ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಧಿಸಿದಂತೆ ಕರಡು ಮದಾರ ಪಟ್ಟಿ ಪ್ರಕಟವಾಗಿದ್ದು ಜಿಲ್ಲೆಯಲ್ಲಿ 796138 ಮದಾರರು ಕರಡು ಮದಾರರ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು.
ದೇವನಹಳ್ಳಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿಗಳಲ್ಲಿ ಈ ಕರಡು ಮದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ತಿಳಿಸಿದರು. ಜಿಲ್ಲೆಯಲ್ಲಿ 9,12,913 ಮತದಾರರ ಪೃಕಿ ಮದಾರರ ಪಟ್ಟಿ ವಿಶೇಷ ಸಮಗ್ರ ಪರಿಕ್ಷರಣೆ ಪ್ರಕ್ರಿಯೆ ಕರಡು ಮದಾರರ ಪಟ್ಟಿ ಪ್ರಕಟವಾದ ಬಳಿಕ 3,91,515 ಪುರುಷರು ಹಾಗೂ 4,04,564 ಮಹಿಳೆಯರು ಇತರೆ 59 ಸೇರಿ 7,96,138 ಮದಾರರನ್ನು ಪಟ್ಟಿಯಲ್ಲಿ ಉಳಿಸಲಾಗಿದೆ , 116775 ಮದಾರರ ಸಂಪರ್ಕವಿಲ್ಲ, ಸ್ಥಳಾಂತರ ಹಾಗೂ ಎರಡು ಕಡೆ ನೋಂದಣಿಗೆ ಸಂಬಧಿಸಿದಂತೆ 1,16,775 ಮದಾರರನ್ನು ಗುರುತಿಸಲಾಗಿದೆ. ಇದರಲ್ಲಿ 65,009 ಶಾಶ್ವತ ಸ್ಥಳಾಂತರ ಹಾಗೂ 25,161 ಮೃತರು, 12,212 ಎರಡು ಕಡೆ ನೊಂದಣಿ , 13,607 ಗೃರು ಹಾಗೂ ಇತರೆ 786 ಸೇರಿವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮ್ಯಾಫಿಂಗ್ ಆಗದೇ ಉಳಿದಿರುವ 26299 ಮತದಾರರು, ಪಟ್ಟಿಯಲ್ಲಿ ಮತದಾರರ ಹೆಸರು, ವಿಳಾಸ ಇನ್ನಿತರೆ ತಪು$್ಪಗಳಿರುವ 30070 ಮತದಾರರು ಸೇರಿ 56369 ಮತದಾರರಿಗೆ ನೋಟಿಸ್ ನೀಡಲಾಗುವುದು ಎಂದು ಡಿಸಿ ತಿಳಿಸಿದರು. ಸೆ. 23 ಆಕ್ಷೇಪಣೆಗೆ ಕೊನೆ ದಿನವಾಗಿದೆ, ಮದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿ ಪರಿಶೀಲಿಸಿ, ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆ.24 ರಿಂದ ಸೆ. 23ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು ನಮೂನೆ 6 ರ ಮೂಲಕ ನೋಂದಣಾಧಿಕಾರಿಗಳು, ಬಿಎಲ್ಒ ಅಥವಾ ಪೋಲ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 2026ರ ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಯುವ ಮತದಾರರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಮಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ 13 ಹೊಸ ಮಗಟ್ಟೆಗಳನ್ನು ಗುರುತಿಸಲಾಗಿದ್ದು, ಮತಗಟ್ಟೆಗಳ ಸಂಖ್ಯೆ 1154ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ4 ವಿಧಾನ ಸಭಾ ಮತಕ್ಷೇತ್ರಗಳಲ್ಲಿ 12 ಮಗಟ್ಟೆಗಳು 1200 ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಕಾರಣ ಹೊಸದಾಗಿ 13 ಮತಗಟ್ಟೆಗಳನ್ನು ಹೊಸದಾಗಿ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆಗೆ ಭಾರತ ಚುನಾವಣಾ ಆಯೋಗ ಅನುಮೋದನೆ ನೀಡಿದೆ ಎಂದರು.
ಹೊಸಕೋಟೆ ಕ್ಷೇತ್ರದಲ್ಲಿ 298 ಮಗಟ್ಟೆಗಳಿದ್ದು, 1,07,380 ಪುರುಷ, 1,10,556 ಮಹಿಳೆ ಮತ್ತು 4 ಇತರೆ ಸೇರಿ 2,17,940 ಮತದಾರರಿದ್ದಾರೆ. ದೇವನಹಳ್ಳಿ 296 ಮಗಟ್ಟೆಗಳಿದ್ದು, 95,669 ಪುರುಷ, 98,221 ಮಹಿಳೆ ಮತ್ತು 9 ಇತರೆ ಸೇರಿ 1,93,899 ಮದಾರರಿದ್ದಾರೆ ದೊಡ್ಡಬಳ್ಳಾಪುರದಲ್ಲಿ 279 ಮಗಟ್ಟೆಗಳಿದ್ದು, 94,566 ಪುರುಷ, 97,661 ಮಹಿಳೆ ಮತ್ತು 1 ಇತರೆ ಸೇರಿ 1,92,228 ಮದಾರರಿದ್ದಾರೆ. ನೆಲಮಂಗಲ ಮತಕ್ಷೇತ್ರದಲ್ಲಿ 281 ಮಗಟ್ಟೆಗಳಿದ್ದು, 93,900 ಪುರುಷ, 98126 ಮಹಿಳೆ ಮತ್ತು 45 ಇತರೆ ಸೇರಿ 1,92,071 ಮದಾರರಿದ್ದಾರೆ.