ಸರ್ಜಾಪುರ ಕ್ರೀಡಾಂಗಣದಲ್ಲಿ ಪಿಡಿಒ ಸುಭಾನ್ ಖಾನ್ ಧ್ವಜವಂದನೆ ಸ್ವೀಕರಿಸಿದರು. ಸರ್ಜಾಪುರ ಗ್ರಾಪಂ ಮಾಜಿ ಅಧ್ಯ ಎಸ್.ಎಂ.ಶ್ರೀನಿವಾಸ್, ಅಂಬೇಡ್ಕರ್ ಸೇವಾ ಟ್ರಸ್ಟ್ ಅಧ್ಯ ವೈ.ಶ್ರೀರಾಮುಲು, ಸಂಸ್ಥಾಪಕ ಅಧ್ಯ ಜಿ.ಮುನಿಯಪ್ಪ, ಜಿಪಂ ಮಾಜಿ ಸದಸ್ಯ ಜಿ.ನಾಗರಾಜು, ಎಸ್ಡಿಎಂಸಿ ಅಧ್ಯ ಗುರುಶಾಂತಪ್ಪ ಇತರರು ಇದ್ದರು.
- ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡೋಣ
ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡೋಣ
ಸರ್ಜಾಪುರ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಎಲ್ಲರೂಸ್ವಾತಂತ್ರ್ಯದ ಮೌಲ್ಯವನ್ನು ಅರಿತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸರ್ಜಾಪುರ ಪಿಡಿಒ ಸುಭಾನ್ ಖಾನ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಯುವಕರು ಸಾಮಾಜಿಕ ಜವಾಬ್ದಾರಿ, ದೇಶಭಕ್ತಿ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವಕರು ಉತ್ತಮ ಪ್ರಜೆಗಳಾಗಿ ರೂಪುಗೊಂಡಾಗ ಮಾತ್ರ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಸಾಧ್ಯ ಎಂದ ಪಿಡಿಒ, ಸ್ವಚ್ಛ ಭಾರತ, ಡಿಜಿಟಲ್
ಭಾರತ, ಆತ್ಮನಿರ್ಭರ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಆಡಳಿತಾಧಿಕಾರಿ ಹರೀಶ್ ಮಾತನಾಡಿ, ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಶಿಣವೇ ದೇಶದ ಅಭಿವೃದ್ಧಿಯ ಮೂಲ ಅಡಿಪಾಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗುರಿಯನ್ನು ಸಾಧಿಸಲು ಶ್ರಮಿಸಬೇಕು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಸಮಾಜ ಸೇವಕ ಟಿವಿ ಬಾಬು, ಎನ್.ವಿ.ಟಿ ಸಂಸ್ಥೆಯ ಮುಖ್ಯಸ್ಥ ವಿವೇಕ್ ಗರ್ಗ್ ಅವರ ಪುತ್ರಿ ಸಮೀರಾ ಆನೇಕಲ್ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 10 ಸಾವಿರಕ್ಕೂ ಅಧಿಕ ನೋಟ್ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಗ್ರಾಪಂ ಮಾಜಿ ಸದಸ್ಯೆ ಚಿನ್ನು ರಾಮಸ್ವಾಮಿ, ಕಾರ್ಯದರ್ಶಿ ಕೆ.ನಂಜಾರೆಡ್ಡಿ. ಕರವಸೂಲಿಗಾರರಾದ ಎಂ.ಮುನಿರಾಜು, ಚಿನ್ನಪ್ಪ, ಮೇಸಿ ಮುನಿಯಪ್ಪ, ಸಂತೋಷ್, ಲಕ್ಷ್ಮಣ್ ಇದ್ದರು.