ಆನೇಕಲ್ : ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಸ್ಟ್ಾವೇರ್ ಉದ್ಯೋಗಿಯೊಬ್ಬರನ್ನು ಅಪಹರಿಸಿ, ಹತ್ಯೆ ಮಾಡಿ ಮನೆಯೊಂದರ ಕೊಠಡಿಯೊಳಗೆ ಗುಂಡಿ ತೋಡಿ ಹೂತು ಹಾಕಿರುವ ಟನೆ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದ, ಕುಪ್ಪಂ ಮೂಲದ ಶ್ರೀನಾಥ್ (34) ಕೊಲೆಯಾದಸ್ಟ್ಾವೇರ್ ಉದ್ಯೋಗಿ. ಹತ್ಯೆಗೈದ ಸಹೋದರ ಸಂಬಂಧಿ ಪ್ರಭಾಕರ್ ಹಾಗೂ ಮತ್ತೊಬ್ಬ ಜಗದೀಶ್ರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಾಥ್ ನಾಪತ್ತೆ ಆಗಿದ್ದಾರೆ ಎಂದು ಆತನ ಪತ್ನಿ ನೇಹಾ ಅ.24ರಂದು ದೂರು ನೀಡಿದ್ದರು. ಅತ್ತಿಬೆಲೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗೌಡ ಹಾಗೂ ಅಪರಾಧ ಪತ್ತೆ ವಿಭಾಗದ ತಂಡ ತನಿಖೆ ಕೈಗೊಂಡಿತ್ತು. ಶ್ರೀನಾಥ್ ಮೊಬೈಲ್ ಸಂಪರ್ಕದ ಜಾಡು ಹಿಡಿದು ತನಿಖೆಗಿಳಿದಾಗಆತನ ಚಿಕ್ಕಪ್ಪನ ಮಗ ಪ್ರಭಾಕರ್ ಮೇಲೆ ಪೊಲೀಸರಿಗೆ ಶಂಕೆ ಮೂಡಿತ್ತು.
ವಕೀಲರ ಜತೆ ಬಂದಿದ್ದ ಆರೋಪಿ : ಪ್ರಭಾಕರನನ್ನು ಪೊಲೀಸ್ ಠಾಣೆಗೆ ಬರುವಂತೆ ಅತ್ತಿಬೆಲೆ ಪೊಲೀಸರು ಸೂಚಿಸಿದ್ದರಿಂದ ಆತ ವಕೀಲರೊಂದಿಗೆ ಠಾಣೆಗೆ ಬಂದಿದ್ದ. ಈ ವೇಳೆ ಆತನನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ ಕೊಲೆ ಪ್ರಕರಣ ಬಯಲಾಗಿದೆ. ಶ್ರೀನಾಥ್ ಹಾಗೂ ಪ್ರಭಾಕರ್ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದರು. ಶ್ರೀನಾಥ್ ಪತ್ನಿ ಜತೆ ಬಳಗಾರನಹಳ್ಳಿಯಲ್ಲಿ ವಾಸವಿದ್ದ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಟ್ಾವೇರ್ ಉದ್ಯೋಗಿಯಾಗಿದ್ದ. ಈತನ ತಾಯಿ ಹಾಗೂ ತಮ್ಮ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿದ್ದರು.
