ದೇವನಹಳ್ಳಿಯಲ್ಲಿ ಆಯೋಜಿಸಿದ್ದ Cricket ವಹ್ನಿಕುಲ ತಿಗಳ ಪ್ರೀಮಿಯರ್ ಲೀಗ್ ಕ್ರಿಕೆಟ್ ವಿಜೇತ ತಂಡಕ್ಕೆ ಶ್ರೀ ಕೃಷ್ಣಪಾಂಡವ ತಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್ ಬಹುಮಾನ ವಿತರಿಸಿದರು.
- ವಹ್ನಿಕುಲ ಕ್ಷತ್ರಿಯ ತಿಗಳರ ಜನಾಂಗದ ಮುಖಂಡ ಡಾ. ಎನ್. ಚಂದ್ರಶೇಖರ್ ಸಲಹೆ
ದೇವನಹಳ್ಳಿ: ಸೋಲು &ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. Cricket ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಒಬ್ಬರು ಸೋತರೆ ಇನ್ನೊಬ್ಬರು ಗೆಲ್ಲಲು ಸಾಧ್ಯ ಎಂದು ವಹ್ನಿಕುಲ ಕ್ಷತ್ರಿಯ ತಿಗಳರ ಜನಾಂಗದ ಮುಖಂಡ ಡಾ. ಎನ್. ಚಂದ್ರಶೇಖರ್ ಹೇಳಿದರು.
ಪಟ್ಟಣದಲ್ಲಿ ವಹ್ನಿಕುಲ ತಿಗಳ ಪ್ರೀಮಿಯರ್ ಲೀಗ್ ತಾಲೂಕು ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರಿಂದ ಸುಸ್ಥಿರ ಆರೋಗ್ಯ ಇರುತ್ತದೆ. ಗ್ರಾಮೀಣ ಭಾಗಗಳಲ್ಲಿ ಪಂದ್ಯಾವಳಿ ಆಯೋಜಿಸುವುದರಿಂದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವಂತಾಗುತ್ತದೆ ಎಂದರು.
ಮೌಕ್ತಿಕಾಂಭ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಎಸ್.ಆರ್.ವಿಜಯಕುಮಾರ್ ಮಾತನಾಡಿ, ತಾಲೂಕಿನಿಂದ ಒಟ್ಟು 10 ತಂಡಗಳ ಪೈಕಿ ಅಂತಿಮವಾಗಿ ದೇವನಹಳ್ಳಿಯ ವಹ್ನಿರಾಯ ವಾರಿಯರ್ಸ್ ಹಾಗೂ ಧರ್ಮರಾಯಸ್ವಾಮಿ ವಾರಿಯರ್ಸ್ ಯುವಕರ ತಂಡ ಫೈನಲ್ನಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನವನ್ನು ಪಡೆದು ವಿಜೇತರಾಗಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವೀತಿಯ 25 ಸಾವಿರ ನಗದು ಮತ್ತು ಆಕರ್ಷಕ ಟೋಫಿ ನೀಡಿ ಪ್ರೋತ್ಸಾಹಿಸಲಾಗಿದೆ ಎಂದರು.
ಪುರಸಭೆ ಸದಸ್ಯ ಎಸ್.ಸಿ.ಚಂದ್ರಪ್ಪ, ಶ್ರೀ ಕೃಷ್ಣಪಾಂಡವ ತಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್, ತಿಗಳರ ಸಂಘದ ತಾಲೂಕು ಅಧ್ಯಕ್ಷ ವಿ.ಗೋಪಾಲಕೃಷ್ಣ, ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ನಾಗರಾಜ್, ಮಾಜಿ ಅಧ್ಯಕ್ಷ ಎಸ್.ಆರ್. ವಿಜಯಕುಮಾರ್, ಯುವಕ ಸಂಘದ ನವೀನ್, ಡಿ.ಸಿ.ಕಿಶೋರ, ವಸಂತ, ಡಿ.ಸಿ.ರಂಜನ್ ಇದ್ದರು.
ವಹ್ನಿಕುಲ ಕ್ಷತ್ರೀಯ ತಿಗಳ ಮಹಾಸಭಾದ ರಾಜ್ಯಾಧ್ಯಕ್ಷ ಸುಬ್ಬಣ್ಣ, ರಾಜ್ಯ ವಹ್ನಿಕುಲಕ್ಷತ್ರಿಯ ತಿಗಳರ ಸಂಘದ ಉಪಾಧ್ಯಕ್ಷ ವೈ.ಎಂ. ಶಾಮಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್, ನಿರ್ದೇಶಕ ಮುನಿವೀರಣ್ಣ ಇದ್ದರು.