ನವದೆಹಲಿ 
ಬೆಂಗಳೂರು ಗ್ರಾಮಾಂತರ

ಪರೇಡ್‌ವೀಕ್ಷಣೆಗೆ ಆಶಾ ಆಯ್ಕೆ

ಶಿವರಾಜ.ಎಂ
ಬೆಂಗಳೂರು ಗ್ರಾಮಾಂತರ: ನವದೆಹಲಿಯಲ್ಲಿ ನಡೆಯಲಿರುವ 2026ನೇ ಸಾಲಿನ ಗಣರಾಜ್ಯೋತ್ಸವ ಕರ್ತವ್ಯ ಪಥ(ಪರೇಡ್)ದ ವೀಕ್ಷಣೆಗೆ ಸ್ವಸಹಾಯ ಗುಂಪುಗಳ ಸದಸ್ಯರನ್ನು ವಿಶೇಷ ಅತಿಥಿಗಳಾಗಿ ನಿಯೋಜನೆ ಮಾಡುವ ಸಂಬಂಧ ಜಿಲ್ಲೆಯಿಂದ ದೊಡ್ಡಬಳ್ಳಾಪುರದ ಆರೂಡಿ ಗ್ರಾಮಪಂಚಾಯಿತಿಯ ಗರಿಕೇಹಳ್ಳಿ ಗ್ರಾಮದ ಸ್ವಸಹಾಯ ಗುಂಪಿನ ಸದಸ್ಯೆ ಆರ್.ಆಶಾ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ತಿಳಿಸಿದ್ದಾರೆ.