plane crash 
ಬೆಂಗಳೂರು ಗ್ರಾಮಾಂತರ

ಚಾಣುಕ್ಯ ವಿವಿಯಲ್ಲಿ ವಿಮಾನ ಅಪಘಾತ!*

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಚಾಣುಕ್ಯ ವಿಶ್ವವಿದ್ಯಾಲಯ ಆವರಣದಲ್ಲಿ ವಿಮಾನ ಅಪಘಾತ ಸಂಭವಿಸಿ ಮೂವರು ದುರ್ಮರಣಕ್ಕೆ ಕಾರಣವಾಯಿತು.
ಈ ಭೀಕರ ವಿಮಾನ ಅಪಘಾತದಲ್ಲಿ ಗಾಯಾಳುಗಳ ರೋಧನ ಮುಗಿಲುಮುಟ್ಟಿತ್ತು, ಕೈ ಕಾಲುಗಳನ್ನು ಕಳೆದುಕೊಂಡವರ ಗೋಳು ಹೇಳತೀರದಂತಾಗಿತ್ತು. ನೂರಾರು ಭವಿಷ್ಯದ ಕನಸುಗಳನ್ನು ಹೊತ್ತ ಯುವಕ-ಯುವತಿಯರು ಆಘಾತಕ್ಕಿದಿಂದ ನಿತ್ರಾಣಗೊಂಡಿದ್ದರು. ಜೀವ ರಕ್ಷಕ ಸಿಬ್ಬಂದಿ ಗಾಯಾಳುಗಳ ಬದುಕಿಸಲು ಹರಸಾಹಸಪಟ್ಟರು. ಅಗ್ನಿಶಾಮಕ ಸಿಬ್ಬಂದಿ, ಆಂಬುಲೆನ್ಸ್‌ನೊಂದಿಗೆ ವೈದ್ಯರ ತಂಡ, ಎಸ್‌ಡಿಆರ್‌ಎ್, ಎನ್‌ಡಿಆರ್‌ಎ್ ತಂಡಗಳು ಚುರುಕಿನ ಕಾರ್ಯಾಚರಣೆ ಮೂಲಕ ಗಾಯಾಗಳುಗಳನ್ನು ದೇವನಹಳ್ಳಿ ಮುನ್ಸಿಪಲ್ ಹಾಸ್ಪಿಟಲ್ಗೆ ದಾಖಲಿಸಿದರೆ ಸಾವಿಗೀಡಾದವರ ಮೃತ ದೇಹಗಳನ್ನು ಆಕಾಶ್ ಆಸ್ಪತ್ರೆ ಗೆ ಸಾಗಿಸಿದರು.
ಜಿಲ್ಲಾಡಳಿತದಿಂದ ಕಲ್ಪಿತ ಪ್ರದರ್ಶನ:
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಹಯೋಗದಲ್ಲಿ ವಿಮಾನ ದುರಂತಗಳನ್ನು ತಡೆಗಟ್ಟುವ ಸಂಬಂಧ ದೇವನಹಳ್ಳಿಯ ಚಾಣುಕ್ಯ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಪೂರ್ಣ ಪ್ರಮಾಣದ ವಿಮಾನ ಅಪಘಾತ ಕುರಿತು ಕಲ್ಪಿತ ಪ್ರದರ್ಶನ ಆಯೋಜಿಸಲಾಗಿತ್ತು. ಪ್ರದರ್ಶನದಲ್ಲಿ ನೈಜ ಘಟನೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಹೊರಡುವ ನಾಗರಿಕ ದೇಶೀಯ ವಿಮಾನವು ಟೇಕ್ ಆ್ ನಂತರ ವಿಮಾನ ನಿಲ್ದಾಣದ ಸುತ್ತಮುತ್ತಲಿನ ತಾಂತ್ರಿಕ ವೈಫಲ್ಯದಿಂದಾಗಿ ಚಾಣಕ್ಯ ವಿಶ್ವವಿದ್ಯಾಲಯದ ಮೈದಾನದ ಬಳಿ ಬೆಳಗ್ಗೆ 11.15 ರ ಸಮಯದಲ್ಲಿ ಅಪಘಾತಕ್ಕೀಡಾಗುವಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು.
