SIR pressmeet 
ಬೆಂಗಳೂರು ಗ್ರಾಮಾಂತರ

ಮನೆ ಭೇಟಿ ವೇಳೆ 15,721 ಮೃತರು ಪತ್ತೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್‌ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯ ನಾಲ್ಕೂ ತಾಲೂಕು ಪೈಕಿ 15,721 ಮೃತರ ಹೆಸರು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಮಾಹಿತಿ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್‌ಐಅರ್) ಪ್ರಕ್ರಿಯೆ ಪ್ರಗತಿ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ಬಿಎಲ್ಒಗಳು ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಜ.24 ರ ವರೆಗೆ ಜಿಲ್ಲೆಯಾದ್ಯಂತ 35,198 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 1150 ಮತದಾರರು ಗೈರು ಹಾಜರಾಗಿದ್ದಾರೆ. ಉಳಿದಿದ್ದು, 12,165 ಶಾಶ್ವತ ವಲಸೆ, 15,721 ಮೃತರ ಪಟ್ಟಿ. 5,721 ದ್ವಿಪ್ರತಿ ನಮೂನೆಗಳು ಹಾಗೂ 441 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಚುರುಕಿನಿಂದ ಸಾಗಿದೆ ಜಿಲ್ಲಾಡಳಿತ ಸಿಬ್ಬಂದಿ ಹಾಗೂ ಬಿಎಲ್‌ಒಗಳು ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರವಾರು ವಿವರ:
ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 7,143 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 400 ಸಂಗ್ರಹವಾಗದ, 1321 ಶಾಶ್ವತ ವಲಸೆ, 3390 ಮರಣ, 1830 ದ್ವಿಪ್ರತಿ ಹಾಗೂ 202 ಇತರೆ ಪ್ರಕರಣಗಳಿವೆ. ನೆಲಮಂಗಲ ಕ್ಷೇತ್ರದಲ್ಲಿ 10,640 ಪ್ರಕರಣಗಳು ಪತ್ತೆಯಾಗಿದ್ದು, 257 ಸಂಗ್ರಹವಾಗದ, 4609 ಶಾಶ್ವತ ವಲಸೆ, 4468 ಮರಣ, 1264 ದ್ವಿಪ್ರತಿ ಮತ್ತು 42 ಇತರೆ ಪ್ರಕರಣಗಳಿವೆ. ಹೊಸಕೋಟೆ ಕ್ಷೇತ್ರದಲ್ಲಿ 9204 ಪ್ರಕರಣಗಳಿದ್ದು, 211 ಸಂಗ್ರಹವಾಗದ, 2785 ಶಾಶ್ವತ ವಲಸೆ, 4663 ಮರಣ, 1369 ದ್ವಿಪ್ರತಿ ಹಾಗೂ 176 ಇತರೆ ಪ್ರಕರಣಗಳಿವೆ.
ದೇವನಹಳ್ಳಿ ಕ್ಷೇತ್ರದಲ್ಲಿ 8,211 ಪ್ರಕರಣಗಳಿದ್ದು, 282 ಸಂಗ್ರಹವಾಗದ, 3450 ಶಾಶ್ವತ ವಲಸೆ, 3200 ಮರಣ, 1258 ದ್ವಿಪ್ರತಿ ಹಾಗೂ 21 ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಡಿಸಿ ತಿಳಿಸಿದರು.
ವಿಧಾನಸಭಾವಾರು ಎನುಮೆರೇಷನ್ ನಮೂನೆ ವಿತರಣೆ ಮತ್ತು ಗಣಕೀಕರಣ ಪ್ರಗತಿ:
ಜಿಲ್ಲೆಯ9,12,913 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು 9,12,913 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 7,49,582 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಜೂ.30 ರಿಂದಲೇ ಎನುಮೆರೇಷನ್ ಫಾರಂ ಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂ.30 ರಿಂದ ಆ.8 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂ.16 ರವರೆಗೆ 9,12,913 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲಾ ಫಾರಂಗಳನ್ನು ಮುದ್ರಿಸಿ ವಿತರಿಸಿದ್ದಾರೆ ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ತಿಳಿಸಿದರು.
ಕ್ಷೇತ್ರವಾರು ವಿವರ:
180-ದೊಡ್ಡಬಳ್ಳಾಪುರ: 2,23,400 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲ 2,23,400 ನಮೂನೆಗಳನ್ನು ವಿತರಿಸಲಾಗಿದ್ದು, 1,77,220 ನಮೂನೆಗಳನ್ನು ಗಣಕೀಕರಿಸಲಾಗಿದೆ.
181-ನೆಲಮಂಗಲ: 2,24,104 ಮತದಾರರಿದ್ದು, ಎಲ್ಲ 2,24,104 ನಮೂನೆಗಳನ್ನು ವಿತರಿಸಲಾಗಿದ್ದು, 1,80,105 ನಮೂನೆಗಳನ್ನು ಗಣಕೀಕರಿಸಲಾಗಿದೆ.
178-ಹೊಸಕೋಟೆ: 2,46,155 ಮತದಾರರಿದ್ದು, ಎಲ್ಲ 2,46,155 ನಮೂನೆಗಳನ್ನು ವಿತರಿಸಲಾಗಿದ್ದು, 2,06,208 ನಮೂನೆಗಳನ್ನು ಗಣಕೀಕರಿಸಲಾಗಿದೆ.
179-ದೇವನಹಳ್ಳಿ: 2,19,254 ಮತದಾರರಿದ್ದು, ಎಲ್ಲ 2,19,254 ನಮೂನೆಗಳನ್ನು ವಿತರಿಸಲಾಗಿದ್ದು, 1,86,049 ನಮೂನೆಗಳನ್ನು ಗಣಕೀಕರಿಸಲಾಗಿದೆ.