ದೊಡ್ಡಬಳ್ಳಾಪುರ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೃದ್ಧರಿಗೆ ಕಿಟ್​ ವಿತರಿಸಲಾಯಿತು. ಜಿಲ್ಲಾ ಪೊಲೀಸ್​ ಹೆಚ್ಚುವರಿ ಅಧಿಕ್ಷಕ ಲಕ್ಷಿ$್ಮನಾರಾಯಣ, ವೆಂಕಟೇಶ್​ ಪ್ರಸನ್ನ, ಡಿವೈಎಸ್ಪಿ ಪಾಂಡುರಂಗ, ಇನ್​ಸ್ಪೆಕ್ಟರ್​ ಎಂ.ಬಿ.ನವೀನ್​ ಕುಮಾರ್​, ಮನೋವೈದ್ಯ ಡಾ.ರವಿಕುಮಾರ್​, ಡಾ.ಪರಮೇಶ್ವರ್​, ಡಾ.ಇಂದಿರಾ, ನವೋದಯ ಚಾರಿಟಬಲ್​ ಟ್ರಸ್ಟ್​ ಮುಖ್ಯಸ್ಥ ಜನಾರ್ದನ್​ ಇದ್ದರು. 
ಬೆಂಗಳೂರು ಗ್ರಾಮಾಂತರ

ವೃದ್ಧರ ಆರೋಗ್ಯಕ್ಕೆ ಮಿಡಿದ ಖಾಕಿಪಡೆ

ಪ್ರಮುಖ ಮುಖ್ಯಾಂಶಗಳು

  • ವೃದ್ಧರ ಆರೋಗ್ಯಕ್ಕೆ ಮಿಡಿದ ಖಾಕಿಪಡೆ
ವೃದ್ಧರ ಆರೋಗ್ಯಕ್ಕೆ ಮಿಡಿದ ಖಾಕಿಪಡೆ
ದೊಡ್ಡಬಳ್ಳಾಪುರ: ಪೊಲೀಸ್​ ಇಲಾಖೆಯನ್ನು ಜನಸ್ನೇಹಿ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾದ ಮನೆಮನೆಗೆ ಪೊಲೀಸ್​, ಆಸರೆ, ಸನ್ಮಿತ್ರ ಸೇರಿ ನೂತನ ಯೋಜನೆಗಳು ಜನರನ್ನು ತಲುಪಲು ಸಹಕಾರಿಯಾಗಿವೆ ಎಂದು ಹೆಚ್ಚುವರಿ ಪೊಲೀಸ್​ ಅಧೀಕ್ಷಕ ವೆಂಕಟೇಶ್​ ಪ್ರಸನ್ನ ತಿಳಿಸಿದರು.
ನಗರದ ಬಸವಭವನದಲ್ಲಿ ಭಾನುವಾರ ಗ್ರಾಮಾಂತರ ಪೊಲೀಸ್​ ಠಾಣೆ, ನವೋದಯ ಚಾರಿಟಬಲ್​ ಟ್ರಸ್ಟ್​ನಿಂದ ಆಸರೆ ಮತ್ತು ಸನ್ಮಿತ್ರ ಯೋಜನೆಯಡಿ ಹಮ್ಮಿಕೊಂಡಿದ್ದ ವಯೋವೃದ್ಧರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆಯೊಂದಿಗೆ ದುಶ್ಚಟದಿಂದ ಮುಕ್ತಗೊಳಿಸಿ ಮಾರ್ಗದರ್ಶನ ನೀಡಲು ಸನ್ಮಿತ್ರ ಪಡೆ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಸಿಕ್ಕ ಮಾದಕ ವ್ಯಸನಿಗಳ ಪೂರ್ವಾಪರ ಪರಿಶೀಲಿಸಿ, ಅವರಿಗೆ ಮಾದಕ ವಸ್ತು ಎಲ್ಲಿ ಸಿಗುತ್ತಿತ್ತು? ಮಾದಕ ವಸ್ತುವಿಗಾಗಿ ಅವರು ಯಾರನ್ನು ಭೇಟಿ ಮಾಡುತ್ತಾರೆ? ಎಂಬ ಮಾಹಿತಿ ಕಲೆ ಹಾಕುವ ಮೂಲಕ ಮಾದಕ ವಸ್ತುಗಳು ವ್ಯಸನಿಗಳ ಕೈಗೆ ಸಿಗದಂತೆ ಕಟ್ಟೆಚ್ಚರ ವಹಿಸುವುದೇ ಈ ಸನ್ಮಿತ್ರ ಯೋಜನೆಯ ಮೂಲ ಉದ್ದೇಶ ಎಂದು ವಿವರಿಸಿದರು.
ಇನ್​ಸ್ಪೆಕ್ಟರ್​ ನವೀನ್​ ಕುಮಾರ್​ ಮಾತನಾಡಿ, ಭೂಗಳ್ಳರು, ರಿಯಲ್​ ಎಸ್ಟೇಟ್​ನಲ್ಲಿ ತೊಡಗಿಸಿಕೊಂಡವರು ವಯೋವೃದ್ಧರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ನಕಲಿ ವಯೋವೃದ್ಧರಿಂದ ದಾಖಲೆ ಸೃಷ್ಟಿಸುವ ದಂಧೆಗೆ ಕಡಿವಾಣ ಹಾಕಲು ನಾಗರಿಕರ ಸಹಕಾರ ಅಗತ್ಯ ಎಂದರು.
ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಕಣ್ಣು, ದಂತ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಇಸಿಜಿ ಮತ್ತು ಹೃದಯ ಸಂಬಂಧಿ ಪರೀಕ್ಷೆ, ಮನೋತಜ್ಞರಿಂದ ಆಪ್ತ ಸಮಾಲೋಚನೆ, ಸನ್ಮಿತ್ರ ಯೋಜನೆಯಡಿ ಗುರುತಿಸಲ್ಪಟ್ಟಿರುವ 30 ಯುವಕರಿಗೆ ಸೈಕಿಯಾಟ್ರಿಸ್ಟ್​ಗಳಿಂದ ಆಪ್ತಸಮಾಲೋಚನೆ ಹಾಗೂ ವೈದ್ಯಕಿಯ ಸಲಹೆ ನೀಡಲಾಯಿತು.
19 ಡಿಬಿಪಿ 1