playhome 
ಬೆಂಗಳೂರು ಗ್ರಾಮಾಂತರ

ಡೇ ಕೇರ್​, ಚೈಲ್ಡ್​ ಕೇರ್​..ಎಲ್ಲಕ್ಕೂ ಡೋಂಡ್​ಕೇರ್​ !

ಶಿವರಾಜ.ಎಂ
ಮಂಜುನಾಥ ಎಸ್​.ಸಿ ಹೊಸಕೋಟೆ
ಇತ್ತೀಚೆಗೆ ಹೊಸಕೋಟೆ ನಗರದಲ್ಲಿ ಎಲ್ಲೆಂದರಲ್ಲಿ ಖಾಸಗಿ ಡೇ ಕೇರ್​ ಸೆಂಟರ್​, ಪ್ರಿ ನರ್ಸರಿ, ಚೈಲ್ಡ್​ ಕೇರ್​ ಸೆಂಟರ್​ಗಳು ತಲೆ ಎತ್ತುತ್ತಿವೆ, ಈ ಕೇರ್​ ಸೆಂಟರ್​ಗಳಿಗೆ ಯಾವುದೇ ನಿಯಮಗಳಿಲ್ಲ. ಅಂಗನವಾಡಿ, ಶಾಲಾ ಪೂರ್ವ ತರಗತಿಗಳು ಅನುಸರಿಸುವ ಯಾವುದೇ ಮಾನದಂಡಕ್ಕೂ ಒಳಪಡುತ್ತಿಲ್ಲ ಒಂದು ರೀತಿಯಲ್ಲಿ ಈ ಕೇರ್​ ಸೆಂಟರ್​ಗಳು ಎಲ್ಲದಕ್ಕೂ ಡೋಂಡ್​ ಕೇರ್​ ಎಂಬಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಈ ಸೆಂಟರ್​ಗಳನ್ನು ನಡೆಸಲು ಸರ್ಕಾರದ ಯಾವುದೇ ಇಲಾಖೆಯಿಂದ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ ಎಂಬಂತೆ ಇವುಗಳ ಮಾಲೀಕರು ವರ್ತಿಸುತ್ತಿದ್ದು, ಪುಟ್ಟ ಮಕ್ಕಳ ವಿಚಾರದಲ್ಲಿ ಸ್ಥಳಿಯ ಆಡಳಿತಗಳು ಯಾವುದೇ ರೀತಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಯಾರು ಬೇಕಾದರೂ ನಡೆಸಬಹುದೇ?
ಸರ್ಕಾರದಿಂದ ಯಾವುದೇ ಮಾನದಂಡವಾಗಲೀ, ನಿಯಮ ಪಾಲಿಸುವ ಬಗ್ಗೆ ಯಾವುದೇ ಸೂಚನೆಯಾಗಲಿ ಇಲ್ಲವೇ? ಯಾವುದೇ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಬೇಕಿಲ್ಲದೆ ಯಾರು ಬೇಕಾದರೂ ಬಾಡಿಗೆ ಮನೆ ಪಡೆದು ಈ ಡೇ ಕೇರ್​ ಸೆಂಟರ್​ಗಳನ್ನು ಶುರುಮಾಡಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಘವಿಸಿದೆ. ಈ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಎಲ್ಲರೂ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಪ್ರತಿಕ್ರಿಯಿಸುತ್ತಿರುವುದು ಈ ಸೆಂಟರ್​ಗಳ ಮೇಲೆ ಯಾರಿಗೂ ಹಿಡಿತವಿಲ್ಲವೆ ಎಂಬ ಪ್ರಶ್ನೆ ಉದ್ಘವಿಸುವಂತೆ ಮಾಡಿದೆ.
ಕೇಳೋರಿಲ್ಲ ಹೇಳೊರಿಲ್ಲದಂತಾಗಿದೆ.
ಅನಾಹುತವಾದರೆ ಹೊಣೆ ಯಾರು>
ಸಿಕ್ಕ ಸಿಕ್ಕ ಮನೆಗಳನ್ನು ಬಾಡಿಗೆಗೆ ಪಡೆದು ಹತ್ತಾರು ಮಕ್ಕಳಿಗೆ ಅಲ್ಲಿಯೇ ಪಾಲನೆ ಪೋಷಣೆ ಮಾಡು ಕೇರ್​ ಸೆಂಟರ್​ಗಳು ಉದ್ಭವವಾಗುತ್ತಿವೆ. ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಇಬ್ಬರು ಅಥವಾ ಮೂರು ಜನರನ್ನು ನೇಮಕ ಮಾಡಲಾಗಿರುತ್ತದೆ, ಆದರೆ ಆ ಮಕ್ಕಳ ಪಾಲನೆ ಪೋಷಣೆಗೆ ಯಾವುದೇ ತರಬೇತಿ ಮಾನದಂಡವೂ ಇರುವುದಿಲ್ಲ, ಸ್ವಚ್ಚತೆ, ಅಗ್ನಿ ದುರಂತದ ಬಗ್ಗೆ ಮುನ್ನೆಚ್ಚರಿಕೆ, ಆಹಾರ ನಿಯಮ, ಮಕ್ಕಳ ಶೌಚಗೃಹ ವ್ಯವಸ್ಥೆ, ಸ್ಥಳ ಪರಿಶೀಲನೆ, ಕಟ್ಟಡ ಪರಿಶೀಲನೆ ಹೀಗೆ ಹಲವು ವಿಚಾರಗಳಲ್ಲಿ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ, ಆದರೆ ಯಾವ ಇಲಾಖೆ ಅಧಿಕಾರಿಗಳು ಇದರ ಹೊಣೆ ಹೊರುತ್ತಿಲ್ಲ. ಯಾವುದಾದರೂ ಅನಾಹುತ ಸಂಭವಿಸಿದರೆ ಇದೆಕ್ಕೆಲ್ಲ ಯಾರೂ ಹೊಣೆ ಎಂಬ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಿಲ್ಲದಂತಾಗಿದೆ.
ಈ ವಿಚಾರದ ಬಗ್ಗೆ ಈ ವರೆಗೆ ಯಾರೂ ಮಾತನಾಡಲಿಲ್ಲ, ಇದೂ ಸೂಕ್ಷ್ಮ ವಿಚಾರವಾಗಿದ್ದು ಇದರ ಬಗ್ಗೆ ಯಾರೂ ಯೋಚನೆ ಮಾಡಿರಲಿಲ್ಲ, ಕೂಡಲೆ ಈ ಬಗ್ಗೆ ಪರಿಶೀಲಿಸಿ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಆಂಜಿನಪ್ಪ, ಆರೋಗ್ಯಾಧಿಕಾರಿ, ನಗರಸಭೆ.