ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಕೆನಡಾದಲ್ಲಿ ಗುಂಡಿನ ದಾಳಿಗೆ ಬಲಿಯಾದ ಕನ್ನಡಿಗ ಚಂದನ್‌ಕುಮಾರ್ ಪಾರ್ಥಿವ ಶರೀರವನ್ನು ತರಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದ್ದು, ಶನಿವಾರದ ಹೊತ್ತಿಗೆ ಪಾರ್ಥಿವ ಶರೀರ ತಲುಪುವ ನಿರೀಕ್ಷೆ ಇದೆ ಎಂದು ಗೃಹಸಚಿವ ಡಾ.ಜಿ.ಎಸ್.ಪರಮೇಶ್ವರ್ ಭರವಸೆ ನೀಡಿದರು.
ಚಂದನ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಪಾಲಕರೊಂದಿಗೆ ಕೆಲಕಾಲ ಚರ್ಚೆ ನಡೆಸಿ ಸಾಂತ್ವಾನ ಹೇಳಿದರು. ಸರ್ಕಾರದಿಂದ ಎಲ್ಲ ನೆರವು ನೀಡುತ್ತೇವೆ, ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಸಹಯೋಗದಲ್ಲಿ ಕೆನಡಾ ಸರ್ಕಾರವನ್ನು ಸಂಪರ್ಕಿಸಲಾಗಿದೆ. ಡಿಸಿ ಹಾಗೂ ಎಸ್ಪಿಗೆ ಸೂಚನೆ ನೀಡಿದ್ದೇನೆ, ಅವರು ಅಲ್ಲಿಂದ ಪಾರ್ಥೀವ ಶರೀರ ತರಲು ಕ್ರಮ ವಹಿಸುತ್ತಾರೆ ಎಂದರು.
ನಿವತ್ತ ಶಿಕ್ಷಕ ನಂದಕುವಾರ್ ಪುತ್ರ ಚಂದನ್ ಕೆನಡಾದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ವಾಡುತ್ತಿದ್ದರು. ಕೆನಡಾದಲ್ಲಿ ಬಹುಮುಖಿ ಪ್ರತಿಭೆಯಾಗಿದ್ದು, ವಿಶೇಷವಾಗಿ ಕನ್ನಡಿಗರಿಗೆ ಸಹಾಯಕ್ಕೆ ನಿಲ್ಲುತ್ತಿದ್ದ ಆತನ ಸ್ನೇಹಿತರ ಸಂಪರ್ಕ ವಾಡಿ ವಾತನಾಡಿದ್ದೇನೆ, ಅವರ ಪಾರ್ಥೀವ ಶರೀರವನ್ನು ಬುಧವಾರ ಅಲ್ಲಿನ ಸ್ನೇಹಿತರಿಗೆ ನೀಡಲಿದ್ದಾರೆ ಎಂದು ಹೇಳಿದರು.
ಭಾರತ ಸರ್ಕಾರದಿಂದ ನಮ್ಮವರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಮನವಿ ನೀಡಲಾಗುವುದು. ಅಲ್ಲಿನ ಸರ್ಕಾರ ಈಗಾಗಲೆ ತನಿಖೆಗೆ ಆದೇಶ ವಾಡಿದೆ, ಅವರು ತನಿಖೆ ವಾಡಿ ಭಾರತದ ರಾಯಭಾರಿ ಕಚೇರಿಗೆ ವರದಿ ನೀಡಲಿದ್ದಾರೆ ಎಂದು ಹೇಳಿದರು.
ಗಹ ಸಚಿವರ ಜತೆ ಬಂದಿದ್ದ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಚಂದನ್ ಪಾರ್ಥಿವ ಶರೀರ ತಗಲುವ ವೆಚ್ಚಕ್ಕೆಂದು 10 ಲಕ್ಷ ರೂ.ನೀಡುವುದಾಗಿ ತಿಳಿಸಿದರು.
ಚಂದನ್ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದ, ಕನ್ನಡಿಗರಷ್ಟೆ ಅಲ್ಲ ಭಾರತೀಯರು ಯಾರೇ ಆಗಿದ್ದರು, ಸಹಾಯ ವಾಡುತ್ತಿದ್ದ ಆತನ ಕೊಲೆ ನಂಬಲು ಆಗುತ್ತಿಲ್ಲ ಎರಡು ದಿನದ ಹಿಂದಷ್ಟೇ ಆತನನ್ನು ಭೇಟಿಯಾಗಿದ್ದೆ ಭಾರತಕ್ಕೆ ಬರುವಷ್ಟರಲ್ಲಿ ಆತನ ಸಾವಿ ಸುದ್ದಿ ಕೇಳಿ ಆಘಾತವಾಗಿದೆ ಎಂದು ಕೆನಡಾದಿಂದ ಮರಳಿರುವ ಚಂದನ್ ಸ್ನೇಹಿತ ಕಿರಣ್ ಆಘಾತ ವ್ಯಕ್ತಪಡಿಸಿದರು.
ಪೋನ್ ಮೂಲಕ ಎಚ್‌ಡಿಕೆ ಸಾಂತ್ವಾನ:
ವಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಕೇಂದ್ರ ಸಚಿವ ಎಚ್.ಡಿ.ಕುವಾರಸ್ವಾಮಿಗೆ ಕರೆ ವಾಡಿ ಚಂದನ್ ತಂದೆ ಜತೆಗೆ ಸಂವಹನ ಮಾಡಿಸಿದರು ಕುವಾರಸ್ವಾಮಿ ಫೋನ್ ಮೂಲಕ ಸಾಂತ್ವನ ಹೇಳಿ ಕೆನಡಾದಿಂದ ಮತ ದೇಹ ತರಲು ಎಲ್ಲ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಸಂಸದ ಡಾ.ಕೆ.ಸುಧಾಕರ್ ಪಾರ್ಥೀವ ಶರೀರ ತರಲು ವಿದೇಶಾಂಗ ಸಚಿವಾಲಯಕ್ಕೆ ಕರೆ ವಾಡಿ ವಾತನಾಡಿದ್ದಾರೆ, ಯಾವುದೇ ಸಹಾಯ ಬೇಕಾದರೂ ಸಂಪರ್ಕಿಸಲು ತಿಳಿಸಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.
ಎನ್‌ಡಿಎ ಅಧ್ಯಕ್ಷ ಎಂ.ಕೆ.ನಾಗರಾಜು, ವಾಜಿ ಸದಸ್ಯ ಪ್ರಕಾಶ್‌ಬಾಬು, ಬ್ಲಾಕ್ ಕಾಂಗ್ರೆಸ್ ವಾಜಿ ಅಧ್ಯಕ್ಷ ಜಗದೀಶ್, ಜಿಪಂ ವಾಜಿ ಸದಸ್ಯ ಟಿ.ಆರ್.ರಾಜು, ರಂಗಸ್ವಾಮಿ, ಆರ‌್ಯ ವೈಶ್ಯ ಸಂದ ಅಧ್ಯಕ್ಷ ಆರ್.ಎಸ್.ಅನಿಲ್‌ಕುವಾರ್, ಎಸ್.ಮಂಜುನಾಥ್, ಉದಯಕುವಾರ್ ಮೊದಲಿಯಾರ್, ಅಶ್ವತ್ಥ್ ಮತ್ತಿತರು ಭೇಟಿ ನೀಡಿ ಚಂದನ್ ಪಾಲಕರಿಗೆ ಸಾಂತ್ವಾನ ಹೇಳಿದರು.