲು ವಿದ್ಯಾರ್ಥಿಗಳಲ್ಲಿ ಹರ್ಷ:
ದೊಡ್ಡಬಳ್ಳಾಪುರ ತಾಲೂಕಿನಿಂದ ಸುಮಾರು 28 ಕಿ.ಮೀ ದೂರವಿರುವ ಸಾಸಲು ಹೋಬಳಿಯಲ್ಲಿ ಇಷ್ಟು ವರ್ಷ ಸರ್ಕಾರಿ, ಅನುದಾನಿತ ಅಥವಾ ಖಾಸಗಿ ಕಾಲೇಜುಗಳೂ ಇರಲಿಲ್ಲ. ಇದೇ ಮೊದಲ ಬಾರಿಗೆ ಚನ್ನವೀರನಹಳ್ಳಿ ಪ್ರೌಢಶಾಲೆಗೆ ಪಿಯು ಕಾಲೇಜು ಮಂಜೂರಾಗಿದ್ದು ಪ್ರಥಮ ಪಿಯುಸಿ ದಾಖಲಾತಿಗಳು ಆರಂಭಗೊಂಡಿವೆ. ತಾಲೂಕಿನಲ್ಲಿ ಅತೀ ದೊಡ್ಡ ಹೋಬಳಿಯಾಗಿರುವ ಸಾಸಲು ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳಿಗೆ ಇದು ವರದಾನವಾಗಿ ಪರಿಣಮಿಸಿದೆ.
ದಾಖಲಾತಿ ಆಂದೋಲನ:
ಜಿಲ್ಲೆಯಲ್ಲಿ ಮತ್ತೆ ಮೂರು ಸರ್ಕಾರಿ ಕಾಲೇಜುಗಳು ಆರಂಭವಾಗಿರುವುದರಿಂದ ಈ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಹೈಸ್ಕೂಲ್‌ಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್ ಬ್ಯಾನರ್‌ಗಳ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಡೇಟಾ ಪಡೆದು ಅವರನ್ನು ಪೋನ್ ಕರೆಗಳ ಮೂಲಕ ಸಂಪರ್ಕಿಸಿ ಸರ್ಕಾರಿ ಕಾಲೇಜುಗಳಿಗೆ ಸೇರುವಂತೆ ಮನವಿ ಮಾಡುತ್ತಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ದೊರೆಯುವ ಸೌಲಭ್ಯಗಳು, ನುರಿತ ಶಿಕ್ಷಕರ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿನ ಈ ಹಿಂದಿನ ಹಳೇ ಪದ್ಧತಿಗಳಲ್ಲಿ ಹಲವನ್ನು ಮಾರ್ಪಾಡು ಮಾಡಿ ಅಪ್‌ಡೇಟ್ ಆಗಲಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಲಿತಾಂಶ ಬಂದಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ದಾಖಲಾಗುವ ನಿರೀಕ್ಷೆ ಮೂಡಿಸಿದೆ.
ರಾಜ್ಯದಲ್ಲಿ 23 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಸಾಲಿನಲ್ಲಿ ಜಿಲ್ಲೆಯಲ್ಲಿ ಮೂರು ಕಡೆಗಳಲ್ಲಿ ಕಾಲೇಜು ಮಂಜೂರಾಗಿದ್ದು ಈಗಾಗಲೇ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳು ಲಭ್ಯವಿದೆ. ವಿಷಯವಾರು ಅತಿಥಿ ಶಿಕ್ಷಕರ ನೇಮಕಾತಿಯೂ ನಡೆದಿದೆ. ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದುಕೊಂಡು ಉನ್ನತ ಶಿಕ್ಷಣ ಪಡೆಯಬೇಕು.
ಮೋಹನ್‌ಕುಮಾರ್, ಡಿಡಿಪಿಯು ಬೆಂಗಳೂರು ಗ್ರಾಮಾಂತರ