session-news 
ಬೆಂಗಳೂರು ಗ್ರಾಮಾಂತರ

ಕಸ ಘಟಕ ಪುನಾರಂಭ ಬೇಡ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಪ್ಪಿ ಸರ್ಕಾರ ಪುನಾರಂಭಿಸಲು ಹೊರಟಿರುವ ಟೆರ್ರಾಾರ್ಮ ಕಸ ಘಟಕದ ಬಗ್ಗೆ ಬೆಳಗಾವಿಯ ವಿಧಾನಮಂಡಲದ ಚಳಿಗಾಲದ ಅಧಿವೇಶದಲ್ಲಿ ಮಂಗಳವಾರ ಶಾಸಕ ಧೀರಜ್ ಮುನಿರಾಜು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಈಗಾಗಲೇ ಮುಚ್ಚಿರುವ ಕಸ ಘಟಕವನ್ನು ಮತ್ತೆ ಆರಂಭಿಸುವುದು ಬೇಡ ಎಂದು ಡಿಸಿಎಂ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
134 ಎಕರೆಯಲ್ಲಿ ಕಸ ಘಟಕ:
ಸರ್ಕಾರ 134 ಎಕರೆ ಪ್ರದೇಶದಲ್ಲಿ ಕಸ ಘಟಕವನ್ನು ಮತ್ತೆ ಆರಂಭಿಸುವ ಬಗ್ಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ, ಈಗಾಗಲೇ ಅನೇಕ ಹೋರಾಟಗಳ ಮೂಲಕ ಘಟಕವನ್ನು ಮುಚ್ಚಿಸಲಾಗಿದೆ. ಇದೇ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಆದೇಶದಂತೆ ಘಟಕವನ್ನು ಮುಚ್ಚಿಸಲಾಗಿದೆ. ಅನೇಕ ಮಠಾಧೀಶರು ಹಾಗೂ ಹೋರಾಟಗಾರರ ನಿರಂತರ ಧರಣಿ ಸತ್ಯಾಗ್ರಹದ ಮೂಲಕ ಸಮಸ್ಯೆಯನ್ನು ಕೊನೆಗಾಣಿಸಲಾಗಿದೆ ಈಗ ಮತ್ತೆ ಸಮಸ್ಯೆ ಉದ್ಘವಿಸಲು ಕಾರಣವಾಗಬಾರದು ಎಂದು ಶಾಸಕರು ಹೇಳಿದರು. 2008ರಲ್ಲಿ ಆರಂಭವಾದ ಟೆರ್ರಾಾರ್ಮ ಕಸ ಸಂಸ್ಕರಣಾ ಘಟಕವನ್ನು 2017ರಲ್ಲಿ ಮುಚ್ಚಿಸಲಾಗಿದೆ. 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 2 ಸಾವಿರ ಜನರ ತೀವ್ರ ವಿರೋಧವಿದೆ, ಈಗಾಗಲೇ ಮುಚ್ಚಿರುವ ಘಟಕದಲ್ಲಿ 25 ಲಕ್ಷ ಮೆಟ್ರಿಕ್‌ಟನ್‌ನಷ್ಟು ಕಸದ ರಾಶಿ ಇದೆ, ಅದನ್ನೇ ಇನ್ನೂ ವಿಲೇವಾರಿ ಮಾಡಿಲ್ಲ. ಮತ್ತೆ ಕಸ ಘಟಕ ಆರಂಭಿಸಿ ಮತ್ತಷ್ಟು ಕಸ ಸುರಿಯುವ ಕ್ರಮ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ತಾಲೂಕಿನಲ್ಲಿ ಎಂಎಸ್‌ಜಿಪಿ ಘಟಕ ಕಾರ್ಯನಿರ್ವಹಿಸುತ್ತಿದೆ ಇದರಿಂದ ತಾಲೂಕಿನ ಜನತೆ ಬೇಸತ್ತಿದ್ದಾರೆ. ಮತ್ತೆ ಘಟಕ ಆರಂಭಿಸುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಲಿದೆ ಎಂದು ಮನದಟ್ಟು ಮಾಡುವ ಪ್ರಯತ್ನ ನಡೆಸಿದರು.
ವೈಜ್ಞಾನಿಕ ಘಟಕ, ಗಾಬರಿ ಬೇಡ:
ಶಾಸಕ ಧೀರಜ್ ಮುನಿರಾಜು ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಶಾಸಕರ ನೋವು ಅರ್ಥವಾಗುತ್ತದೆ, ದಯವಿಟ್ಟು ಗಾಬರಿಯಾಗಬೇಡಿ ಎಂದು ಅಭಯ ನೀಡಿದರು. ಈಗಾಗಲೇ ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮ್ಮತಿ ಪತ್ರ ದೊರೆತಿದೆ. ಈ ಹಿಂದಿನ ಘಟಕಗಳು ೇಲ್ ಆಗಿವೆ. ಆದರೆ ಈ ಬಾರಿ ವೈಜ್ಞಾನಿಕವಾಗಿ ಘಟಕ ಕಾರ್ಯನಿರ್ವಹಿಸುವುದರಿಂದ ಪರಿಸರಕ್ಕಾಗಲಿ, ಜನರಿಗಾಗಲಿ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ದೆಹಲಿ, ಚೆನ್ನೈ, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ಪ್ರವಾಸ ಮಾಡಿ ಕಸ ಘಟಕ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಿದ್ದೇವೆ. ಆದ್ದರಿಂದ ಕಸ ಘಟಕದಿಂದ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಬೆಂಗಳೂರಿನ ದಿನನಿತ್ಯ 8 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲೇಬೇಕು ಈಗಾಗಲೇ ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲೂ ಘಟಕ ಆರಂಭಿಸಿದ್ದೇವೆ. ಕನಕಪುರ, ಬಿಡದಿಯಲ್ಲೂ ಆರಂಭಿಸಲಾಗುತ್ತಿದೆ ಆಧುನಿಕ ತಂತ್ರಜ್ಞಾನ ಕ್ರಮದಿಂದ ಘಟಕ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
--
ಘಟಕ ಪುನಾರಂಭಕ್ಕೆ ಆಸ್ಪದ ನೀಡಲ್ಲ:
ಕಸ ಘಟಕ ಪುನಾರಂಭದ ಬಗ್ಗೆ ’ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಧೀರಜ್ ಮುನಿರಾಜು ಯಾವುದೇ ಕಾರಣಕ್ಕೂ ಮತ್ತೆ ಕಸ ಘಟಕ ಆರಂಭಿಸಲು ಅವಕಾಶ ನೀಡುವುದಿಲ್ಲ. ಇದರ ವಿರುದ್ಧವಾಗಿ ಹೋರಾಟ ಮಾಡುತ್ತೇವೆ. ಕೋರ್ಟ್ ಮೊರೆ ಹೋಗುತ್ತವೇ ಮತ್ತೆ ತಾಲೂಕಿನಲ್ಲಿ ಕಸ ಘಟಕ ಆರಂಭಿಸಿ ಕ್ಷೇತ್ರದ ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಒತ್ತಿ ಹೇಳಿದರು.