ತುರ್ತು ಸಂಪರ್ಕ:
ತಕ್ಷಣವೇ ಚಾಣಕ್ಯ ವಿಶ್ವವಿದ್ಯಾಲಯದ ಸ್ಥಳೀಯ ಸಿಬ್ಬಂದಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ಡಿಡಿಎಂಎ, ಕೆಎಸ್‌ಎಫ್‌ಇಎಸ್, ಡಿಎಚ್‌ಒ, ಸಂಚಾರ ಪೊಲೀಸರು, ವಿಮಾನ ಸಂಸ್ಥೆಗಳು ಮತ್ತು ಬಿಐಎಎಲ್ ಸೇರಿ ತುರ್ತು ಪ್ರತಿಕ್ರಿಯೆ ನೀಡುವವರನ್ನು ತ್ವರಿತವಾಗಿ ಸಂಪರ್ಕಿಸಿ ಘಟನಾ ಸ್ಥಳಕ್ಕೆ ನಿಯೋಜಿಸಲಾಯಿತು.
ಡಿಸಿ ತ್ವರಿತ ಸ್ಪಂದನೆ:
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ತಕ್ಷಣವೇ ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಘಟನಾ ಸ್ಥಳಕ್ಕೆ ಆಗಮಿಸಿ, ಎಲ್ಲ ಇಲಾಖೆ ಹಾಗೂ ಏಜೆನ್ಸಿಗಳನ್ನು ಸಮನ್ವಯಗೊಳಿಸಿ ಕೂಡಲೇ ತ್ವರಿತ ರಕ್ಷಣಾ ಕಾರ್ಯಾಚರಣೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚನೆ ನೀಡಿದರು. ವಿಮಾನ ಅಪಘಾತ ದುರಂತದಲ್ಲಿ ವಿಮಾನದಲ್ಲಿನ ಸಿಬ್ಬಂದಿ ಸೇರಿ 46 ಪ್ರಯಾಣಿಕರು ಇದ್ದರು, ವಿಮಾನ ಅಪಘಾತವಾದ ನಂತರ ಒಬ್ಬ ಪುರುಷ, ಒಬ್ಬ ಮಹಿಳೆ, ಒಬ್ಬ ಬಾಲಕ ಸೇರಿ ಮೂವರು ಮೃತಪಟ್ಟಿದ್ದರು. 20 ಮಂದಿ ಗಾಯಗೊಂಡಿದ್ದರೆ, ತೀವ್ರ ಗಾಯಗೊಂಡವರು 17, ಸಾಧಾರಣ ಗಾಯಗೊಂಡವರು 9 ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ಮೂವರನ್ನು ರಕ್ಷಿಸಲಾಯಿತು.
ಪ್ರದರ್ಶನ ಯಶಸ್ವಿ:
ಇದು ಕೇವಲ ಕಲ್ಪಿತ ಪ್ರದರ್ಶನವಾಗಿದ್ದು, ಗುಜರಾತ್‌ನಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆಯಲ್ಲಿ, ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಪ್ರದರ್ಶನ ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿ ಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅಣುಕು ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ. ಕಲ್ಪಿತ ಪ್ರದರ್ಶನ ಯಶಸ್ವಿಯಾಗಿ ಜರುಗಿತು.
ಯಾವುದೇ ವಿಪತ್ತು ಸಂಭವಿಸಿದಾಗ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು, ಭಾಗಿದಾರರು ಸರ್ವ ಸನ್ನದ್ಧರಾಗಿರಬೇಕು, ಇಲಾಖೆ ಹಾಗೂ ಭಾಗಿದಾರರ ಸಮನ್ವಯತೆ, ಸಹಕಾರದಿಂದ ವಿಪತ್ತು ನಿರ್ವಹಣೆ ಸಾಧ್ಯ, ಕಲ್ಪಿತ ಪ್ರದರ್ಶನ ಏರ್ಪಡಿಸುವುದರಿಂದ ಎಲ್ಲರೂ ಘಟನೆ ನಡೆದಾಗ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಡಾ.ಕೆ.ಎನ್.ಅನುರಾಧಾ ಜಿಲ್ಲಾಧಿಕಾರಿ