ದಾಬಸಪೇಟೆಯ ಶಿವಗಂಗೆ ವೃತ್ತದ ಬಳಿ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು.  
ಬೆಂಗಳೂರು ಗ್ರಾಮಾಂತರ

ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು
ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು
ಆರ್ಥಿಕ ಸಂಪನ್ಮೂಲವಿಲ್ಲದೆ ಆಸಹಾಯಕತೆ ತೋರುವ ಗ್ರಾಪಂ - ದ್ವಿಚಕ್ರವಾಹನ ನಿಲುಗಡೆಗೆ ನಿಗದಿತ ಸ್ಥಳವಿಲ್ಲ
ದಾಬಸ್​ಪೇಟೆ: ಪಟ್ಟಣದ ಶಿವಗಂಗಾ ವೃತ್ತದ ಬಳಿ ರಸ್ತೆ ಮೇಲೆ ಚರಂಡಿ ಕಲುಷಿತ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ.ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ತ್ಯಾಜ್ಯ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳು ಇರುವುದರಿಂದ ದ್ವಿಚಕ್ರವಾಹನ ನಿಲುಗಡೆಗೆ ನಿಗದಿತ ಸ್ಥಳವಿಲ್ಲದೆ ಪರದಾಡವಂತಾಗಿದೆ. ಇಂತಹ ಅವ್ಯವಸ್ಥೆಯಿಂದ ಜನ ಹೈರಾಣಾಗಿದ್ದಾರೆ.
ನೆಲಮಂಗಲ ತಾಲೂಕಿನಲ್ಲಿ ವೇಗವಾಗಿ ಬೆಳೆಯುತ್ತಿರುವ ದಾಬಸ್​ಪೇಟೆ ಅಭಿವೃದ್ಧಿ ಪಥದಲ್ಲಿದೆ. ಆದರೆ, ಜನರಿಗೆಮೂಲಸೌಲಭ್ಯ ಕಲ್ಪಿಸುವಲ್ಲಿ ಸ್ಥಳಿಯ ಆಡಳಿತ ವಿಲವಾಗಿದೆ. ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಇಲಾಖೆ, ಸಂಸದರು, ಶಾಸಕರು ಸ್ಪಂದಿಸಬೇಕು. ವಾಹನಗಳ ಸಂಚಾರದಿಂದ ಪಾದಚಾರಿಗಳು ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಚರಂಡಿ ನೀರು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರ ಮೇಲೆ ಎರಚುತ್ತಿದೆ.
ಪಂಚಾಯಿತಿಗೆ ಬರುವ ಅನುದಾನ ಮತ್ತು ಸಂಗ್ರಹವಾಗುವ ತೆರಿಗೆಯಿಂದ ಕಚೇರಿ ನಿರ್ವಹಣೆ, ಸಿಬ್ಬಂದಿ ವೇತನ ಹೀಗೆ ಇತರ ಖರ್ಚು ವೆಚ್ಚಕ್ಕೆ ಸರಿಯಾಗುತ್ತಿದೆ. ಶಿವಗಂಗೆ ವೃತ್ತದ ಬಳಿಯ ಚರಂಡಿ ನೀರು ಮುಂದೆ ಸಾಗಲು ವ್ಯವಸ್ಥಿತಕಾಲುವೆ ಇಲ್ಲ. ರಸ್ತೆ ವಿಸ್ತರಣೆ ವೇಳೆ ಉಂಟಾದ ಅವ್ಯವಸ್ಥೆಯಿಂದಾಗಿ ಪಂಚಾಯಿತಿ ಸಂಕಷ್ಟಕ್ಕೆ ಸಿಲುಕಿದೆ. ಈಗ ಲಾಂತರ ರೂ. ಖರ್ಚು ಮಾಡಿ ಹೊಸದಾಗಿ ಚರಂಡಿ ಮಾಡಬೇಕು. ನಮ್ಮ ಬಳಿ ಅಷ್ಟು ಹಣವಿಲ್ಲ.
-ರವಿಶಂಕರ್​, ಪಿಡಿಒ ಡಾಬಸ್​ಪೇಟೆ ಗ್ರಾಪಂ
ಪಟ್ಟಣದ ಶಿವಗಂಗೆ ವೃತ್ತದ ಬಳಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಶಾಲಾ ಮಕ್ಕಳು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಸರಿಪಡಿಸಲಿ.
- ಗಂಗಾಧರ್​, ಸ್ಥಳಿಯ ನಿವಾಸಿ
ದಾಬಸ್​ಪೇಟೆ ರೋಡ್​&20&1