online probelems 
ಬೆಂಗಳೂರು ಗ್ರಾಮಾಂತರ

ಆನ್‌ಲೈನ್‌ನಲ್ಲಿ ಆಮಿಷಗಳಿಗೆ ಬಲಿಯಾಗದಿರಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಅಂತರ್ಜಾಲವನ್ನು ಬಳಸುತ್ತೇವೆ, ಅದರಿಂದ ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯವೂ ಇದೆ. ಆನ್‌ಲೈನ್‌ನಲ್ಲಿ ತೋರುವ ಆಸೆ ಆಮಿಷಗಳಿಗೆ ಯಾರೂ ಬಲಿಯಾಗದಿರಿ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಿವಕುಮಾರ್ ಸಲಹೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ಆಯೋಜಿಸಿದ್ದ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಇಂಟರ್ನೆಟ್ ಬಳಕೆಯಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನ್‌ಲೈನ್ ಸ್ಕ್ಯಾಮ್ ನಡೆಯುತ್ತಿವೆ, ಬ್ಲ್ಯಾಕ್‌ಮೇಲ್‌ಗಳು ನಡೆಯುತ್ತಿವೆ. ಆನ್‌ಲೈನ್ ಗೇಮ್ ರೀತಿಯ ಚಟಗಳಿಗೆ ಇಂದಿನ ಯುವ ಜನತೆ ಮೋಸ ಹೋಗುತ್ತಿದ್ಧಾರೆ ಎಂದು ಎಚ್ಚರಿಕೆ ನೀಡಿದರು. ರೀಲ್ಸ್ ನೋಡುವುದುದರಿಂದ ಸಮಯ ವ್ಯರ್ಥ್ಯ ಮಾಡುತ್ತಿದ್ಧಾರೆ. ಅಂರ್ಜಾಲವನ್ನು ವೃತ್ತಿ ಜೀವನಕ್ಕೆ ಮತ್ತು ವೈಯಕ್ತಿಕ ಜೀವನಕ್ಕೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರ ಬಳಸಿಕೊಳ್ಳಿ ಎಂದು ಹೇಳಿದರು.
ಜಾಗೃತಿ ಮೂಡಿಸುವುದು ಅವಶ್ಯ:
ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು-ಎಐಯ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಗಮನವಿರಬೇಕು ಎಂದು ಶಿವಕುಮಾರ್ ಹೇಳಿದರು. ಇಂಟರ್ನೆಟ್ ಬಳಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪಾಯಗಳು, ವಂಚನೆಗಳು ಹೆಚ್ಚುತ್ತಿವೆ. ಕೃತಕ ಬುದ್ಧಿಮತೆ(ಎಐ) ಜವಾಬ್ದಾರಿಯುತ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಸೈಬರ್ ದೂರು ನೀಡಿ:
ಅಂತರ್ಜಾಲದ ಮೂಲಕ ವಂಚನೆ ಪ್ರಕರಣಗಳು, ಬೆದರಿಕೆಗಳು ಬರುತ್ತಿವೆ, ಇಂಥ ಸನ್ನಿವೇಶದಲ್ಲಿ ಯಾರೂ ಎದೆಗುಂದಬಾರದು ತಕ್ಷಣ ಸೈಬರ್ ವಿಭಾಗಕ್ಕೆ ಮಾಹಿತಿ ನೀಡಬೇಕು. ಇದರಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರಾಮಕೃಷ್ಣ ಹೇಳಿದರು. ಇಂಟರ್‌ನೆಟ್ ಬಳಸುವಾಗಿ ಜವಾಬ್ದಾರಿ ಇರಲಿ ಅನಗತ್ಯವಾಗಿ ಬರುವ ಎಫಿಕ್ ಪೈಲ್‌ಗಳನ್ನು ಸುಖಾಸುಮ್ಮನೆ ಓಪನ್ ಮಾಡಬಾರದು, ಅನಾಮಧೇಯ ವಾಟ್ಸಾಪ್ ಕರೆಗಳು, ವಾಟ್ಸಾಪ್ ಸಂದೇಶಗಳ ಬಗ್ಗೆ ಎಚ್ಚರವಿರಬೇಕು. ಇಂಥ ಅನುಮಾನ ಬಂದರೆ ತಕ್ಷಣ ಸೈಬರ್ ಪೊಲೀಸರಿಗೆ ದೂರು ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಡಳಿತ ಸಿಬ್ಬಂದಿ ಭಾಗಿ:
ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಜಿಲ್ಲಾಡಳಿತ ಸಿಬ್ಬಂದಿ ಪಾಲ್ಗೊಂಡಿದ್ದರು. ಹಲವು ಸಿಬ್ಬಂದಿ ಅಂಜರ್ತಾಜದಲ್ಲಿನ ವಂಚನೆ ಪ್ರಕರಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡರು. ಕೆಲವು ಸಿಬ್ಬಂದಿ ವಂಚನೆ ಆಗಿರುವ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿದರು. ಇದೆಲ್ಲವೂ ಎಲ್ಲರಿಗೂ ಎಚ್ಚರಿಕೆಯಾಗಬೇಕು ಜಾಗೃತರಾಗಬೇಕು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.