rice palish 
ಬೆಂಗಳೂರು ಗ್ರಾಮಾಂತರ

ಪಡಿತರ ಅಕ್ಕಿ ಪಾಲಿಶ್​ ​ ?

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಬಿಪಿಎಲ್​ ಕಾರ್ಡ್​ದಾರರಿಗೆ ಸರ್ಕಾರ ವಿತರಿಸುತ್ತಿರುವ 10 ಕೆಜಿ ಅಕ್ಕಿ ನೇರವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಪ್ರಮಾಣ ಹೆಚ್ಚಿದೆ..!
ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ರೈಸ್​ಮಿಲ್​ಗಳು ಹೆಚ್ಚುತ್ತಿರುವುದು ಇಂಥ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಭತ್ತ ಬೆಳೆಯದ ಜಿಲ್ಲೆಗಳಲ್ಲೇ ರೈಸ್​ಮಿಲ್​ಗಳು ಹೆಚ್ಚು ಕಾರ್ಯನಿರ್ವಹಿಸುತ್ತಿರುವುದರ ಹಿಂದೆ ಇಂಥ ಕಾಳಸಂತೆ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಪಡಿತರ ಚೀಟಿ ಮೂಲಕ ಪಡೆಯುವ ಅಕ್ಕಿಯನ್ನು ಲಾನುಭವಿಗಳಿಂದ ಕಡಿಮೆ ದರದಲ್ಲಿ ಖರೀದಿ ಮಾಡುವ ದಂಧೆಕೋರರು ಜಿಲ್ಲೆಗಳಲ್ಲಿ ಬೇರುಬಿಟ್ಟಿದ್ದು, ಖುದ್ದು ಮನೆಮನೆಗಳಿಗೆ ಭೇಟಿ ನೀಡಿ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆಟೋ ಮತ್ತಿತರ ಸರಕುಸಾಗಣೆ ವಾಹನಗಳ ಬಂದು ಲಾನುಭವಿಗಳಿಗೆ ಸ್ಥಳದಲ್ಲೇ ಹಣ ಸಂದಾಯ ಮಾಡಿ ಅಕ್ಕಿ ಖರೀದಿ ಮಾಡುತ್ತಿದ್ದಾರೆ. 2&3 ತಿಂಗಳಿಗೊಮ್ಮೆ ಬಂದು ಅಕ್ಕಿ ಖರೀದಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೂ ಬಂದಿದೆ. ಆದರೆ ಯಾವುದೇ ಕ್ರಮಕೈಗೊಳ್ಳದೆ ನಮಗ್ಯಾಕೆ ಎಂಬ ಧೋರಣೆ ಅನುಸರಿಸುತ್ತಿದ್ದಾರೆ.
ಅಕ್ಕಿ ಪಾಲಿಶ್​:
ಪಡಿತರ ಚೀಟಿದಾರರಿಂದ ಕೆಜಿಗೆ ಕೇವಲ 10 ರಿಂದ 12 ರೂಪಾಯಿ ದರದಲ್ಲಿ ಅಕ್ಕಿ ಖರೀದಿ ಮಾಡುವ ದಂಧೆಕೋರರು ಅದನ್ನು ರೈಸ್​ಮಿಲ್​ಗಳಲ್ಲಿ ಪಾಲಿಶ್​ ಮಾಡಿ ವಿವಿಧ ಬ್ರಾ$್ಯಂಡ್​ಗಳ ಚೀಲಗಳಲ್ಲಿ ಪ್ಯಾಕ್​ ಮಾಡಿ ಅದನ್ನೇ ಅಕ್ಕಿ ಮಳಿಗೆಗಳ ಮೂಲಕ ದುಬಾರಿ ದರಕ್ಕೆ ಮಾರಾಟ ಮಾಡುತಿದ್ದಾರೆ. ಸಾಮಾನ್ಯವಾಗಿ ಪಡಿತರ ಅಕ್ಕಿ ಗಾತ್ರ ದಪ್ಪವಾಗಿರುತ್ತದೆ ಇದನ್ನೇ ಪಾಲಿಶ್​ ಮಾಡಿ ಸಣ್ಣ ಗಾತ್ರಕ್ಕೆ ಮಾಡಿ ಸೋನಮಸೂರಿ ಸೇರಿ ಇನ್ನಿತರ ಅಕ್ಕಿ ಬ್ರಾ$್ಯಂಡ್​ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಗೋದಾಮುಗಳಲ್ಲಿ ಸಂಗ್ರಹ:
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಗೋದಾಮುಗಳನ್ನು ಮಾಡಿಕೊಂಡಿರುವ ದಂಧೆಕೋರರು ಪಡಿತರ ಚೀಟಿದಾರರಿಂದ ನೇರವಾಗಿ ಅಕ್ಕಿ ಖರೀದಿ ಮಾಡುತ್ತಿದ್ದಾರೆ. ಪಡಿತರ ಚೀಟಿದಾರರೇ ನೇರವಾಗಿ ಗೋದಾಮಿಗೆ ತೆರಳಿ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. ಮೂಟೆಗಟ್ಟಲೆ ಅಕ್ಕಿ ಚೀಲಗಳನ್ನು ಸಂಗ್ರಹಿಸಿ ಬಳಿಕ ಅದನ್ನು ರೈಸ್​ಮಿಲ್​ಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾ ಎಂಬಂತೆ ಇತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ಆಹಾರ ಇಲಾಖೆ ದಾಳಿ ನಡೆಸಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 204 ಕ್ವಿಂಟಾಲ್​ ಅಕ್ಕಿಯನ್ನು ಜಪ್ತಿ ಮಾಡಲಾಗಿತ್ತು. ಇದೆಲ್ಲವೂ ಪ್ರಾಥಮಿಕ ತನಿಖೆಯಲ್ಲಿ ಪಡಿತರ ಚೀಟಿದಾರರಿಂದ ಖರೀದಿ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಎ್​ಎಸ್​ಎಸ್​ಎಐನಲ್ಲೂ ಪತ್ತೆಯಾಗಲ್ಲ:
