ಮಂಚೇನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಸ್ಟೀರಿಂಗ್​ ಕಟ್​ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್​ ಕಂಬಕ್ಕೆ ಡಿಕ್ಕಿಯಾದ ಬಸ್​. 
ಬೆಂಗಳೂರು ಗ್ರಾಮಾಂತರ

ಸ್ಟೇರಿಂಗ್​ ತುಂಡಾಗಿ ವಿದ್ಯುತ್​ ಕಂಬಕ್ಕೆ ಬಸ್​ ಡಿಕ್ಕಿ

*ರಸ್ತೆ ಗುಂಡಿ ತಪ್ಪಿಸುವಾಗ ಅವಡ *ಅದೃಷ್ಟವಶಾತ್​ ಪಾರಾದ ಪ್ರಯಾಣಿಕರು

ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ದೊಡ್ಡತಿಮ್ಮನಹಳ್ಳಿ ಸಮೀಪದ ಖಾಸಗಿ ಶಾಲೆ ಬಳಿ ಗುರುವಾರ ಬೆಳಗ್ಗೆ 6.30ರ ಸುಮಾರಿಗೆ ಸ್ಟೇರಿಂಗ್​ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್​ ಕಂಬಕ್ಕೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿಹೊಡೆದಿದೆ. ಅದೃಷ್ಟವಶಾತ್​ ಪ್ರಯಾಣಿಕರು ಪಾರಾಯದಿಂದ ಪಾರಾಗಿದ್ದಾರೆ.

ಮಂಚೇನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಮಾರುದ್ದ ಗುಂಡಿ ಬಿದ್ದಿವೆ. ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್​ ರಸ್ತೆ ಗುಂಡಿಗಳಲ್ಲಿ ಹಾದು ಹೋಗುವಾಗ ಸ್ಟೀರಿಂಗ್​ ಕಟ್​ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ವಿದ್ಯುತ್​ ಕಂಬಕ್ಕೆ ಡಿಕ್ಕಿಯಾಗಿದೆ. ಬಸ್​ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಿದ್ಯುತ್​ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಡಿಕ್ಕಿ ವೇಳೆ ವಿದ್ಯುತ್​ ಸರಬರಾಜು ಇಲ್ಲದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಸ್ತೆ ದುರಸ್ತಿಗೆ 6 ದಿನಗಳ ಹಿಂದೆಯಷ್ಟೇ ಭೂಮಿಪೂಜೆ ನೆರವೇರಿದ್ದು, ಈವರೆಗೆ ಯಾವುದೇ ಕೆಲಸ ಆರಂಭಗೊಂಡಿಲ್ಲ.