ವಿಜಯಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ವಿ.ಎಂ.ಕಿಶೋರ್​ ಕುಮಾರ್​ ವಿದ್ಯಾರ್ಥಿಗಳಿಗೆ ಗಾಂಧಿಜೀ ಪುಸ್ತಕಗಳನ್ನು ವಿತರಿಸಿದರು. ಮುಖ್ಯಶಿಕ್ಷಕಿ ಎಲ್​.ಆರ್​. ಕೋಮಲಾ, ವಿದ್ಯಾರ್ಥಿಗಳು ಇದ್ದರು. 
ಬೆಂಗಳೂರು ಗ್ರಾಮಾಂತರ

ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿ

ವಿಜಯಪುರ : ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಲ್​.ಆರ್​.ಕೋಮಲಾ ತಿಳಿಸಿದರು.

ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಬೆಂ.ಗ್ರಾಮಾಂತರ ಜಿಲ್ಲೆ, ಮೇರಾ ಯುವ ಭಾರತ್​ ಹಾಗೂ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂದ ಸಂಯುಕ್ತಾಶ್ರಯದಲ್ಲಿ ಸೇವಾ ಪಖ್ವಾಡಾ(ಪಾಕ) ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿದ್ದ ಜಲಮೂಲಗಳ ಶುದ್ಧೀಕರಣ, ಪುನರುಜ್ಜೀವನದ ಕುರಿತ ಜಾಗೃತಿ ಹಾಗೂ ಮಹಾತ್ಮ ಗಾಂಧೀಜಿ ವಿವಿಧ ಕೃತಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರಿನ ಮಾಲಿನ್ಯ ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು. ಜಲ ಸಂರಕ್ಷಣೆಯಿಂದ ನೀರಿನ ಅಭಾವ ತಡೆಗಟ್ಟಬಹುದು. ನೀರನ್ನು ಮಿತವ್ಯಯದಿಂದ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಜಲಮೂಲ ಉಳಿಸಿ ಪುನರುಜ್ಜೀವನಗೊಳಿಸಬೇಕು ಎಂದು ಕರೆ ನೀಡಿದರು.

ಸರ್ಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ವಿ.ಎಂ.ಕಿಶೋರ್​ ಕುಮಾರ್​ ಮಾತನಾಡಿ, ಮೊದಲು ಪುಸ್ತಕಗಳನ್ನು ಓದಬೇಕು. ಹೊಸ ಹೊಸ ವಿಷಯಗಳನ್ನು ಪ್ರಶ್ನಿಸಬೇಕು ಮತ್ತು ಉತ್ತರ ಪಡೆಯುವ ಮನೋಭಾವ ಬೆಳೆಸಿಕೊಂಡರೆ ವ್ಯಕ್ತಿತ್ವದ ಅಭಿವೃದ್ಧಿಯಾಗುತ್ತದೆ ಎಂದರು.

ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಕೆ.ಎನ್​.ದೀಪಾ, ಸಿ.ಸರಳಾ, ಕೆ.ವಿ.ಅರುಣಾ, ಸಿ.ಎನ್​.ಪಾರ್ವತಮ್ಮ, ವೇದಿಕಾ, ವಿ.ಸಿ.ನೇತ್ರಾವತಿ ಇತರರಿದ್ದರು.