ದೊಡ್ಡಬಳ್ಳಾಪುರ&ನೆಲಮಂಗಲ ಸಂಪರ್ಕ ರಸ್ತೆ ಹಾದು ಹೋಗುವ ಮಧುರೆ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಕಡೆಗೂ ಎಚ್ಚೆತ್ತ ಅಧಿಕಾರಿಗಳು ರಸ್ತೆಯಲ್ಲಿ ಕೆಲವೊಂದು ಸಂಚಾರ ನಿಯಮಗಳನ್ನು ಅಳವಡಿಸಲು ಮುಂದಾಗಿದ್ದಾರೆ.
ಕಳೆದ 15 ದಿನದ ಅಂತರದಲ್ಲೇ ಇದೇ ರಸ್ತೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಬೈಕ್ ಸವಾರ ಹಾಗೂ 13 ವರ್ಷದ ಬಾಲಕ ಬಲಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳಿಯರು ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಮುಖ ಡೆಡ್ಲಿ ಸ್ಪಾಟ್ಗಳನ್ನು ಗುರುತಿಸಿ ಆ ಭಾಗದಲ್ಲಿ ಹಂಪ್ಗಳನ್ನು ಹಾಕುವ ಮೂಲಕ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದಾರೆ.
ಮಧುರೆ ಕ್ರಾಸ್, ಕನಸವಾಡಿ ಸಮೀಪ, ಕೋಡಿಪಾಳ್ಯ ಸೇರಿ ನಾಲ್ಕೆ$ದು ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ಹಾಕಿ ಅವುಗಳಲ್ಲಿ ಬಣ್ಣ ಬಳಿದು ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ.
ದೊಡ್ಡಬಳ್ಳಾಪುರ&ನೆಲಮಂಗಲ ಹೆದ್ದಾರಿಯಲ್ಲಿ ಕೆಲವು ಕಡೆಗಳಲ್ಲಿ ತೀಕ್ಷ$$$$್ಣ ತಿರುವುಗಳಿದ್ದು, ಎದುರು&ಬದುರು ಬರುವ ವಾಹನಗಳು ಮುಖಾಮುಖಿ ಡಿಕ್ಕಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಇಂಥ ಸ್ಥಳಗಳಲ್ಲಿ ರಸ್ತೆ ವಿಸ್ತರಣೆ ಮಾಡಿ ತಿರುವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಚಿಂತನೆ ನಡೆಸಿದೆ. ಲೊಕೋಪಯೋಗಿ ಇಲಾಖೆ ಇಂಜಿನಿಯರ್ ಗಿರಿಗೌಡ ಹಾಗೂ ಇನ್ನಿತರ ಅಧಿಕಾರಿಗಳು ಹೆದ್ದಾರಿ ಪರಿಶೀಲನೆ ನಡೆಸಿ ಪ್ರಮುಖ ತಿರುಗಳನ್ನು ಗುರುತು ಮಾಡಿದ್ದಾರೆ ಇದರೊಂದಿಗೆ ಆರ್ಟಿಒ, ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಮಿಟಿ ರಚಿಸಿ ಈ ರಸ್ತೆಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ದಪಡಿಸಲು ಮುಂದಾಗಿದೆ.
ದೊಡ್ಡಬಳ್ಳಾಪುರ&ನೆಲಮಂಗಲ ಭಾಗದ ಲಾರಿ ಚಾಲಕರು ಟೋಲ್ ತಪ್ಪಿಸಲು ಮಧುರೆ ರಸ್ತೆ ಮಾರ್ಗ ಬಳಸುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ವಾಹನಗಳ ಸಂಖ್ಯೆ ಮಿತಿಮೀರಿದೆ. ಅಲ್ಲದೆ ದಾಬಸ್ಪೇಟೆ, ಬಾಶೆಟ್ಟಿಹಳ್ಳಿ ಭಾಗದ ಕೈಗಾರಿಕಾವಲಯದ ಪ್ಯಾಕ್ಟರಿ ಬಸ್ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ್ಯಾಕ್ಟರಿ ಬಸ್ ಚಾಲಕರು ಉದ್ಯೋಗಿಗಳನ್ನು ಸರಿಯಾದ ವೇಳೆಗೆ ತಲುಪಿಸುವ ದಾವಂತದಲ್ಲಿ ವಾಹನಗಳನ್ನು ವೇಗಮಿತಿ ಮೀರಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಅದೇ ರೀತಿ ಲಾರಿ ಚಾಲಕರೂ ವೇಗಮಿತಿ ಮೀರುತ್ತಿದ್ದಾರೆ. ಹಲವು ವೇಳೆ ವಾಹನಗಳನ್ನು ಓವರ್ಟೇಕ್ ಮಾಡಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಈ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ.
ಕೋಡಿಪಾಳ್ಯ ಬಳಿ ಸೈಕಲ್ನಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಧನು ಎಂಬ 13 ವರ್ಷದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದ.ನೆಲಮಂಗಲ ಮುಖ್ಯರಸ್ತೆಯ ಮಧುರೆ ಹೋಬಳಿಯ 11ನೇ ಮೈಲಿ ಬಳಿ ಹಾಲಿನ ಟ್ಯಾಂಕರ್ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಇವೆರಡು ಪ್ರಕರಣಗಳ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿತ್ತು. ಸ್ಥಳಿಯರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ದೊಡ್ಡಬಳ್ಳಾಪುರ&ನೆಲಮಂಗಲ ಸಂಪರ್ಕ ರಸ್ತೆ ಹಾದು ಹೋಗುವ ಮಧುರೆ ಹೆದ್ದಾರಿಯಲ್ಲಿ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಲಾಗಿದೆ. ಈ ರಸ್ತೆಯಲ್ಲಿನ ಪ್ರಮುಖ ಅಪಘಾತ ವಲಯಗಳನ್ನು ಗುರುತಿಸಿ ಹಂಪ್ಗಳನ್ನು ಹಾಕಲಾಗುತ್ತಿದೆ. ವಾಹನಗಳು ವೇಗಮೀತಿ ಮೀರಿ ಸಂಚರಿಸುವುದು ಈ ಭಾಗದಲ್ಲಿ ಅಪಘಾತಗಳಿ ಆಸ್ಪದವಾಗುತ್ತಿದೆ. ಸೂಚನಾಲಕಗಳು ಸೇರಿ ಇನ್ನಿತರ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.
> ಗಿರಿಗೌಡ, ಎಇಇ ಲೊಕೋಪಯೋಗಿ ಇಲಾಖೆ
ಆರ್ಟಿಒ, ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಮಿಟಿ ರಚಿಸಿ ಈ ಭಾಗದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಪ್ಲಾನ್ ಮಾಡಲಾಗುವುದು. ಈ ರಸ್ತೆಯಲ್ಲಿ ಸ್ಪೀಡ್ಗನ್ಗಳನ್ನು ಅಳವಡಿಸಿ ವೇಗಮಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು, ಪೊಲೀಸ್ ಬ್ಯಾರಿಕೇಡ್ಗಳನ್ನು ಹಾಕಿ ವಾಹನ ತಪಾಸಣೆ ಜತೆಗೆ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.
> ಪಾಂಡುರಂಗ, ಡಿವೈಎಸ್ಪಿ ದೊಡ್ಡಬಳ್ಳಾಪುರ