ಜಿಲ್ಲೆಗಳಲ್ಲಿ ಇಂಥ ಅಕ್ರಮ ಸಂಗ್ರಹಣೆ ಗೋದಾಮುಗಳ ಮೇಲೆ ಆಗಾಗ ದಾಳಿ ನಡೆಯುತ್ತಿರುತ್ತದೆ, ಗೋದಾಮುಗಳಲ್ಲಿ ವಶಪಡಿಸಿಕೊಂಡ ಅಕ್ಕಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎ್​ಎಸ್​ಎಸ್​ಎ) ಗೆ ಪರೀೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಅಲ್ಲಿ ಆ ಅಕ್ಕಿ ಮನುಷ್ಯ ಸೇವಿಸಲು ಯೋಗ್ಯವಾಗಿದೆಯೇ? ಇಲ್ಲವೇ? ಎಂಬುದನಷ್ಟೇ ವರದಿ ಮಾಡಲಾಗುತ್ತದೆ ಆದರೆ ಆ ಅಕ್ಕಿ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ವಿತರಿಸಿದ ಅಕ್ಕಿಯಾಗಿದೆ ಎಂಬುದನ್ನು ಖಚಿತಪಡಿಸುವುದಿಲ್ಲ. ಇದರಿಂದ ದಂಧೆಕೋರರ ಮೇಲೆ ಹಾಕಿದ ಪ್ರಕರಣವೂ ಬಿದ್ದು ಹೋಗುತ್ತದೆ. ಇದೇ ಕಾರಣ ದಂಧೆಕೋರರಿಗೆ ವರದಾನವಾಗಿದ್ದು ಪಡಿತರ ಅಕ್ಕಿ ರೀ ಸೈಕಲ್​ ನಿರಾತಂಕವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ದೋಸೆ, ಇಡ್ಲಿಗಷ್ಟೇ ಸೀಮಿತ:
ನಗರ, ಪಟ್ಟಣ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಪಡಿತರ ಅಕ್ಕಿ ಬಳಸುವವರ ಸಂಖ್ಯೆ ಕಡಿಮೆ ಇದೆ, ಪಡಿತರ ಅಕ್ಕಿಯನ್ನು ದೋಸೆ, ಇಡ್ಲಿಯಂತ ತಿಂಡಿಗಳ ತಯಾರಿಕೆಗಷ್ಟೇ ಬಳಸಲಾಗುತ್ತಿದೆ. ಅನ್ನ ಮಾಡಲು ಬಳಸುತ್ತಿಲ್ಲ. ಇದರಿಂದ ಇಂಥ ಅಕ್ಕಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್​ ಉದ್ಯಮಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.
ಪೌಷ್ಠಿಕಾಂಶ ನಷ್ಟ:
ಸರ್ಕಾರ ನೀಡುವ ಪಡಿತರ ಅಕ್ಕಿಯಲ್ಲಿ ಪೌಷ್ಠಿಕಾಂಶವಿರುತ್ತದೆ ಆದರೆ ಜನರು ಸಣ್ಣಅಕ್ಕಿ ಸೇವಿಸುವ ನಿಟ್ಟಿನಲ್ಲಿ ಇದನ್ನು ಬಳಕೆ ಮಾಡುತ್ತಿಲ್ಲ. ಆದರೆ ಇದೇ ಅಕ್ಕಿಯನ್ನು ರೈಸ್​ಮಿಲ್​ಗಳಲ್ಲಿ ಪಾಲಿಶ್​ ಮಾಡಿ ಸಣ್ಣ ಗಾತ್ರದ ಅಕ್ಕಿ ಮಾಡಿ ಅದನ್ನು ಬ್ರಾ$್ಯಂಡೆಂಡ್​ ಚೀಲಗಳಲ್ಲಿ ಮಾರಾಟ ಮಾಡುತ್ತಾರೆ ಪಾಲಿಶ್​ ಮಾಡುವುದರಿಂದ ಅಕ್ಕಿಯಲ್ಲಿನ ಪ್ರಮುಖ ಪೌಷ್ಠಿಕಾಂಶಗಳು ನಷ್ಟವಾಗಿರುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ರೈಸ್​ಮಿಲ್​ಗಳು ಕಾರ್ಯನಿರ್ವಹಿಸುವುದು ಸಹಜ, ಆದರೆ ಭತ್ತ ಬೆಳೆಯದ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಭತ್ತ ಬೆಳೆಯುವಂತ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಸ್​ಮಿಲ್​ಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಪಡಿತರ ಅಕ್ಕಿಯನ್ನು ಪಾಲಿಶ್​ ಮಾಡುವ ನಿಟ್ಟಿನಲ್ಲಿ ಇವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನವಿದೆ. ಆದರೆ ಇದನ್ನು ಪತ್ತೆ ಮಾಡಿ ರುಜುವಾತು ಮಾಡುವುದು ಕಷ್ಟಸಾಧ್ಯವಾಗಿದೆ.
ಹೆಸರೇಳಲಿಚ್ಛಿಸದ ಆಹಾರ ಇಲಾಖೆ ಅಧಿಕಾರಿ