ಸಮಾಜ ಸೇವಕ ನಲ್ಲೂರಹಳ್ಳಿ ಹರೀಶ್ ರೆಡ್ಡಿ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಯವಿದ್ಯಾರ್ಥಿಗಳಿಗೆ ಶ್ಯೂ, ಶಾಲೆಗೆ ಅಲಮಾರು (ಬಿರು) ಮತ್ತು ಚೇರುಗಳು ಸೇರಿ ಅಗತ್ಯ ಪರಿಕರಿಗಳನ್ನು ವಿತರಿಸಿದರು
ಮಹದೇವಪುರ: ಶಾಲೆಗಳ ಅಭಿವೃದ್ಧಿಗೆ ಹಾಗೂ ಕಷ್ಟದಲ್ಲಿರುವ ಬಡವರಿಗೆ ನೆರವಾಗುವ ಸೇವ ಮನೋಭಾವ ಪ್ರತಿಯೊಬ್ಬರಿಗೂ ಬರಬೇಕು ಆಗ ಮಾತ್ರ ಸಮಾಜದ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕ ಹರೀಶ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸಮಾಜ ಸೇವಕ ನಲ್ಲೂರಹಳ್ಳಿ ಹರೀಶ್ ರೆಡ್ಡಿ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಮ್ಮಿಕೊಂಡಿದ್ದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಅಡಿಯಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಶ್ಯೂ, ಶಾಲೆಗೆ ಅಲಮಾರು (ಬಿರು) ಮತ್ತು ಚೇರುಗಳು ಸೇರಿ ಅಗತ್ಯ ಪರಿಕರಿಗಳನ್ನು ವಿತರಿಸಿ ಮಾತನಾಡಿದರು.
ವೈಟ್‌ಫೀಲ್ಡ್ ಸಮೀಪವಿರುವ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಅವರು ಮೊದಲಿಗೆ ಎಕೆಜಿ ಕಾಲೋನಿ ಸರ್ಕಾರಿ ಶಾಲೆಗೆ ತೆರಳಿ ಅಲಮಾರು (ಬಿರು) ವಿತರಿಸಿದರು. ನಂತರ ಗಾಂಧಿಪುರದ ಸರ್ಕಾರಿ ಶಾಲೆಗೆ ತೆರಳಿ ಅಲಮಾರು ಮತ್ತು 20 ಚೇರ್ ನೀಡಿದರು.ಕಾಡುಗುಡಿಯ ಅಂಬೇಡ್ಕರ್ ಗುಟ್ಟಾ ಸಮೀಪದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಬಂದು 100 ಚೇರ್ ಮತ್ತು ಶೂ ರ‌್ಯಾಕ್ ನೀಡಿದರು. ಕಾರ್ಯಕ್ರಮದ ನಂತರ ವೃದ್ದಾಶ್ರಮಕ್ಕೆ ತೆರಳಿ ಅಲ್ಲಿರುವ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ಮಾತನಾಡಿ ಸಮಾಜ ಸೇವಕ ಹರೀಶ್ ರೆಡ್ಡಿ ಹಲವಾರು ಸಮಾಜ ಸೇವೆಯಲ್ಲಿ ನಿರತರಾಗಿದ್ದು, ಶಾಲಾ ಮಕ್ಕಳಿಗೆ ಹಾಗೂ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ವಿವಿಧ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸರಳತೆ ಮರೆದಿದ್ದಾರೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅವರು ಅನೇಕ ವರ್ಷಗಳಿಂದ ಸತತವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇಂತಹ ಪ್ರತಿಭಾವಂತ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದರೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುಖಂಡರಾದ ರವಿರೆಡ್ಡಿ,ಆನಂದ್ ರೆಡ್ಡಿ, ವಾಸು,ಶಿವರಾಜ್,ಕಿರಣ್, ಪ್ರಸಾದ್ ಮತ್ತಿತರಿದ್ದರು.