ಶ್ರೀನಾಥ್ ಚಿಕ್ಕಪ್ಪನ ಮಗ ಪ್ರಭಾಕರ್(39) ಆಂಧ್ರದ ಕುಪ್ಪಂನಲ್ಲೇ ವಾಸವಿದ್ದ. ಆಶ್ರಯ ಯೋಜನೆಯಡಿ ಸರ್ಕಾರದಿಂದ ಮಂಜೂರಾಗುವ ಸೈಟು ಪಡೆದು ಅದನ್ನು ಮತ್ತೆ ಮಾರಾಟ ಮಾಡುತ್ತಿದ್ದ. ವ್ಯವಹಾರಕ್ಕೆಂದು ಎರಡು ವರ್ಷಗಳಿಂದ ಹಂತ ಹಂತವಾಗಿ ಸುಮಾರು 40 ಲಕ್ಷ ರೂ.ಗಳನ್ನು ಶ್ರೀನಾಥ್ ನೀಡಿದ್ದ. ಬಳಿಕ ಬಂಡವಾಳ ವಾಪಸ್ ಬಾರದೇ ಇದ್ದಾಗ ಶ್ರೀನಾಥ್ ಇತ್ತೀಚೆಗೆ ಪ್ರಭಾಕರ್ಗೆ ಹಣ ವಾಪಸ್ ಮಾಡುವಂತೆ ಒತ್ತಾಯಿಸಿದ್ದ. ಬಳಿಕ ಶ್ರೀನಾಥ್ ಪತ್ನಿಯೂ ಪ್ರಭಾಕರ್ಗೆ ಹಣ ವಾಪಸ್ ಕೊಡುವಂತೆ ಗಲಾಟೆ ಮಾಡಿದ್ದರು ಎನ್ನಲಾಗಿದೆ.
ನೀಡುವುದಾಗಿ ಕರೆಸಿ ಕೊಲೆ : ಇದಾದ ಬಳಿಕ ಪ್ರಭಾಕರ್ ಹಣ ವಾಪಸ್ ತೆಗೆದುಕೊಂಡು ಹೋಗು ಎಂದು ಶ್ರೀನಾಥ್ನನ್ನು ಆಂಧ್ರದ ಕುಪ್ಪಂಗೆ ಕರೆಸಿಕೊಂಡಿದ್ದ. ಕುಪ್ಪಂ ಬಳಿ ಪ್ರಭಾಕರ್ ನಿರ್ಮಿಸುತ್ತಿದ್ದ ಮನೆಗೆ ಕರೆದುಕೊಂಡು ಹೋಗಿದ್ದು, ನಿರ್ಮಾಣ ಹಂತದಲ್ಲಿದ್ದ ಮನೆಯ ಹಾಲ್ನಲ್ಲಿ ಮಲಗಿದ್ದ ಶ್ರೀನಾಥ್ನನ್ನು ಮೊದಲೇ ಸಂಚು ರೂಪಿಸಿದಂತೆ ಹತ್ಯೆ ಮಾಡಿ, ಮನೆಯ ಕೊಠಡಿಯ ಒಳಗೆ ತೋಡಿದ್ದ ಗುಂಡಿಯ ಒಳಗೆ ಹಾಕಿ ಯಾರಿಗೂ ಗೊತ್ತಾಗದಂತೆ ನಾಟಕವಾಡಿಕೊಂಡಿದ್ದ.
ಪೊಲೀಸರು ಪ್ರಭಾಕರ್ನನ್ನು ವಶಕ್ಕೆ ಪಡೆದಾಗ ನನಗೇನೂ ಗೊತ್ತಿಲ್ಲ ಎಂದಿದ್ದ. ಬಳಿಕ ಆರೋಪಿ ಸಂಪರ್ಕದಲ್ಲಿದ್ದ ಆಂದ್ರದ ಚಿತ್ತೂರು ಮೂಲದ ಜಗದೀಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದಾನೆ. ಆಂಧ್ರದ ಕುಪ್ಪಂ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಕಿಡ್ಯಾಪ್ ಪ್ರಕರಣ ಅತ್ತಿಬೆಲೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಕುಪ್ಪಂ ಠಾಣೆಯಿಂದ ಪ್ರಕರಣವನ್ನು ಅತ್ತಿಬೆಲೆಗೆ ವರ್ಗಾವಣೆ ಮಾಡಲಾಗಿದೆ. ಹತ್ಯೆ ಬಳಿಕ ಹೂತಿಟ್ಟಿದ್ದ ಶ್ರೀನಾಥ್ ಮೃತದೇಹವನ್ನು ಕುಪ್ಪಂ ಪೊಲೀಸರು ಹೊರತೆಗೆಸಿ ಸ್ಥಳಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.